ETV Bharat / city

ರೆಸ್ಟೋರೆಂಟ್​ನಲ್ಲಿ ಚಾಕುಗಾಗಿ ಬಾಣಸಿಗರ ನಡುವೆ ಜಗಳ: ಅದೇ ಚಾಕುನಿಂದ ಸಹೋದ್ಯೋಗಿಗೆ ಇರಿದ ಯುವಕ - ರೆಸ್ಟೋರೆಂಟ್​ನಲ್ಲಿ ಚಾಕುಗಾಗಿ ಕೊಲೆ

ಚಾಕುವಿಗಾಗಿ ಬಾಣಸಿಗರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಬೆಂಗಳೂರಲ್ಲಿ ಕೊಲೆ
ಬೆಂಗಳೂರಲ್ಲಿ ಕೊಲೆ
author img

By

Published : May 30, 2022, 8:39 PM IST

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕಾಗಿ ಸ್ನೇಹಿತರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯ ಆಂಧ್ರ ಶೈಲಿ ರೆಸ್ಟೋರೆಂಟಿನಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ನೇಪಾಳ ಮೂಲದ ಮಿಲನ್ ಬರಲ್(25) ಕೊಲೆಯಾದ ಯುವಕ.

ಆಂಧ್ರ ಶೈಲಿ ರೆಸ್ಟೋರೆಂಟಿನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ ಮಿಲನ್, ತರಕಾರಿ ಕತ್ತರಿಸಲು ಬಳಸುತ್ತಿದ್ದ ಚಾಕುವನ್ನ ಆತನ ಸಹದ್ಯೋಗಿ ಸ್ನೇಹಿತ ಆರ್ಯನ್ ಪುಷ್ಕರ್(20) ಎಂಬಾತ ತೆಗೆದುಕೊಂಡಿದ್ದ. ಇದೇ ವಿಚಾರವಾಗಿ ಮಧ್ಯಾಹ್ನ ಇಬ್ಬರ ನಡುವೆ ರೆಸ್ಟೋರೆಂಟಿನ ಅಡುಗೆ ಕೋಣೆಯಲ್ಲೇ ಮಾರಾಮಾರಿ ಆರಂಭವಾಗಿದೆ. ಈ ವೇಳೆ ಅರೋಪಿ ಆರ್ಯನ್ ಪುಷ್ಕರ್ ಅದೇ ಚಾಕುವಿನಿಂದ ಮಿಲನ್​​ಗೆ ಇರಿದಿದ್ದಾನೆ. ಪರಿಣಾಮ ತೀವ್ರ ರಕ್ತ ಸ್ರಾವದಿಂದ ಮಿಲನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಆರ್​ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಆರ್ಯನ್ ಪುಷ್ಕರ್​ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಣ್ಣ ವಿಚಾರ ಕೊಲೆಯಲ್ಲಿ ಅಂತ್ಯವಾಗಿರುವುದು ದುರಂತವೇ ಸರಿ.

(ಓದಿ: ರಸ್ತೆಯಲ್ಲಿ ನಡೆದು ಬರುತ್ತಿದ್ದ ತಾಯಿ-ಮಗಳಿಗೆ ಗುಪ್ತಾಂಗ ತೋರಿಸಿದ ಯುವಕ ಅರೆಸ್ಟ್​)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.