Home Made Boondi Laddu Recipe Making: ಬಾಯಲ್ಲಿಟ್ಟರೆ ಕರಗುವ ಬೂಂದಿ ಲಡ್ಡು ಅನೇಕರಿಗೆ ಇಷ್ಟವಾಗುತ್ತದೆ. ಬೂಂದಿ ಲಡ್ಡು ಯಾವುದೇ ಸಂತೋಷದ ಸಂದರ್ಭದಲ್ಲಂತೂ ಇದ್ದೇ ಇರುತ್ತದೆ. ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿನ ಊಟದಲ್ಲಿ ಬೂಂದಿ ಲಡ್ಡು ಇರುತ್ತದೆ. ಅಗತ್ಯವಿದ್ದಾಗ ಸ್ವೀಟ್ ಅಂಗಡಿಗೆ ಹೋಗಿ ಬೂಂದಿ ಲಡ್ಡು ತರುತ್ತಾರೆ. ಈ ಸರಳವಾದ ಟಿಪ್ಸ್ ಅನುಸರಿಸಿ ಮನೆಯಲ್ಲಿಯೇ ತಯಾರಿಸಿದರೆ ಲಡ್ಡು ಸೂಪರ್ ಟೇಸ್ಟಿ ಆಗಿರುತ್ತದೆ. ಮನೆಯಲ್ಲಿ ಬೂಂದಿ ಲಡ್ಡು ಮಾಡುವುದು ಹೇಗೆ? ಬೂಂದಿ ಲಡ್ಡುಗೆ ಬೇಕಾಗುವ ಪದಾರ್ಥಗಳು ಮತ್ತು ತಯಾರಿಸುವ ವಿಧಾನದ ಬಗ್ಗೆ ತಿಳಿಯೋಣ.
ಬೂಂದಿ ಲಡ್ಡು ಮಾಡಲು ಬೇಕಾಗುವ ಸಾಮಗ್ರಿಗಳು:
- ಕಡಲೆ ಹಿಟ್ಟು - 1 ಕೆಜಿ
- ನೀರು - ಅಗತ್ಯಕ್ಕೆ ತಕ್ಕಷ್ಟು
- ಎಣ್ಣೆ- ಕರಿಯಲು ಬೇಕಾದಷ್ಟು
ಪಾಕಕ್ಕೆ ಬೇಕಾಗುವ ಪದಾರ್ಥಗಳು:
- ಸಕ್ಕರೆ - 1 ಕೆಜಿ
- ನೀರು - 700 ಮಿಲಿ
- ಏಲಕ್ಕಿ ಪುಡಿ - 1 ಟೀ ಸ್ಪೂನ್
- ನಿಂಬೆ ರಸ - ನಾಲ್ಕು ಹನಿಗಳು
ಡ್ರೈಫ್ರೂಟ್ಸ್:
- ಗೋಡಂಬಿ - 100 ಗ್ರಾಂ
- ಒಣದ್ರಾಕ್ಷಿ - 50 ಗ್ರಾಂ
- ಕರ್ಪೂರ - 1 ಟೀ ಸ್ಪೂನ್
ತಯಾರಿಸುವ ವಿಧಾನ:
- ಮೊದಲು ಕಡಲೆ ಹಿಟ್ಟನ್ನು ಜರಡಿ ಹಿಡಿದು ಪಕ್ಕಕ್ಕೆ ಇಡಿ. ಈಗ ಒಂದು ಬೌಲ್ ತೆಗೆದುಕೊಂಡು ನೀರನ್ನು ಸ್ವಲ್ಪ ಸ್ವಲ್ಪವಾಗಿ ಸುರಿಯಿರಿ. ಮೂರು ನಿಮಿಷಗಳ ಕಾಲ ಮಿಶ್ರಣ ಮಾಡಿ ದೋಸೆ ಹಿಟ್ಟಿಗಿಂತ ಸ್ವಲ್ಪ ಮೃದುವಾಗಿಸಿ ಇಟ್ಟುಕೊಂಡು ಪಕ್ಕಕ್ಕೆ ಇರಿಸಿ.
