ETV Bharat / business

ಆರೋಗ್ಯ ಸಂಬಂಧಿ 10 ಸ್ಟಾರ್ಟ್ಅಪ್ ಸಂಸ್ಥೆಗಳ ಸಹಾಯಕ್ಕೆ ಮುಂದಾದ ವಾಟ್ಸ್​​​ಆ್ಯಪ್

ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವ ಉದ್ದೇಶದಿಂದ ಹೊಸದಾಗಿ ಪ್ರಾರಂಭವಾಗುತ್ತಿರುವ 10 ನವೋದ್ಯಮ ಸಂಸ್ಥೆಗಳಿಗೆ ಆರ್ಥಿಕ ಸಹಾಯ ಮಾಡಲು ವಾಟ್ಸ್​​​ಆ್ಯಪ್ ಮುಂದಾಗಿದೆ. ಈ ಕುರಿತು ವಾಟ್ಸ್​​​ಆ್ಯಪ್ ಮುಖ್ಯಸ್ಥ ಅಭಿಜಿತ್ ಬೋಸ್ ಅವರೇ ಮಾಹಿತಿ ನೀಡಿದ್ದು, 10 ಪ್ರಗತಿಪರ ಆರೋಗ್ಯ ಕೇಂದ್ರೀಕೃತ ಸಂಸ್ಥೆಗಳನ್ನು ಸ್ವಾಗತಿಸಲು ನಾವು ಸಂತಸ ಪಡುತ್ತೇವೆ ಎಂದು ತಿಳಿಸಿದ್ದಾರೆ.

ವಾಟ್ಸ್​​​ಆ್ಯಪ್
ವಾಟ್ಸ್​​​ಆ್ಯಪ್
author img

By

Published : Mar 26, 2022, 10:10 AM IST

Updated : Mar 26, 2022, 11:00 AM IST

ನವದೆಹಲಿ: ಮೆಟಾ ಮಾಲೀಕತ್ವದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​​​ಆ್ಯಪ್ ಇದೀಗ ಸಮಾಜಮುಖಿ ಕಾರ್ಯಗಳಿಗೆ ಬೆಂಬಲ ಸೂಚಿಸಲು ಮುಂದಾಗುತ್ತಿದೆ. ಅದರಲ್ಲೂ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವ ಉದ್ದೇಶದಿಂದ ಹೊಸದಾಗಿ ಪ್ರಾರಂಭವಾಗುತ್ತಿರುವ 10 ನವೋದ್ಯಮ ಸಂಸ್ಥೆಗಳಿಗೆ ಆರ್ಥಿಕ ಸಹಾಯ ನೀಡಲು ಮುಂದಾಗಿದೆ ಎಂದು ವಾಟ್ಸ್​​​ಆ್ಯಪ್ ಮುಖ್ಯಸ್ಥ ಅಭಿಜಿತ್ ಬೋಸ್ ಹೇಳಿದ್ದಾರೆ.

ವಾಟ್ಸ್​​​ಆ್ಯಪ್ ಇನ್‌ಕ್ಯುಬೇಟರ್ ಪ್ರೋಗ್ರಾಂ (ಡಬ್ಲ್ಯುಐಪಿ) ಈಗಾಗಲೇ ಸ್ಟಾರ್ಟ್ಅಪ್ ಸಂಸ್ಥೆಗಳ ಹೆಸರನ್ನ ಪಟ್ಟಿಮಾಡಿದೆ. 10 ಪ್ರಗತಿಪರ ಆರೋಗ್ಯ ಕೇಂದ್ರೀಕೃತ ಸಂಸ್ಥೆಗಳನ್ನು ಸ್ವಾಗತಿಸಲು ನಾವು ಸಂತಸ ಪಡುತ್ತೇವೆ. ಬಿಸಿನೆಸ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ಭಾರತದಲ್ಲಿ ಆರೋಗ್ಯ ರಕ್ಷಣೆಗಾಗಿ ಮಾರುಕಟ್ಟೆ ಒದಗಿಸಲು ವಾಟ್ಸ್​​​ಆ್ಯಪ್ ಸಿದ್ಧವಾಗಿದೆ ಎಂದು ಅಭಿಜಿತ್ ತಿಳಿಸಿದ್ದಾರೆ.

ವಾಟ್ಸ್​​​ಆ್ಯಪ್ ಇನ್‌ಕ್ಯುಬೇಟರ್ ಪ್ರೋಗ್ರಾಂಗೆ ಆಯ್ಕೆಯಾದ 10 ನವೋದ್ಯಮಗಳು: 7 ಶುಗರ್, ಆರ್ಮ್‌ಮನ್, ಎಂಡಿಮೆನ್ಶನ್, ಎನ್​ಟೈಟಲ್ಡ್​, ಗರ್ಲ್ ಎಫೆಕ್ಟ್, ಗ್ರಾಮವಾಣಿ, ಐಕುರ್, ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾ (ಪಿಎಫ್‌ಐ), ರೆಮೆಡೊ ಮತ್ತು ವೈಸಾ ಆರೋಗ್ಯ ಸಂಬಂಧಿ ನವೋದ್ಯಮಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಇನ್‌ಕ್ಯುಬೇಟ್​ಗಳು ತಮ್ಮ ಪ್ರಾಯೋಗಿಕ ಪರೀಕ್ಷೆ, ಪ್ರಮುಖ ತಜ್ಞರು ಮತ್ತು ವೈದ್ಯರ ಮಾರ್ಗದರ್ಶನ, ಆನ್-ಗ್ರೌಂಡ್ ಪಾಲುದಾರರು ಮತ್ತು ಪರಿಸರ ವ್ಯವಸ್ಥೆಯ ಪ್ರಭಾವವನ್ನು ಅಳೆಯಲು ಸಂಭಾವ್ಯ ಧನಸಹಾಯಕ್ಕಾಗಿ ಜಾಲತಾಣಗಳ ಬೆಂಬಲ ಪಡೆಯುತ್ತಿವೆ.

ಇದನ್ನೂ ಓದಿ: ರಣನೀತಿಯನ್ನೇ ಬದಲಾಯಿಸಿತೇ ರಷ್ಯಾ?: ಪುಟಿನ್ ಮುಂದಿನ ನಡೆ ಏನು?

Last Updated : Mar 26, 2022, 11:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.