ಹೈದರಾಬಾದ್: ಅನೇಕ ಮಂದಿ ತಮ್ಮ ಮನೆ ಅಥವಾ ಇತರ ಸ್ಥಿರಾಸ್ತಿಗಳನ್ನು ಬಾಡಿಗೆ ನೀಡುವ ಮೂಲಕವೂ ಆದಾಯಗಳಿಸುತ್ತಾರೆ. ಈ ಬಾಡಿಗೆ ಮೂಲಕವೂ ಗಳಿಸುವ ಆದಾಯ ತೆರಿಗೆಗೆ ಸೇರುತ್ತದೆ. ಇದನ್ನು ವಾರ್ಷಿಕ ತೆರಿಗೆ ಪಾವತಿಯಲ್ಲಿ ತೋರಿಸಬೇಕು. ಆದರೆ, ಕೆಲವು ವಿನಾಯಿತಿಗಳು ಈ ಮನೆ ಬಾಡಿಗೆ ತೆರಿಗೆ ಹೊರೆಯನ್ನು ಕಡಿಮೆ ಮಾಡಿ, ಆದಾಯ ಉಳಿಸಬಹುದು. ದೀರ್ಘಾವಧಿಯಲ್ಲಿ ಬಾಡಿಗೆ ಮೂಲಕ ಗಳಿಸಿದ ಆದಾಯವು ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್‌ಗಳನ್ನು ಬದಲಾಯಿಸುವ ಸಾಧ್ಯತೆಯಿದೆ. ಬಾಡಿಗೆ ಆದಾಯದ ತೆರಿಗೆ ಉಳಿಸಲು ಕೆಲವು ಮಾರ್ಗಗಳು ಕಾನೂನಿನಲ್ಲಿ ಇವೆ. ಆ ನಿಟ್ಟಿನಲ್ಲಿ ಮನೆ ಮಾಲೀಕರು ಯಾವ ಕ್ರಮ ವಹಿಸಿ ಬಾಡಿಗೆ ಆದಾಯದ ತೆರಿಗೆಯಿಂದ ತಪ್ಪಿಸಿಕೊಳ್ಳಬಹುದು ಎಂಬದರ ಮಾಹಿತಿ ಇಲ್ಲಿದೆ.
ಮನೆ ಆಸ್ತಿಯಿಂದ ಆದಾಯದ ಅಡಿ ಯಾವುದೇ ಸ್ಥಿರಾಸ್ತಿಯ ಬಾಡಿಗೆ ಅಥವಾ ಗುತ್ತಿಗೆಯ ಮೇಲೆ ಪಡೆದ ಆದಾಯವನ್ನು ತೋರಿಸಬೇಕು. ತೆರಿಗೆದಾರರು ತಮ್ಮ ಒಟ್ಟು ಆದಾಯದಲ್ಲಿ ಮನೆ ಬಾಡಿಗೆ ಆದಾಯವನ್ನು ಸೇರಿಸಿ, ಅದಕ್ಕೆ ಅನ್ವಯವಾಗುವ ಸ್ಲ್ಯಾಬ್‌ಗಳ ಪ್ರಕಾರ ತೆರಿಗೆಯನ್ನು ಪಾವತಿಸಬೇಕು. ಉದಾಹರಣೆಗೆ ಬೇರೆ ಯಾವುದೇ ಆದಾಯವಿಲ್ಲದ ವ್ಯಕ್ತಿ, ಕೇವಲ ಬಾಡಿಗೆ ಮೂಲಕ 2.5 ಲಕ್ಷ ಗಳಿಸುತ್ತಿದ್ದರೆ ಇದು ತೆರಿಗೆಗೆ ಒಳಪಡುವುದಿಲ್ಲ. ಈ ಬಾಡಿಗೆ ಮುಂದಿನ ವರ್ಷ ಶೇ 20ರಷ್ಟು ಹೆಚ್ಚಾದರೆ, ಸೆಕ್ಷನ್ 80C ಮತ್ತು ಇತರ ವಿನಾಯಿತಿಗಳ ಅಡಿ ತೋರಿಸಬಹುದು. ಇದರಿಂದಾಗಿ 5 ಲಕ್ಷಕ್ಕಿಂತ ಕಡಿಮೆ ಆದಾಯವಿದ್ದಾಗಲೂ ಇದು ತೆರಿಗೆ ವಿನಾಯಿತಿಗೆ ಒಳಪಡುತ್ತದೆ