- ಅದರ ನಂತರ, ಒಲೆ ಆನ್ ಮಾಡಿ ಮತ್ತು ಡೀಪ್ ಫ್ರೈ ಮಾಡಲು ಬೇಕಾದಷ್ಟು ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ.
- ಈಗ ಇನ್ನೊಂದು ಸ್ಟವ್ ಆನ್ ಮಾಡಿ ಒಂದು ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರು ಹಾಕಿ. ಸಕ್ಕರೆ ಕರಗಿದ ನಂತರ, ನಾಲ್ಕು ಹನಿ ನಿಂಬೆ ರಸವನ್ನು ಸೇರಿಸುವುದರಿಂದ ಪಾಕವು ಗಟ್ಟಿಯಾಗುವುದನ್ನು ತಡೆಯುತ್ತದೆ.
- ಈಗ ಬೂಂದಿ ಮಾಡಲು ರಂಧ್ರಗಳಿರುವ ಸೌಟ್ನ್ನು ಕಾದ ಎಣ್ಣೆಯ ಹತ್ತಿರ ಇಟ್ಟು, ಕಲಸಿದ ಕಡಲೆಹಿಟ್ಟಿನ ಮಿಶ್ರಣವನ್ನು ಸುರಿದು ಸ್ವಲ್ಪ ಸ್ವಲ್ಪ ಹಾಕಿ ತಿರುವಿದರೆ ಬೂಂದಿ ಎಣ್ಣೆಗೆ ಬೀಳುತ್ತದೆ.
- ಈಗ ಬೂಂದಿಯನ್ನು ತಿಳಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೆ ಹುರಿಯಬೇಕು. ನಂತರ, ಹೊರತೆಗೆದು ಬಿಸಿ ಪಾಕದೊಂದಿಗೆ ಮಿಶ್ರಣ ಮಾಡಬೇಕು. ಆದರೆ, ಇಲ್ಲಿ ಬೂಂದಿಯನ್ನು ಕೆಂಪಗೆ ಹುರಿಯುವ ಅಗತ್ಯವಿಲ್ಲ.
- ಈಗ ಎಲ್ಲಾ ಬೂಂದಿಗಳನ್ನು ಪಾಕ್ದಲ್ಲಿ ಅದೇ ರೀತಿಯಲ್ಲಿ ಬೆರೆಸಬೇಕು.
- ಈಗ ಕಾದ ಎಣ್ಣೆಗೆ ಗೋಡಂಬಿ, ಒಣದ್ರಾಕ್ಷಿ ಹಾಕಿ ಹುರಿದು ಬೂಂದಿ ಲಡ್ಡು ಮಿಶ್ರಣಕ್ಕೆ ಹಾಕಿ. ಜೊತೆಗೆ ಅದಕ್ಕೆ ಕರ್ಪೂರವನ್ನು ಹಾಕಿ ಮಿಕ್ಸ್ ಮಾಡಿ. ಈಗ ಮಿಶ್ರಣವನ್ನು 10 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.
- ಈಗ 10 ನಿಮಿಷದ ನಂತರ ಬೂಂದಿ ಲಡ್ಡು ಮಿಶ್ರಣಕ್ಕೆ ಬೆಚ್ಚಗಾದಾಗ ಒಂದು ಚಮಚ ತುಪ್ಪ ಹಾಕಿ ಬೆರೆಸಿ ಲಡ್ಡುನಂತೆ ರೌಂಡ್ ಮಾಡಿ ಇಟ್ಟುಕೊಳ್ಳಿ.
- ಈಗ ಇದೆಲ್ಲವನ್ನೂ ಒಂದು ಗಂಟೆ ಪಕ್ಕಕ್ಕೆ ಇರಿಸಿ. ಒಂದು ಗಂಟೆಯ ನಂತರ, ಅವುಗಳನ್ನು ಗಾಳಿಯಾಡದ ಡಬ್ಬದಲ್ಲಿ ಇರಿಸಿ.
- ಇದೀಗ ರುಚಿಕರ ಬೂಂದಿ ಲಡ್ಡುಗಳು ಸಿದ್ಧ! ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ.