ETV Bharat / briefs

ನಾಳೆ ಅಪ್ಪಳಿಸಲಿದೆ ’ವಾಯು’ ಚಂಡಮಾರುತ... ನಮ್ಮ ರಾಜ್ಯಕ್ಕೂ ಇರಲಿದೆ ಎಫೆಕ್ಟ್..!

ವಾಯು ಚಂಡಮಾರುತ ಗುರುವಾರ ಮುಂಜಾನೆ ಗುಜರಾತ್ ಕರಾವಳಿಗೆ ಅಪ್ಪಳಿಸಲಿದ್ದು ರಾಜ್ಯದಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೂರು ಲಕ್ಷ ಮಂದಿಯನ್ನು ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಚಂಡಮಾರುತದ ಕಾರಣ ಶಾಲಾ-ಕಾಲೇಜಿಗಳಿಗೆ ರಜೆ ಘೋಷಿಸಲಾಗಿದೆ.

author img

By

Published : Jun 12, 2019, 10:48 AM IST

ವಾಯು ಚಂಡಮಾರುತ

ಅಹಮದಾಬಾದ್: ಮುಂಗಾರು ಆರಂಭದ ವೇಳೆಯಲ್ಲೇ ಚಂಡಮಾರುತ ಕಾಣಿಸಿಕೊಂಡಿದ್ದು, ಪರಿಣಾಮ ದೇಶದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

’ವಾಯು’ ಚಂಡಮಾರುತ ಗುರುವಾರ ಮುಂಜಾನೆ ಗುಜರಾತ್ ಕರಾವಳಿಗೆ ಅಪ್ಪಳಿಸಲಿದ್ದು ರಾಜ್ಯದಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೂರು ಲಕ್ಷ ಮಂದಿಯನ್ನು ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಚಂಡಮಾರುತದ ಕಾರಣ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ತುರ್ತು ಸಭೆಯಲ್ಲಿ ಸ್ಥಳಾಂತರದ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗಿದ್ದು, ಕರಾವಳಿ ತೀರ ಪ್ರದೇಶದಲ್ಲಿರುವ ಸುಮಾರು ಮೂರು ಲಕ್ಷ ಮಂದಿಯನ್ನು ಬುಧವಾರ ಮಧ್ಯಾಹ್ನದ ವೇಳೆಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶವಾಗಿರುವ ದಿಯು ನಲ್ಲೂ ಸಹ ಲಕ್ಷಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಿದೆ. ಮಹಾನಗರಿ ಮುಂಬೈ ಬಾರಿ ವರ್ಷಧಾರೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

  • VSCS ‘VAYU’ over Eastcentral Arabian Sea is about 340 km nearly south of Veraval (Gujarat).
    It is very likely to move nearly northwards and cross Gujarat coast between Porbandar and Mahuva around Veraval & Diu region as a Very Severe Cyclonic Storm in morning of 13th June 2019. pic.twitter.com/0Qqj4rqiai

    — India Met. Dept. (@Indiametdept) June 12, 2019 " class="align-text-top noRightClick twitterSection" data=" ">

ವಾಯು ಚಂಡಮಾರುತದ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ ನಡೆಸಿದ್ದು, ಜಿಲ್ಲಾಡಳಿತ ಎಲ್ಲ ರೀತಿಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಚಂಡಮಾರುತ ವೇಳೆ ಅಗತ್ಯ ಸೇವೆಗಳಾದ ವಿದ್ಯುತ್, ಟೆಲಿ ಕಮ್ಯುನಿಕೇಷನ್ ಹಾಗೂ ನೀರನ್ನು ಸಮರ್ಪಕವಾಗಿ ಪೂರೈಸುವಂತೆ ಅಮಿತ್ ಶಾ ಸೂಚಿಸಿದ್ದು, ಹಾನಿ ಉಂಟಾದಲ್ಲಿ ತಕ್ಷಣವೇ ಸೇವೆ ಹಿಂಪಡೆಯಲು ತಿಳಿಸಲಾಗಿದೆ.

ಚಂಡಮಾರುತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ದಳವನ್ನು ಅಲರ್ಟ್​ನಲ್ಲಿಡಲಾಗಿದೆ. ಸೇನಾ ಹಾಗೂ ನೌಕಾದಳ ಸಿದ್ಧರಾಗಿ ಇರುವಂತೆ ಹೇಳಲಾಗಿದೆ.