ಪ್ರಮಾಣಿತ ಕಡಿತ: ಮನೆ ಮಾಲೀಕರು ತಮ್ಮ ಬಾಡಿಗೆ ಆದಾಯದಿಂದಾಗಿ ಕೆಲವು ಪ್ರಮಾಣಿತ ಕಡಿತವನ್ನು ಕ್ಲೈಮ್ ಮಾಡಬಹುದು. ಈ ಕಡಿತವು ಒಟ್ಟು ಬಾಡಿಗೆಯಿಂದ ಉಳಿದ ಮೊತ್ತದ 30 ಪ್ರತಿಶತದವರೆಗೆ ಇರಲಿದೆ. ಆಸ್ತಿ ತೆರಿಗೆಯನ್ನು ಪಾವತಿಸಲಾಗುತ್ತದೆ
ಉದಾಹರಣೆಗೆ ವ್ಯಕ್ತಿಯೊಬ್ಬ 3,20,000 ಹಣವನ್ನು ಬಾಡಿಗೆಯಿಂದ ಪಡೆದಾಗ 20 ಸಾವಿರ ಆಸ್ತಿ ತೆರಿಗೆ ಪಾವತಿಸಬೇಕು. ಇದರಲ್ಲಿ 3 ಲಕ್ಷ ರೂ ಆದಾಯ ಅವರಿಗೆ ಸಿಗುತ್ತದೆ. ಇದರಲ್ಲಿ ಶೇ 30ರಷ್ಟು ಎಂದರೆ 90 ಸಾವಿರ ಆಗುತ್ತದೆ. ಸದ್ಯ ಮನೆ ಬಾಡಿಗೆಯಿಂದ 2,10,000 ನಿವ್ವಳ ಆದಾಯ ಪಡೆದರೆ, ಈ ಆದಾಯವನ್ನು ತೆರಿಗೆ ಲೆಕ್ಕಾಚಾರದಲ್ಲಿ ಗಣನೆಗೆ ತೆಗೆದುಕೊಳ್ಳಲಾಗುವುದು. ಈ ಪ್ರಮಾಣಿತ ಕಡಿತವೂ ಎನ್ಆರ್ಐಗಳಿಗೆ ಅವರ ಮನೆ ಮತ್ತು ಸ್ಥಿರ ಆಸ್ತಿಯ ಮೇಲೆ ಗಳಿಸಿದ ಬಡ್ಡಿಯ ಮೇಲೆ ಅನ್ವಯಿಸುತ್ತದೆ.
ಗೃಹ ಸಾಲದ ಬಡ್ಡಿ: ಗೃಹ ಸಾಲ ಪಡೆದು ಮನೆ ಕೊಂಡು ಅದರಿಂದ ಆದಾಯ ಪಡೆಯುತ್ತಿದ್ದರೆ, ಬಡ್ಡಿ ಪಾವತಿ ಮೇಲೆ ಇದನ್ನು ಕಡಿತ ಮಾಡಬಹುದು. ಸೆಕ್ಷನ್ 24 (ಬಿ) ಅನುಸಾರ 2 ಲಕ್ಷವರೆಗಿನ ಬಡ್ಡಿಯ ವಿನಾಯಿತಿಯನ್ನು ಇದು ಪಡೆದಿರುತ್ತದೆ. ಜಂಟಿಯಾಗಿ ಆಸ್ತಿಯನ್ನು ಖರೀದಿಸಿದರೆ, ಸಹ ಮಾಲೀಕರು ಕೂಡ ಇದರ ವಿನಾಯಿತಿಯನ್ನು ಪಡೆಯುತ್ತಾರೆ. ಇದು ಖರೀದಿ ಸಮಯದಲ್ಲಿ ದಾಖಲಾತಿ ಮಾಲೀಕತ್ವದ ಮೇಲೆ ಆಧಾರಿತವಾಗಿದೆ. ಪಾವತಿಸಿದ ಬಡ್ಡಿಯನ್ನು ಷೇರು ಅನುಪಾತದ ಆಧಾರದ ಮೇಲೆ ಸೆಕ್ಷನ್ 24 ರ ಅಡಿಯಲ್ಲಿ ಕ್ಲೈಮ್ ಮಾಡಬಹುದು.
ಇದನ್ನು ಓದಿ: ಪ್ರಯಾಣ ವಿಮೆ ನಿಮ್ಮ ಲ್ಯಾಪ್ಟಾಪ್, ಮೊಬೈಲ್ ನಷ್ಟವನ್ನು ಒಳಗೊಂಡಿದೆ.. ಟ್ರಾವೆಲ್ ಇನ್ಶೂರೆನ್ಸ್ ಏಕೆ ಬೇಕು?