ETV Bharat / city

ಕೃಷಿ ಕಾಯ್ದೆ, ಮೀಸಲಾತಿ ಬಗ್ಗೆ ಸರ್ಕಾರಕ್ಕೆ ಪಾಠ ಮಾಡಿದ ನಿವೃತ್ತ ನ್ಯಾ. ನಾಗಮೋಹನ್ ದಾಸ್ - ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್

ರೈತರ ಸಮಸ್ಯೆಗೆ ಮೀಸಲಾತಿಯೇ ಪರಿಹಾರವಲ್ಲ, ‌ಮೀಸಲಾತಿ‌ ನೀತಿ ಪುನರ್​ ರಚನೆ ‌ಮಾಡಬೇಕಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಳಕ್ಕೆ ಸದನ ಸಮಿತಿ ನೇಮಕ ಅಗತ್ಯವಿಲ್ಲ..

ನ್ಯಾಯಮೂರ್ತಿ ನಾಗಮೋಹನ್ ದಾಸ್
ನ್ಯಾಯಮೂರ್ತಿ ನಾಗಮೋಹನ್ ದಾಸ್
author img

By

Published : Feb 21, 2021, 3:03 PM IST

ದಾವಣಗೆರೆ : ಕೃಷಿ ಎನ್ನುವಂತಹದ್ದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ರಾಜ್ಯ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸಿ ಕೇಂದ್ರ ಸರ್ಕಾರ ಜಾರಿಗೆ ತರುವುದು ನಮ್ಮ ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ನಿವೃತ್ತ ನ್ಯಾ. ನಾಗಮೋಹನ್ ದಾಸ್ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪಾಠ ಮಾಡಿದರು.

ಕೇಂದ್ರದ ಕೃಷಿ ನೀತಿಗಳು ಕಾನೂನುಬಾಹಿರ.. ನಿವೃತ್ತ ನ್ಯಾ. ನಾಗಮೋಹನ್ ದಾಸ್

ನಗರದಲ್ಲಿ ಮಾತನಾಡಿದರು ಅವರು, ರಾಜ್ಯ ಸಭೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಬಹುಮತ ಇರಲಿಲ್ಲ. ವಾಯ್ಸ್ ವೋಟ್​ನಲ್ಲಿ ಗದ್ದಲದಲ್ಲಿ ಪಾಸ್ ಮಾಡ್ತೀವಿ ಅಂದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕ. ಈ ಕೃಷಿ ಕಾಯ್ದೆ ವಿಚಾರವಾಗಿ ಪಾರ್ಲಿಮೆಂಟ್, ರಾಜ್ಯ ಸಭೆಯಲ್ಲಿ ಪರಿಪೂರ್ಣ ಚರ್ಚೆ ತೆಗೆದುಕೊಳ್ಳಲಿಲ್ಲ.

ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಕಾಯ್ದೆಗಳ ಬಗ್ಗೆ ತಜ್ಞರೊಂದಿಗೆ ಚರ್ಚೆ ಮಾಡಿಲ್ಲ, ಇದೊಂದು ಸಂವಿಧಾನದ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಎಂದು ಕಾನೂನು ದೃಷ್ಟಿಯಿಂದ ನಾನು ನೋಡುತ್ತೇನೆ ಎಂದರು.

ಇದು ಕೃಷಿಕರನ್ನು ಕೂಲಿಗಾರರನ್ನಾಗಿ ಮಾಡುವ ಕಾಯ್ದೆ. ಕೂಲಿಗಾರರನ್ನು ಗುಲಾಮರನ್ನಾಗಿ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಕಾಯ್ದೆಗಳನ್ನ ಆರ್ಥಿಕ ಹಾಗೂ ಸಾಮಾಜಿಕವಾಗಿ ನೋಡಬೇಕು. ಪ್ರತಿಭಟನೆಯನ್ನು ದಮನ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಮೀಸಲಾತಿ ನೀತಿ ಪುನರ್‌ ರಚನೆ ಅವಶ್ಯಕ : ಎಲ್ಲಾ ಜಾತಿಯ ರೈತರು ಬಿಕ್ಕಟ್ಟಿನಲ್ಲಿದ್ದಾರೆ. ಮೀಸಲಾತಿ ಹೋರಾಟ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ನಡೆಯುತ್ತಿದೆ. ಆರ್ಥಿಕವಾಗಿ ದುರ್ಬಲವಾದ ಹಿನ್ನೆಲೆ ಮೀಸಲಾತಿ ದಾರಿ ಹಿಂದೆ ಹೋಗುತ್ತಿದ್ದಾರೆ.

ರೈತರ ಸಮಸ್ಯೆಗೆ ಮೀಸಲಾತಿಯೇ ಪರಿಹಾರವಲ್ಲ, ‌ಮೀಸಲಾತಿ‌ ನೀತಿ ಪುನರ್​ ರಚನೆ ‌ಮಾಡಬೇಕಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಳಕ್ಕೆ ಸದನ ಸಮಿತಿ ನೇಮಕ ಅಗತ್ಯವಿಲ್ಲ ಎಂದರು.

ಇನ್ನು, ಮೀಸಲಾತಿ ಹೆಚ್ಚಳವನ್ನು ಸರ್ಕಾರ ಒಂದು ಆದೇಶದ ಮೂಲಕ ಜಾರಿ ಮಾಡಬಹುದು. ಎಸ್​ಟಿಗೆ ಶೇ.3ರಿಂದ 7.5ರಷ್ಟು ಮೀಸಲಾತಿ ಹೆಚ್ಚಿಸಬಹುದು. ಪರಿಶಿಷ್ಟ ಜಾತಿಗೆ ಶೇ.15 ರಿಂದ ಶೇ.17ರಷ್ಟು ಮಾಡಬಹುದು. ಅದಕ್ಕೆ ಸಂಬಂಧಿಸಿದಂತೆ ಅಧ್ಯಯನ ‌ಮಾಡಲಾಗಿದೆ. ಕೆಲ ವಿಚಾರಗಳಿಗೆ ಮಾತ್ರ ಸದಸ ಸಮಿತಿ ಅಗತ್ಯ ಇರುತ್ತದೆ. ಇಂತಹ ಮೀಸಲಾತಿ ವಿಚಾರದಲ್ಲಿ ಸದನ ಸಮಿತಿ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.