ಕೆ.ಮಂಜು ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಪಕ. ಹಲವು ಸಿನಿಮಾಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಟ್ಟಿರುವ ನಿರ್ಮಾಪಕರಿಗೆ ಸಾಹಸಸಿಂಹ ವಿಷ್ಣುವರ್ಧನ್ ಅಂದ್ರೆ ಅಪಾರ ಗೌರವ. ಅದನ್ನು ಅವರು ತಮ್ಮ ಪ್ರಾಜೆಕ್ಟ್ಗಳ ಮೂಲಕವೂ ತೋರಿಸಿದ್ದಾರೆ. ಅದರ ಮತ್ತೊಂದು ಭಾಗವಾಗಿ ತಮ್ಮ ಪುತ್ರ ಶ್ರೇಯಸ್ ಅವರನ್ನು ನಾಯಕನನ್ನಾಗಿಸಿ, 'ವಿಷ್ಣು ಪ್ರಿಯ' ಶೀರ್ಷಿಕೆಯ ಚಿತ್ರವನ್ನೂ ನಿರ್ಮಿಸಿದ್ದಾರೆ. ಬಹಳ ಹಿಂದೆಯೇ ನಿರ್ಮಾಣಗೊಂಡಿರುವ ಈ ಚಿತ್ರವೀಗ ಬಿಡುಗಡೆ ಹಂತಕ್ಕೆ ಬಂದು ತಲುಪಿದೆ. ಹೌದು, 'ವಿಷ್ಣು ಪ್ರಿಯ' ಫೆಬ್ರವರಿ 21ಕ್ಕೆ ತೆರೆ ಕಾಣಲಿದೆ.
ನಾಯಕನ ಹೆಸರು ವಿಷ್ಣು, ನಾಯಕಿಯ ಹೆಸರು ಪ್ರಿಯ. ಅವರಿಬ್ಬರ ಹೆಸರೇ ಚಿತ್ರದ ಶೀರ್ಷಿಕೆಯಾಗಿದೆ. 90ರ ದಶಕದ ಪ್ರೇಮಕಥೆಯೊಂದನ್ನು ಹೇಳುವ ಈ ಚಿತ್ರಕ್ಕೆ ಮಲಯಾಳಂನ ವಿ.ಕೆ. ಪ್ರಕಾಶ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಲಯಾಳಂ, ತೆಲುಗು, ತಮಿಳಿನಲ್ಲಿ 40ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ಇವರು ರಾಷ್ಟ್ರಪ್ರಶಸ್ತಿಗೂ ಭಾಜನರಾಗಿದ್ದಾರೆ. ಕೆ. ಮಂಜು ನಿರ್ಮಾಣದ ವಿಷ್ಣು ಪ್ರಿಯ ಚಿತ್ರವೀಗ ಬಿಡುಗಡೆ ಹಂತಕ್ಕೆ ಬಂದಿದೆ.
ಬರುವ ತಿಂಗಳು ಫೆಬ್ರವರಿ 21ರಂದು ರಾಜ್ಯಾದ್ಯಂತ ತೆರೆಕಾಣಲು ಸಿನಿಮಾ ಸಜ್ಜಾಗಿದೆ. ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ಈ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ತೆಲುಗಿನ ಸಂಗೀತ ನಿರ್ದೇಶಕ ಗೋಪಿಸುಂದರ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.
ಇದನ್ನೂ ಓದಿ: ನಡೆಯೇ ನುಡಿಯಾಗಲು ಅವಕಾಶ ಮಾಡಿಕೊಟ್ಟ ಐಶ್ವರ್ಯಾ - ಅಭಿಷೇಕ್: ಬಚ್ಚನ್ಸ್ ವಿಡಿಯೋ ನೋಡಿ
ಧಾರವಾಡ ಮೂಲದ ಸಿಂಧುಶ್ರೀ ಈ ಚಿತ್ರದ ಮೂಲ ಕಥೆಗಾರರು. ಅವರ ಕಥೆಯ ಒಂದು ಲೈನ್ ತೆಗೆದುಕೊಂಡು ಈ ಚಿತ್ರದ ಸ್ಕ್ರಿಪ್ಟ್ ಮಾಡಿಕೊಂಡಿರುವುದಾಗಿ ನಿರ್ಮಾಪಕರಾದ ಕೆ. ಮಂಜು ಅವರೇ ಹೇಳಿದ್ದಾರೆ. ವಿ.ಕೆ.ಪ್ರಕಾಶ್, ಗೋಪಿಸುಂದರ್, ನಾಗೇಂದ್ರ ಪ್ರಸಾದ್ ಅವರಂಥ ತಂತ್ರಜ್ಞರೊಂದಿಗೆ ಸೇರಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಜೀವನದಲ್ಲಿ ಪ್ರೀತಿ ಅನ್ನೋದು ಎಷ್ಟು ಮುಖ್ಯ ಅನ್ನೋ ವಿಚಾರವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ: ಸಂಧ್ಯಾ ಥಿಯೇಟರ್ ಪ್ರಕರಣ: ನಟ ಅಲ್ಲು ಅರ್ಜುನ್ಗೆ ಜಾಮೀನು ಮಂಜೂರು
ಫ್ಯಾಮಿಲಿ ವ್ಯಾಲ್ಯೂಸ್‌ಗೆ ಹೆಚ್ಚಿನ ಮಹತ್ವವಿದ್ದು, ಪ್ರೀತಿಗಾಗಿ ಏನು ಬೇಕಾದರೂ ಮಾಡಲು ರೆಡಿಯಾಗುವ ಯುವಕನ ಜೀವನದಲ್ಲಿ ಏನೇನೆಲ್ಲ ಆಗಿ ಹೋಯಿತು ಎಂದು ಈ ಚಿತ್ರ ಹೇಳಲಿದೆ. ನಾಯಕನ ತಂದೆಯಾಗಿ ಅಚ್ಯುತ್ ಕುಮಾರ್ ಹಾಗೂ ನಾಯಕಿಯ ತಂದೆಯಾಗಿ ಸುಚೇಂದ್ರ ಪ್ರಸಾದ್ ಅವರು ಅಭಿನಯಿಸಿದ್ದಾರೆ. ನಿರ್ದೇಶಕ ರವಿ ಶ್ರೀವತ್ಸ ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ವಿನೋದ್ ಭಾರತಿ ಅವರ ಕ್ಯಾಮರಾ ಕೈಚಳಕ ಮತ್ತು ಸುರೇಶ್ ಅರಸ್ ಅವರ ಸಂಕಲನ ಈ ಸಿನಿಮಾಗಿದೆ. ಬರುವ ತಿಂಗಳು ತೆರೆಗಪ್ಪಳಿಸಲಿರುವ ಪ್ರೇಮಕಥೆ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ.