ಬೆಂಗಳೂರು : ಕೋವಿಡ್ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆ 100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್‌ನ ಬಿಎಂಆರ್ಸಿಎಲ್ನಿಂದ ಸ್ಥಾಪಿಸಲಾಗಿತ್ತು.
ಮೆಟ್ರೋ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಎಲ್ಲಾ ಕೆಲಸಗಾರರಿಗೆ ಮತ್ತು ಬಿಎಂಆರ್ಸಿಎಲ್ ಉದ್ಯೋಗಿಗಳಿಗಾಗಿಯೇ ಈ ಸೆಂಟರ್ ಸ್ಥಾಪಿಸಲಾಗಿದೆ.
ದಾಖಲಾಗುವ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಜೊತೆಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟಲು ಮುಂದಾಗಿದ್ದರು.
ನಮ್ಮ ಮೆಟ್ರೋ ಸಿಬ್ಬಂದಿ, ಕಾಮಗಾರಿಯಲ್ಲಿ ತೊಡಗಿರುವ 80 ಮಂದಿಗೆ ಕೋವಿಡ್ ಸೋಂಕು ಬಾಧಿಸಿದೆ. ಸದ್ಯ ಇವರೆಲ್ಲ ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ 15 ಜನ ಗುಣಮುಖರಾಗಿ ಡಿಸ್ಜಾರ್ಜ್ ಆಗಿದ್ದಾರೆ. ಇದನ್ನ ಖಾಸಗಿಯವರ ಕೂಡ ಬಳಿಸಿಕೊಳ್ಳಬಹುದು ಅಂತ ನಿಗಮದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತ್ತ ಬಿಎಂಆರ್ಸಿಎಲ್ ಉದ್ಯೋಗಿಗಳಿಗೆ & ಕಾಮಗಾರಿಗಳಲ್ಲಿ ತೊಡಗಿರುವ ಕೆಲಸಗಾರರಿಗಾಗಿಯೇ ನಿರ್ಮಿಸಿದ ಕೋವಿಡ್ ಕೇರ್ ಸೆಂಟರ್ಗೆ 10 ಲೀಟರ್ ಸಾಮರ್ಥ್ಯದ 5 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಇಂದು ಹಸ್ತಾಂತರಿಸಲಾಯಿತು.
ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಸೇರಿದಂತೆ ನಮ್ಮ ಮೆಟ್ರೋ ರೈಲು ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.