ETV Bharat / state

ದಾವಣಗೆರೆ: ಹೊಸ ವರ್ಷಾಚರಣೆ ಬೆನ್ನಲ್ಲೇ ಅಪಘಾತ; ಮನೆಗೆ ಆಧಾರವಾಗಿದ್ದ ಯುವಕ ಸಾವು - YOUTH DIED IN ACCIDENT

ಹೊಸ ವರ್ಷದ ಸಂಭ್ರಮಾಚರಣೆ ಬಳಿಕ ಸಂಭವಿಸಿದ ಅಪಘಾತದಲ್ಲಿ ಬೈಕ್​ ಸವಾರನೊಬ್ಬ ಸ್ಥಳದಲ್ಲೇ ಅಸುನೀಗಿರುವ ಘಟನೆ ನಡೆದಿದೆ.

DAVANAGERE  NEW YEAR CELEBRATION  BIKE CAR ACCIDENT  ದಾವಣಗೆರೆ ಬೈಕ್​ ಅಪಘಾತ
ಅಪಘಾತಕ್ಕೀಡಾದ ಬೈಕ್, ಕಾರ್ತಿಕ್ (ETV Bharat)
author img

By ETV Bharat Karnataka Team

Published : Jan 1, 2025, 7:48 PM IST

ದಾವಣಗೆರೆ: ಹೊಸ ವರ್ಷಾಚರಣೆ ವೇಳೆ ಸಂಭವಿಸಿದ ಅಪಘಾತದಲ್ಲಿ ಮನೆಗೆ ಆಧಾರವಾಗಿದ್ದ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಪಾರ್ಟಿ ಮಾಡಿ ಮನೆಗೆ ತೆರಳುತ್ತಿದ್ದ ಯುವಕನ ಬೈಕ್ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ಆತ ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ನಗರದ ನೂತನ್ ಕಾಲೇಜು ಮುಂಭಾಗ ಮಂಗಳವಾರ ತಡರಾತ್ರಿ 1 ಗಂಟೆಗೆ ಸಂಭವಿಸಿದೆ.

ಎದುರಿನಿಂದ ಬಂದ ಕಾರು ಹಾಗೂ ಬೈಕ್​ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ದಾವಣಗೆರೆಯ ನಿಟ್ಟುವಳ್ಳಿಯ ಯುವಕ ಕಾರ್ತಿಕ್ (19) ಸ್ಥಳದಲ್ಲೇ ಸಾವನಪ್ಪಿದ್ದಾನೆ. ಬೈಕ್ ಹಿಂಬದಿ ಸವಾರ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಡಿಕ್ಕಿಯಾಗುವುದಕ್ಕೂ ಕೆಲ ಸೆಕೆಂಡ್​ ಮುನ್ನದ ದೃಶ್ಯವನ್ನು ಹಿಂಬದಿ ಸವಾರನ ಮೊಬೈಲ್​ನಲ್ಲಿ ಸೆರೆಹಿಡಿಯಲಾಗಿದೆ.

ಇದನ್ನೂ ಓದಿ: ಹೊಸ ವರ್ಷಾಚರಣೆ ಮುಗಿಸಿ ಹಿಂತಿರುಗುವಾಗ ಅಪಘಾತ: ಸ್ಥಳದಲ್ಲೇ ಇಬ್ಬರು ಸಾವು

ಕುಟುಂಬಕ್ಕೆ ಆಧಾರವಾಗಿದ್ದ ಕಾರ್ತಿಕ್: ಒಬ್ಬನೇ ಮಗನಾಗಿದ್ದ ಕಾರ್ತಿಕ್​ನನ್ನು ಅಪಘಾತದಲ್ಲಿ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪಿಯುಸಿ ಮುಗಿಸಿ ಕೆಲಸಕ್ಕೆ ಹೋಗುತ್ತಿದ್ದ ಕಾರ್ತಿಕ್, ಸ್ನೇಹಿತರ ಜೊತೆ ನ್ಯೂ ಇಯರ್ ಆಚರಣೆ ಮಾಡಲು ಹೋಗಿ ದಾರುಣ ಸಾವು ಕಂಡಿರುವುದು ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.

ಘಟನೆ ಬಗ್ಗೆ ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ : ಹೊಸ ವರ್ಷಾಚರಣೆ ಮುಗಿಸಿ ಬರುವಾಗ ಅಪಘಾತ, ಬೈಕ್ ಸವಾರ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.