ETV Bharat / business

ಡಾಲರ್‌ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ಪಾಕಿಸ್ತಾನ ರೂಪಾಯಿ

ನೆರೆಯ ಪಾಕ್‌ಗೆ ಮತ್ತೊಂದು ಹೊಡೆತ ಬಿದ್ದಿದೆ. ಅಂತಾರಾಷ್ಟ್ರೀಯ ಕರೆನ್ಸಿ ಮಾರುಕಟ್ಟೆಯಲ್ಲಿ ಪಾಕಿಸ್ತಾನದ ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ.

Pakistan rupee tumbles to fresh all-time low
ಡಾಲರ್‌ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ಪಾಕ್‌ ರೂಪಾಯಿ
author img

By

Published : Oct 20, 2021, 1:20 PM IST

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪಾಕಿಸ್ತಾನದ ರೂಪಾಯಿ ಮೌಲ್ಯ ಕುಸಿತ ಮುಂದುವರೆದಿದ್ದು, ಇಂದು ಕೂಡ ಡಾಲರ್ ಎದುರು ಪಾಕ್‌ ರೂಪಾಯಿ ಮೌಲ್ಯ 37 ಪೈಸೆ ಕುಸಿತದೊಂದಿಗೆ 173.50ಕ್ಕೆ ತಲುಪಿದೆ. ಇದು ಸಾರ್ವಕಾಲಿಕ ಕನಿಷ್ಠ ಕುಸಿತವಾಗಿದೆ ಎಂದು ವರದಿಯಾಗಿದೆ.

ಕಳೆದ ಸೋಮವಾರ, ಡಾಲರ್ ಎದುರು ಪಾಕ್‌ ರೂಪಾಯಿ 172.72ರಲ್ಲಿ ವಹಿವಾಟು ನಡೆಸಿತ್ತು. ವಿನಿಮಯ ದರದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸ್ಟೇಟ್ ಬ್ಯಾಂಕ್ ಆಫ್‌ ಪಾಕಿಸ್ತಾನ್‌ ಜಾರಿಗೆ ತಂದ ಹಲವು ಕ್ರಮಗಳ ಹೊರತಾಗಿಯೂ ಯುಎಸ್‌ನ ಡಾಲರ್‌ ಎದುರು ನೆರೆಯ ದೇಶದ ರೂಪಾಯಿ ಬೇಡಿಕೆ ಕುಸಿಯುತ್ತಲೇ ಸಾಗಿದೆ.

ಈ ಹಿಂದೆ ಕೇಂದ್ರೀಯ ಬ್ಯಾಂಕ್, ವಿನಿಮಯ ಕಂಪನಿಗಳಿಂದ ವಿದೇಶಿ ಕರೆನ್ಸಿ ವಹಿವಾಟುಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು ಮತ್ತು ವಿದೇಶಿ ಕರೆನ್ಸಿಯ ಅನಪೇಕ್ಷಿತ ಹೊರ ಹರಿವು ತಡೆಯಲು ನಿಯಂತ್ರಕ ಕ್ರಮಗಳನ್ನು ಪರಿಚಯಿಸಿತ್ತು ಎಂದು ವರದಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.