ETV Bharat / bharat

32 ವರ್ಷದಿಂದ ಸ್ನಾನ ಮಾಡದ ಚೋಟು ಬಾಬಾ; ತಲೆ ಮೇಲೆ ಧನವಾಲೆ ಬಾಬಾರಿಂದ ಬಾರ್ಲಿ ಕೊಯ್ಲು! - MAHA KUMBH MELA SADHUS

ಪ್ರಯಾಗ್​ರಾಜ್​ ಮಹಾ ಕುಂಭಮೇಳಕ್ಕೆ ದಿನಗಣನೆ ಆರಂಭವಾಗಿದೆ. ಇಲ್ಲಿಗೆ ಆಗಮಿಸಿರುವ ಬಾಬಾಗಳು, ಅಘೋರಿಗಳು ಅವರದ್ದೇ ಕಾರ್ಯಗಳಿಂದ ಗಮನ ಸೆಳೆಯುತ್ತಿದ್ದಾರೆ.

ಧನವಾಲೆ ಬಾಬಾ ಮತ್ತು ಚೋಟು ಬಾಬಾ
ಧನವಾಲೆ ಬಾಬಾ ಮತ್ತು ಚೋಟು ಬಾಬಾ (ETV Bharat)
author img

By ETV Bharat Karnataka Team

Published : Jan 4, 2025, 1:41 PM IST

ಪ್ರಯಾಗರಾಜ್‌ (ಉತ್ತರ ಪ್ರದೇಶ) : ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾ ಕುಂಭಮೇಳಕ್ಕೆ ಸಕಲ ಸಿದ್ಧತೆ ಮಾಡಲಾಗುತ್ತಿದೆ. ಪುಣ್ಯಸ್ನಾನಕ್ಕಾಗಿ ದೇಶಾದ್ಯಂತ ಅನೇಕ ಸಾಧುಗಳು ಮತ್ತು ಅಘೋರರು ಈಗಾಗಲೇ ಪ್ರಯಾಗ್​ರಾಜ್ ತಲುಪಿದ್ದಾರೆ. ಇವರಲ್ಲಿ 32 ವರ್ಷಗಳಿಂದ ಸ್ನಾನ ಮಾಡದ ಬಾಬಾ ಅವರ ತಲೆಯ ಮೇಲೆ ಬಾರ್ಲಿ ಬೆಳೆಯನ್ನ ಬೆಳೆಸುತ್ತಿರುವ ಧನವಾಲೆ ಬಾಬಾ ವಿಶೇಷ ಆಕರ್ಷಣೆಯಾಗಿದ್ದಾರೆ.

ಬಾಬಾ ತಲೆ ಮೇಲೆ ಬಾರ್ಲಿ ಬೆಳೆ: ಪ್ರಯಾಗ್​ರಾಜ್​ಗೆ ಬಂದಿರುವ ಧನವಾಲೆ ಬಾಬಾ ತಮ್ಮ ವಿಶೇಷ ಕಾರ್ಯದಿಂದ ಕುಂಭಮೇಳದ ಸ್ಥಳದಲ್ಲಿ ಗಮನ ಸೆಳೆಯುತ್ತಿದ್ದಾರೆ. ಅವರು ತಮ್ಮ ತಲೆಯ ಮೇಲೆ ಬಾರ್ಲಿ ಬೆಳೆಯನ್ನು ಕೊಯ್ಲು ಮಾಡುತ್ತಿದ್ದಾರೆ. ಇದನ್ನು ಅವರು ಖ್ಯಾತಿಗೋ ಅಥವಾ ಹಣಕ್ಕಾಗಿಯೋ ಮಾಡುತ್ತಿಲ್ಲ. ಇದರ ಹಿಂದೆ ಸದುದ್ದೇಶವಿದೆ.

ಧನವಾಲೆ ಬಾಬಾ ಅವರ ನಿಜವಾದ ಹೆಸರು ಅಮರ್ ಜೀತ್. ಅವರು ಕಳೆದ ಐದು ವರ್ಷಗಳಿಂದ ತಲೆಯ ಮೇಲೆ ಬಾರ್ಲಿಯನ್ನು ಬೆಳೆಯುತ್ತಿದ್ದಾರೆ. ಎಲ್ಲ ಬೆಳೆಗಳಿಗೆ ರಾಸಾಯನಿಕ ಸಿಂಪಡಣೆ ಮಾಡುವುದು ಸಾಮಾನ್ಯ. ಇದಿಲ್ಲದೆ, ಯಾವುದೇ ಬೆಳೆ ಕೊಯ್ಲು ಮಾಡಲು ಸಾಧ್ಯವಿಲ್ಲ. ಇಂತಹ ಆಹಾರ ಪದಾರ್ಥಗಳಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನೈಸರ್ಗಿಕವಾಗಿ ಬೆಳೆದ ಬೆಳೆಗಳನ್ನು ಸೇವಿಸುವ ಬಗ್ಗೆ ಜಾಗೃತಿ ಮೂಡಿಸಲು ಬಾಬಾ ಈ ರೀತಿ ಮಾಡುತ್ತಿರುವುದಾಗಿ ಅವರು ಹೇಳುತ್ತಾರೆ.

