ETV Bharat / state

ಕುಂಭಮೇಳಕ್ಕೆ ಹುಬ್ಬಳ್ಳಿ-ವಾರಾಣಸಿ ನಡುವೆ 3 ಟ್ರಿಪ್ ವಿಶೇಷ ಎಕ್ಸ್​ಪ್ರೆಸ್ ರೈಲು ಸಂಚಾರ - SPECIAL TRAIN

ಹುಬ್ಬಳ್ಳಿ ಮತ್ತು ವಾರಾಣಸಿ ನಿಲ್ದಾಣಗಳ ನಡುವೆ ಮೂರು ಟ್ರಿಪ್ ವಿಶೇಷ ರೈಲು ಸಂಚಾರ ಮಾಡಲಿದ್ದು, ಅದರ ಮಾಹಿತಿ ಇಲ್ಲಿದೆ.

SPECIAL TRAIN
ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ (ETV Bharat)
author img

By ETV Bharat Karnataka Team

Published : Feb 4, 2025, 7:37 PM IST

ಹುಬ್ಬಳ್ಳಿ: ಕುಂಭಮೇಳದ ವೇಳೆ ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣ (ಎಸ್‌ಎಸ್‌ಎಸ್) ಮತ್ತು ಉತ್ತರ ಪ್ರದೇಶದ ವಾರಾಣಸಿ ನಿಲ್ದಾಣಗಳ ನಡುವೆ 3 ಟ್ರಿಪ್ ವಿಶೇಷ ಎಕ್ಸ್​ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ವಿವರಗಳು ಈ ಕೆಳಗಿನಂತಿವೆ:

ಹುಬ್ಬಳ್ಳಿ - ವಾರಾಣಸಿ ನಿಲ್ದಾಣಗಳ ನಡುವೆ 3 ಟ್ರಿಪ್ ವಿಶೇಷ ರೈಲು (07383/84) ಸಂಚಾರ

ರೈಲು ಸಂಖ್ಯೆ 07383 ಎಸ್‌ಎಸ್‌ಎಸ್ ಹುಬ್ಬಳ್ಳಿ - ವಾರಾಣಸಿ ವಿಶೇಷ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 14, 21 ಮತ್ತು 28, 2025 (ಶುಕ್ರವಾರ) ರಂದು ಹುಬ್ಬಳ್ಳಿಯಿಂದ ಬೆಳಗ್ಗೆ 8:00 ಗಂಟೆಗೆ ಹೊರಟು, ಭಾನುವಾರದಂದು ಬೆಳಗ್ಗೆ 05:30 ಗಂಟೆಗೆ ಉತ್ತರ ಪ್ರದೇಶದ ವಾರಾಣಸಿ ನಿಲ್ದಾಣ ತಲುಪಲಿದೆ.

ಪುನಃ ಇದೆ ರೈಲು (07384) ಫೆಬ್ರವರಿ 17, 24 ಮತ್ತು ಮಾರ್ಚ್ 3, 2025 (ಸೋಮವಾರ) ರಂದು ವಾರಾಣಸಿಯಿಂದ ಬೆಳಗ್ಗೆ 5:00 ಗಂಟೆಗೆ ಹೊರಟು, ಬುಧವಾರ 12:45 AM ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

ಈ ರೈಲು ಎರಡೂ ಮಾರ್ಗಗಳಲ್ಲಿ ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ್ ರೋಡ್, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗ್ಲಿ, ಕಿರ್ಲೋಸ್ಕರ್​ವಾಡಿ, ಕರಾಡ್, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಅಹಮದ್​ ನಗರ, ಕೋಪರಗಾಂವ್, ಮನ್ಮಾಡ್, ಭೂಸಾವಲ್, ತಲ್ವಾಡ್ಯ, ಛನೆರಾ, ಖಿರ್ಕಿಯಾ, ಹರ್ದಾ, ಬಾನಾಪುರಾ, ಇಟಾರ್ಸಿ, ಪಿಪರಿಯಾ, ನರಸಿಂಗಪುರ, ಜಬಲ್ಪುರ, ಕಟ್ನಿ, ಮೈಹಾರ್, ಸತ್ನಾ, ಮಾಣಿಕಪುರ, ಪ್ರಯಾಗ್ ರಾಜ್ ಚಿಯೋಕಿ, ಮಿರ್ಜಾಪುರ ಮತ್ತು ಚುನಾರ್ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಬೋಗಿಗಳ ಸಂಯೋಜನೆ : ಈ ರೈಲುಗಳು 1 ಎಸಿ ಟು-ಟೈರ್, 4 ಎಸಿ ತ್ರಿ-ಟೈರ್, 11 ಸ್ಲೀಪರ್ ಕ್ಲಾಸ್, 1 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಗಾರ್ಡ್ ಬ್ರೇಕ್ ವ್ಯಾನ್ ಮತ್ತು 1 ಲಗೇಜ್/ಜನರೇಟರ್/ಬ್ರೇಕ್ ವ್ಯಾನ್ ಸೇರಿದಂತೆ 18 ಬೋಗಿಗಳನ್ನು ಒಳಗೊಂಡಿರುತ್ತದೆ.

ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ, ನಿರ್ಗಮನ ಸಮಯಕ್ಕಾಗಿ, ಪ್ರಯಾಣಿಕರು ಭಾರತೀಯ ರೈಲ್ವೆ ಜಾಲತಾಣ www.enquiry.indianrail.gov.inಗೆ ಭೇಟಿ ನೀಡಿ ಅಥವಾ ಸಹಾಯವಾಣಿ 139ಕ್ಕೆ ಕರೆ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು, ಹುಬ್ಬಳ್ಳಿಯಿಂದ ಕುಂಭಮೇಳಕ್ಕೆ ವಿಶೇಷ ರೈಲು: ಹೀಗಿದೆ ಟಿಕೆಟ್​ ದರದ ಮಾಹಿತಿ - SPECIAL TRAIN TO KUMBHMELA

ETV Bharat Logo

Copyright © 2025 Ushodaya Enterprises Pvt. Ltd., All Rights Reserved.