ಕರ್ನಾಟಕಕ್ಕೂ ಇರಲಿದೆ ಎಫೆಕ್ಟ್:

ವಾಯು ಚಂಡಮಾರುತದ ಪರಿಣಾಮ ಕರ್ನಾಟಕಕ್ಕೂ ತಟ್ಟಲಿದ್ದು ಇನ್ನೆರಡು ದಿನ ಮೋಡ ಕವಿದ ವಾತಾವರಣ ಹಾಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತದ ಬೆನ್ನಲ್ಲೇ ಇಂದು ಇಲ್ಲವೇ ನಾಳೆ ರಾಜ್ಯಕ್ಕೆ ಮುಂಗಾರು ಆಗಮನವಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

Intro:Body:

ನಾಳೆ ಗುಜರಾತ್​ ಕರಾವಳಿಗೆ ಅಪ್ಪಳಿಸಲಿದೆ ವಾಯು ಚಂಡಮಾರುತ... ನಮ್ಮ ರಾಜ್ಯಕ್ಕೂ ಇರಲಿದೆ ಎಫೆಕ್ಟ್..!

ಅಹಮದಾಬಾದ್: ಮುಂಗಾರು ಆರಂಭದ ವೇಳೆಯಲ್ಲೇ ಚಂಡಮಾರುತ ಕಾಣಿಸಿಕೊಂಡಿದ್ದು, ಪರಿಣಾಮ ದೇಶದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ವಾಯು ಚಂಡಮಾರುತ ಗುರುವಾರ ಮುಂಜಾನೆ ಗುಜರಾತ್ ಕರಾವಳಿಗೆ ಅಪ್ಪಳಿಸಲಿದ್ದು ರಾಜ್ಯದಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೂರು ಲಕ್ಷ ಮಂದಿಯನ್ನು ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಚಂಡಮಾರುತದ ಕಾರಣ ಶಾಲಾ-ಕಾಲೇಜಿಗಳಿಗೆ ರಜೆ ಘೋಷಿಸಲಾಗಿದೆ.

ತುರ್ತು ಸಭೆಯಲ್ಲಿ ಸ್ಥಳಾಂತರದ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗಿದ್ದು, ಕರಾವಳಿ ತೀರ ಪ್ರದೇಶದಲ್ಲಿರುವ ಸುಮಾರು ಮೂರು ಲಕ್ಷ ಮಂದಿಯನ್ನು ಬುಧವಾರ ಮಧ್ಯಾಹ್ನದ ವೇಳೆಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಯು ಚಂಡಮಾರುತದ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ ನಡೆಸಿದ್ದು, ಜಿಲ್ಲಾಡಳಿತ ಎಲ್ಲ ರೀತಿಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಚಂಡಮಾರುತ ವೇಳೆ ಅಗತ್ಯ ಸೇವೆಗಳಾದ ವಿದ್ಯುತ್, ಟೆಲಿಕಮ್ಯುನಿಕೇಷನ್ ಹಾಗೂ ನೀರನ್ನು ಸಮರ್ಪಕವಾಗಿ ಪೂರೈಸುವಂತೆ ಅಮಿತ್ ಶಾ ಸೂಚಿಸಿದ್ದು, ಹಾನಿ ಉಂಟಾದಲ್ಲಿ ತಕ್ಷಣವೇ ಸೇವೆಯನ್ನು ಹಿಂಪಡೆಯಲು ತಿಳಿಸಲಾಗಿದೆ.

ಚಂಡಮಾರುತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ದಳವನ್ನು ಅಲರ್ಟ್​ನಲ್ಲಿಡಲಾಗಿದೆ. ಸೇನಾ ಹಾಗೂ ನೌಕಾದಳ ಸಿದ್ಧರಾಗಿ ಇರುವಂತೆ ಹೇಳಲಾಗಿದೆ.

ಕರ್ನಾಟಕಕ್ಕೂ ಇರಲಿದೆ ಎಫೆಕ್ಟ್:

ವಾಯು ಚಂಡಮಾರುತದ ಪರಿಣಾಮ ಕರ್ನಾಟಕಕ್ಕೂ ತಟ್ಟಲಿದ್ದು ಇನ್ನೆರಡು ದಿನ ಮೋಡ ಕವಿದ ವಾತಾವರಣ ಹಾಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತ ಬೆನ್ನಲ್ಲೇ ಇಂದು ಇಲ್ಲವೇ ನಾಳೆ ರಾಜ್ಯಕ್ಕೆ ಮುಂಗಾರು ಆಗಮನವಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.