ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ಜುಲೈ 1 ರಿಂದ ನೇರ ವಿಮಾನಯಾನ ಆರಂಭವಾಗಲಿದೆ. ಖಾಸಗಿ ವಿಮಾನ ಯಾನ ಸಂಸ್ಥೆ ಇಂಡಿಗೋ ಜುಲೈ 1ರಿಂದ ಮಂಗಳೂರು ಮತ್ತು ನವದೆಹಲಿ ಮಧ್ಯೆ ವಿಮಾನಯಾನ ಸೇವೆ ನೀಡಲಿದೆ.
ಹಿಂದೆ ಜೆಟ್ ಏರ್ ವೇಸ್ ಸಂಸ್ಥೆಯಿಂದ ನವದೆಹಲಿ ಮತ್ತು ಮಂಗಳೂರು ಮಧ್ಯೆ ಸೇವೆ ಇತ್ತು. ಜೆಟ್ ಏರ್‌ವೇಸ್ ಸೇವೆ ಸ್ಥಗಿತಗೊಳಿಸಿದ ಬಳಿಕ ಇಂಡಿಗೋ ಈ ಸೇವೆಯನ್ನು ನೀಡುತ್ತಿತ್ತು. ಆದರೆ, ಕೊರೊನಾ ಬಳಿಕ ಮಂಗಳೂರು - ನವದೆಹಲಿ ಮಧ್ಯೆ ವಿಮಾನ ಸಂಚಾರ ರದ್ದಾಗಿದ್ದು, ಈವರೆಗೆ ಆರಂಭವಾಗಿರಲಿಲ್ಲ. ಇದೀಗ ಇಂಡಿಗೋ ಸಂಸ್ಥೆಯು ವೇಳಾಪಟ್ಟಿ ಪ್ರಕಟಿಸಿದೆ.
ವಾರದಲ್ಲಿ ನಾಲ್ಕು ದಿನ (ಭಾನುವಾರ, ಸೋಮವಾರ, ಬುಧವಾರ, ಶುಕ್ರವಾರ) ಬೆಳಗ್ಗೆ 7.40ಕ್ಕೆ ನವದೆಹಲಿಯಿಂದ ತೆರಳುವ ವಿಮಾನ ಬೆಳಗ್ಗೆ10.15 ಕ್ಕೆ ಮಂಗಳೂರಿಗೆ ತಲುಪಲಿದೆ. ಬೆಳಗ್ಗೆ 10.45ಕ್ಕೆ ಮಂಗಳೂರಿನಿಂದ ಹೊರಡುವ ವಿಮಾನ ಮಧ್ಯಾಹ್ನ 1.20ಕ್ಕೆ ದೆಹಲಿ ತಲುಪಲಿದೆ. ಈ ವಿಮಾನಯಾನದಿಂದ ಮಂಗಳೂರು ದೆಹಲಿ ನಡುವೆ ನೇರ ವಿಮಾನಯಾನ ಆರಂಭವಾದಂತಾಗುತ್ತದೆ.
ಇದನ್ನೂ ಓದಿ: ಹುಬ್ಬಳ್ಳಿ-ಮಂಗಳೂರು ನಡುವೆ ವಿಮಾನಯಾನ ಆರಂಭ: ವಾರದಲ್ಲಿ 4 ದಿನ ಸೇವೆ ಲಭ್ಯ