ಚಾಮರಾಜನಗರ : ಕಳೆದ 10 ದಿನಗಳಿಂದ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದರಿಂದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಯಾವುದೇ ಕೆಲಸ ಆಗದೇ ಜನರು ಪರದಾಡುತ್ತಿದ್ದಾರೆ.
ಚಾಮರಾಜನಗರದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಸರ್ವರ್ ಡೌನ್ ಆಗುತ್ತಿರುವುದರಿಂದ ಯಾವ ನೋಂದಣಿ ಕಾರ್ಯವೂ ಆಗದೇ ಜನರು ನಿತ್ಯ ಅಲೆದಾಡುತ್ತಿದ್ದಾರೆ. ಯಾವುದೇ ನೋಂದಣಿ ಆಗಲಿ, ಇಸಿಯಾಗಲಿ ಸಾಧ್ಯವಾಗದೆ ಜನರು ಪರದಾಡಿದ್ದು, ಕಳೆದ 10 ದಿನಗಳಿಂದಲೂ ಈ ಸಮಸ್ಯೆ ಮುಂದುವರೆದಿದೆ.
ರಾಜ್ಯಾದ್ಯಂತ ಸರ್ವರ್ ಸಮಸ್ಯೆ ತಲೆದೂರಿದ ಪರಿಣಾಮ ಈ ಅಡಚಣೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 10 ದಿನಗಳಿಂದಲೂ ತಾಂತ್ರಿಕ ಸಮಸ್ಯೆ ಕಾರಣ ನೋಂದಣಿ ಪ್ರಕ್ರಿಯೆಗಳಾಗದೆ ಅಲೆದಾಡುತ್ತಿದ್ದಾರೆ.
![sub-registrar-office](https://etvbharatimages.akamaized.net/etvbharat/prod-images/04-02-2025/kn-cnr-03-sub-regetritor-av-ka10038_04022025153808_0402f_1738663688_519.jpg)
ಈ ಬಗ್ಗೆ ರಾಮಸಮುದ್ರ ನಿವಾಸಿ ಶಿವನಂಜಯ್ಯ ಅವರು ಮಾತನಾಡಿ, ''ಕೆಲ ದಿನಗಳಿಂದ ಸಬ್ ರಿಜಿಸ್ಟ್ರಾರ್ ಆಫೀಸ್ನಲ್ಲಿ ಯಾವುದೇ ಇಸಿಯಾಗಲಿ, ನೋಂದಣಿಯಾಗಲಿ ಆಗುತ್ತಿಲ್ಲ. ಇಡೀ ರಾಜ್ಯಾದ್ಯಂತ ಆಗಲ್ಲ ಎಂದು ನಮಗೆ ಸಬೂಬು ಹೇಳುತ್ತಿದ್ದಾರೆ. ದಯಮಾಡಿ ಇದನ್ನ ಸರಿಪಡಿಸಬೇಕೆಂದು ಸಾರ್ವಜನಿಕರ ಪರವಾಗಿ ಬೇಡಿಕೊಳ್ಳುತ್ತಿದ್ದೇವೆ''ಎಂದು ಹೇಳಿದರು.
![sub-registrar-office](https://etvbharatimages.akamaized.net/etvbharat/prod-images/04-02-2025/kn-cnr-03-sub-regetritor-av-ka10038_04022025153808_0402f_1738663688_167.jpg)
ಇದನ್ನೂ ಓದಿ : ಪೌತಿ ಖಾತೆ ಅಭಿಯಾನಕ್ಕೆ ಸಜ್ಜಾದ ಸರ್ಕಾರ; ಮನೆ ಬಾಗಿಲಿಗೆ ಬಂದು ವಾರಸುದಾರರ ಹೆಸರಿನಲ್ಲಿ ಜಮೀನು ನೋಂದಣಿ - PAUTI KHATHA CAMPAIGN