"ಇದು 22 ದಿನಗಳ ಸಸ್ಯ. ನಮ್ಮ ಜಗತ್ತು ಹಸಿರಾಗಲಿ ಮತ್ತು ನಮ್ಮ ದೇಶದ ತ್ರಿವರ್ಣ ಧ್ವಜದ ವೈಭವವು ಇನ್ನೂ ಎತ್ತರಕ್ಕೆ ಏರಲಿ ಎಂದು ಬಯಸಿ ನಾನು ಇದನ್ನು ಮಾಡುತ್ತಿದ್ದೇನೆ. ಈ ರೀತಿ ನಾನು ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ. ಹಸಿರಿಗಾಗಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ. ಹಸುವಿನ ಸಗಣಿ ಮತ್ತು ಎಲೆಯಿಂದ ನಿರ್ಮಿತವಾದ ನೈಸರ್ಗಿಕ ಗೊಬ್ಬರಗಳನ್ನು ಬಳಸಿ ಎಂದು ಧನವಾಲೆ ಬಾಬಾ ಸಲಹೆ ನೀಡುತ್ತಾರೆ.

32 ವರ್ಷದಿಂದ ಸ್ನಾನವಿಲ್ಲ: ಈ ಮಹಾಕುಂಭ ಮೇಳದಲ್ಲಿ ಮತ್ತೊಬ್ಬ ಬಾಬಾ ಅವರ ಶಪಥವು ಅಚ್ಚರಿಗೆ ಕಾರಣವಾಗಿದೆ. ಚೋಟು ಬಾಬಾ ಎಂಬವರು ಕಳೆದ 32 ವರ್ಷಗಳಿಂದ ಸ್ನಾನ ಮಾಡಿಲ್ಲವಂತೆ. ಅವರು ಯಾವುದೋ ಒಂದು ಇಷ್ಟಾರ್ಥಕ್ಕಾಗಿ ಈ ರೀತಿಯ ಪ್ರತಿಜ್ಞೆ ಮಾಡಿದ್ದಾರೆ. ಚೋಟು ಬಾಬಾ ಅವರ ನಿಜವಾದ ಹೆಸರು ಗಂಗಾಪುರಿ ಮಹಾರಾಜ್. ಅಸ್ಸೋಂನ ಕಾಮಾಖ್ಯ ಪೀಠಕ್ಕೆ ಸೇರಿದವರು. 3 ಅಡಿ 8 ಇಂಚು ಎತ್ತರವಿರುವ ಅವರಿಗೆ 57 ವರ್ಷ ವಯಸ್ಸು.

ಮಹಾ ಕುಂಭಮೇಳವು ನಮ್ಮ ಆತ್ಮ ಮತ್ತು ಪರಮಾತ್ಮನ ಸಂಪರ್ಕದ ವೇದಿಕೆಯಾಗಿದೆ. ಅದಕ್ಕಾಗಿಯೇ ನಾನಿಲ್ಲಿಗೆ ಬಂದಿದ್ದೇನೆ. ನನಗೊಂದು ಆಸೆ ಇದೆ. ಅದು ಈಡೇರುವವರೆಗೆ ಸ್ನಾನ ಮಾಡಬಾರದು ಎಂದು ನಾನು ಪ್ರತಿಜ್ಞೆ ಮಾಡಿದ್ದೇನೆ. ಕಳೆದ 32 ವರ್ಷಗಳಿಂದ ಸ್ನಾನ ಮಾಡಿಲ್ಲ ಎಂದು ಚೋಟು ಬಾಬಾ ಅವರು ಹೇಳಿದ್ದಾರೆ.

ಮಹಾ ಕುಂಭಮೇಳ: ಮಹಾ ಕುಂಭಮೇಳವು 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ವರ್ಷದ ಪುಣ್ಯಸ್ನಾನವು ಪ್ರಯಾಗ್‌ರಾಜ್‌ನಲ್ಲಿ ಜನವರಿ 13 ರಿಂದ ಫೆಬ್ರವರಿ 26ರ ವರೆಗೆ ನಡೆಯಲಿದೆ. ಜನವರಿ 14 (ಮಕರ ಸಂಕ್ರಾಂತಿ), ಜನವರಿ 29 (ಮೌನಿ ಅಮಾವಾಸ್ಯೆ), ಫೆಬ್ರವರಿ 3 (ವಸಂತ ಪಂಚಮಿ) ರಂದು ಪುಣ್ಯಸ್ನಾನ ನಡೆಯುತ್ತದೆ. ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಬರುವ ಹಿನ್ನೆಲೆ ಯೋಗಿ ಸರ್ಕಾರ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಮಾಡುತ್ತಿದೆ.

ಇದನ್ನೂ ಓದಿ: 'ನನಗಾಗಿ ಐಷಾರಾಮಿ ಬಂಗಲೆ ಕಟ್ಟಿಕೊಂಡಿಲ್ಲ, ಬಡವರಿಗಾಗಿ 4 ಕೋಟಿ ಸೂರು ನಿರ್ಮಿಸಿದ್ದೇವೆ': ಕೇಜ್ರಿವಾಲ್​​ಗೆ ಮೋದಿ ಟಾಂಗ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.