ಬೆಳಗಾವಿ: ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಮೃತಪಟ್ಟ ಒಂದೇ ಕುಟುಂಬದ ಆರು ಜನರ ಸಾಮೂಹಿಕ ಅಂತ್ಯಕ್ರಿಯೆಯನ್ನು ಜಿಲ್ಲಾಡಳಿತ ಇಂದು ರಾತ್ರಿ ನೆರೆವೇರಿಸಿದೆ.
ಬಡಾಲ ಅಂಕಲಗಿ ಗ್ರಾಮದ ರುದ್ರಭೂಮಿಯಲ್ಲಿ ಒಂದೇ ಕುಟುಂಬದ ಆರು ಜನರ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿದ್ದು, ಮತ್ತೋರ್ವ ಬಾಲಕಿ ಅಂತ್ಯಕ್ರಿಯೆ ಪ್ರತ್ಯೇಕವಾಗಿ ಮಾಡಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿದೆ.
ಘಟನೆಯಲ್ಲಿ ಅರ್ಜುನ ಖನಗಾಂವಿ (45), ಪತ್ನಿ ಸತ್ಯವ್ವ ಅರ್ಜುನ್ ಖನಗಾಂವಿ (45), ಪುತ್ರಿ ಪೂಜಾ ಅರ್ಜುನ್ ಖನಗಾಂವಿ (8) ಮತ್ತು ಸವಿತಾ ಭೀಮಪ್ಪ ಖನಗಾಂವಿ (30), ಲಕ್ಷ್ಮಿ ಭೀಮಪ್ಪ ಖನಗಾಂವಿ (15), ಶಾಂತವ್ವ ಭೀಮಪ್ಪ ಖನಗಾಂವಿ ಹಾಗೂ ಕಾಶವ್ವ ವಿಠ್ಠಲ ಕೊಳೆಪ್ಪನವರ (8) ಅವರನ್ನು ಕಳೆದುಕೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
ಅಂತ್ಯಕ್ರಿಯೆಗೂ ಮುನ್ನ ಖನಗಾಂವಿ ಕುಟುಂಬಸ್ಥರು ವಾಸವಿದ್ದ ತಗಡಿನ ಶೆಡ್ನಲ್ಲೇ ಐವರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಹಿರೇಬಾಗೇವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅರ್ಜುನ್ ಮತ್ತು ಲಕ್ಷ್ಮೀ ಮರಣೋತ್ತರ ಪರೀಕ್ಷೆ ಮಾಡಲಾಯಿತು.
(ಮನೆ ಕುಸಿತ ಪ್ರಕರಣ: ಒಂದೇ ಕುಟುಂಬದ 6 ಜನ ಮೃತ, ಇಬ್ಬರು ಬಚಾವ್ ಆಗಿದ್ದೇಗೆ?)
(ಮನೆ ಕುಸಿತಕ್ಕೆ 7 ಜನರ ಸಾವು: ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ)