ETV Bharat / business

ಕೇಂದ್ರ ಬಜೆಟ್ ಹೇಗಿರಬೇಕು, ನೀವು ಕೂಡ ಮೋದಿ ಸರ್ಕಾರಕ್ಕೆ ಸಲಹೆ ನೀಡಬಹುದು.. ಅದಕ್ಕೆ ಹೀಗೆ ಮಾಡಿ..

ಆಸಕ್ತರು ‘ಮೈಗೋವ್’ (www.mygov.in) ಪೋರ್ಟಲ್‌ನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬಹುದು ಮತ್ತು ತಮ್ಮ ಆಲೋಚನೆ, ಸಲಹೆಗಳನ್ನು ನೀಡಿದರೆ ಸಂಬಂಧಪಟ್ಟ ಸಚಿವಾಲಯಗಳು ಅವುಗಳನ್ನು ಪರಿಶೀಲಿಸುತ್ತವೆ..

author img

By

Published : Nov 13, 2020, 7:20 PM IST

budget
ಬಜೆಟ್​

ನವದೆಹಲಿ: 20212-22ರ ಹಣಕಾಸು ವರ್ಷದ ಬಜೆಟ್ ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಜೆಟ್ ಪಾಲ್ಗೊಳ್ಳುವಿಕೆಯನ್ನು ಸಾಧ್ಯವಾದಷ್ಟು ಪ್ರಜಾಪ್ರಭುತ್ವ ಸ್ನೇಹಿಯನ್ನಾಗಿ ಮಾಡಲು ಸಾರ್ವಜನಿಕರಿಂದ ಸಲಹೆ ಪಡೆಯುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.

ಆಸಕ್ತರು ‘ಮೈಗೋವ್’ (www.mygov.in) ಪೋರ್ಟಲ್‌ನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬಹುದು ಮತ್ತು ತಮ್ಮ ಆಲೋಚನೆ, ಸಲಹೆಗಳನ್ನು ನೀಡಿದರೆ ಸಂಬಂಧಪಟ್ಟ ಸಚಿವಾಲಯಗಳು ಅವುಗಳನ್ನು ಪರಿಶೀಲಿಸುತ್ತವೆ.

ಉತ್ತಮ ಹಾಗೂ ಸಮರ್ಪಕ ಸಲಹೆಗಳ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ, ವ್ಯಕ್ತಿಗಳು ನೋದಣಿ ವೇಳೆ ಸಲ್ಲಿಸಿದ್ದ ಇಮೇಲ್ ಅಥವಾ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸಾರ್ವಜನಿಕರು ಭಾನುವಾರದಿಂದ ತಿಂಗಳ ಅಂತ್ಯದವರೆಗೆ ಪೋರ್ಟಲ್‌ನಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳಬಹುದು. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷದ ಬಜೆಟ್ ಸಾಕಷ್ಟು ಏರಿಳಿತಗಳಿಂದ ಕೂಡಿರಲಿದೆ.

ಎದುರಾಗಲಿರುವ ವಿತ್ತೀಯ ಸವಾಲುಗಳನ್ನು ಎದುರಿಸಲುವಿವಿಧ ಸಂಸ್ಥೆಗಳು ಮತ್ತು ತಜ್ಞರಿಂದ ಸಲಹೆಗಳನ್ನು ಸ್ವೀಕರಿಸಲು ಸಚಿವಾಲಯವು ಮೀಸಲು ಇಮೇಲ್ ರಚಿಸುತ್ತಿದೆ. ಕೇಂದ್ರ ಸರ್ಕಾರವು ಈಗಾಗಲೇ ಕೇಂದ್ರ ಬಜೆಟ್‌ನ ಆರಂಭಿಕ ಕೆಲಸಗಳನ್ನು ಪ್ರಾರಂಭಿಸಿದೆ.

ಇದುವರೆಗಿನ ನೈಜ ಖರ್ಚು, ಮುಂಬರುವ ತಿಂಗಳಲ್ಲಿನ ಅವಶ್ಯಕತೆ ಮತ್ತು ಆದಾಯ ಸ್ವೀಕೃತಿಗಳ ಪರಿಶೀಲನೆಯ ಆಧಾರದ ಮೇಲೆ ಶೀಘ್ರದಲ್ಲೇ ಬಾಹ್ಯರೇಖೆ ರಚಿಸಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.