ಬೆಂಗಳೂರು: ಇಂಡೊ ಇಂಟರ್‌ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ (ಐಐಪಿಕೆಎಲ್) ಮತ್ತು ಡಿ ಸ್ಪೋರ್ಟ್ಸ್ ಆಶ್ರಯದಲ್ಲಿ ಇದೇ ತಿಂಗಳ 13ರಿಂದ ಜೂನ್ 4ರವರೆಗೆ ಕಬ್ಬಡ್ಡಿ ಕ್ರೀಡಾಕೂಟ ನಡೆಯಲಿದೆ.
ಮೇ 23ರವರೆಗೆ ಮೊದಲ ಲೆಗ್‌ನ ಪಂದ್ಯಗಳು ಪುಣೆಯಲ್ಲಿ ನಡೆಯಲಿವೆ. ಎರಡನೇ ಲೆಗ್ ಪಂದ್ಯಗಳು ಮೈಸೂರಿ ನಲ್ಲಿ ಮೇ 24ರಿಂದ 29ರವರೆಗೆ ನಡೆಯಲಿವೆ. ಜೂನ್ 1ರಿಂದ 4ರವರೆಗೆ ಸೆಮಿಫೈನಲ್, ಫೈನಲ್ ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿವೆ. ಇದರಲ್ಲಿ ಒಟ್ಟು 160 ಪ್ಲೇಯರ್ಸ್ ಭಾಗಿಯಾಗುತ್ತಿದ್ದಾರೆ. ಕರ್ನಾಟಕದ 13 ಕಬ್ಬಡಿ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಮೂರು ಜಾಗಗಳಲ್ಲಿ ಮೂರು ಹಂತಗಳಲ್ಲಿ ಈ ಟೂರ್ನಿ ನಡೆಯಲಿದೆ.
ಒಟ್ಟು ಎಂಟು ತಂಡಗಳು ಟೂರ್ನಿಯಲ್ಲಿ ಭಾಗಿ
ದಿಲರ್ ದಿಲ್ಲಿ, ತೆಲುಗು ಬುಲ್ಸ್, ಮುಂಬೈ ಚೆ ರಾಜೇ, ಪುಣೆ ಪ್ರೈಡ್, ಬೆಂಗಳೂರು ರೈನೋಸ್, ಹರಿಯಾಣ ಹೀರೋಸ್, ಪಾಂಡಿಚೇರಿ ಪ್ರಿಡಿಯೇಟರ್ಸ್ ಹಾಗೂ ಚೆನ್ನೈ ಚಾಲೆಂಜರ್ಸ್
ಅರ್ಜುನ್ ಅವಾರ್ಡ್ ವಿಜೇತರಾದ ಹೊನ್ನಪ್ಪ ಗೌಡ ಈ ಬಗ್ಗೆ ಮಾತನಾಡಿ, ಈ ಟೂರ್ನಮೆಂಟ್ ಪ್ರೋ ಕಬ್ಬಡಿಗಿಂತ ಯಶಸ್ವಿಯಾಗಿ ನಡೆಯಲಿದೆ. ರಾಜ್ಯ ಮತ್ತು ದೇಶದ ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಯೋಜನೆ ಗೊಂಡಿರುವ ಈ ಕ್ರೀಡಾಕೂಟ ಮುಂಬರುವ ಕಬಡ್ಡಿ ವಿಶ್ವಕಪ್ಗೆ ಒಳ್ಳೆಯ ಆಟಗಾರರನ್ನು ಪರಿಚಯಿಸುವ ಎಲ್ಲ ಸಾಧ್ಯತೆಗಳನ್ನು ಹೊಂದಿದೆ ಎಂದು ತಿಳಿಸಿದರು. ಪ್ರಶಸ್ತಿ ವಿಜೇತ ತಂಡ 1.25 ಕೋ.ರೂ. ಹಾಗೂ ರನ್ನರ್ ಅಪ್ ತಂಡವು 75 ಲಕ್ಷ ರೂ. ಪಡೆಯಲಿದೆ ಎಂದು ಇದೇ ವೇಳೆ ತಿಳಿಸಿದರು.