ಕಲಬುರಗಿಯಲ್ಲಿ ಕೋವಿಡ್ಗೆ ಮತ್ತೆರಡು ಬಲಿ: ಇಂದು 20 ಕೇಸ್ ಪತ್ತೆ - Corona virus
ಕೋವಿಡ್ ಮಹಾಮಾರಿಗೆ ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಇಬ್ಬರು ಬಲಿಯಾಗಿದ್ದು, ಇಂದು 20 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಕಲಬುರಗಿ: ಜಿಲ್ಲೆಯಲ್ಲಿಂದು ಕೊರೊನಾಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಇಂದು 20 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಒಟ್ಟು ಸಂಖ್ಯೆ 816ಕ್ಕೆ ಏರಿಕೆಯಾಗಿದೆ.
ಶೀತ, ಜ್ವರ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕಲಬುರಗಿಯ ಎಂಎಸ್ಕೆ ಮಿಲ್ ಬಡಾವಣೆಯ 53 ವರ್ಷದ ವ್ಯಕ್ತಿ ಹಾಗೂ ಚಿಂಚೋಳಿ ತಾಲೂಕಿನ ಕೆರೋಳ್ಳಿ ಗ್ರಾಮದ 48 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಮೃತರು ಸೇರಿ ಇವತ್ತು 20 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 16 ಜನ ಮಹಾರಾಷ್ಟ್ರದಿಂದ ಬಂದವರು, ಇಬ್ಬರು ಮೃತರು ಹಾಗೂ ರೋಗಿ-5909ರ ಸಂಪರ್ಕಕ್ಕೆ ಬಂದಿದ್ದ ಶಹಬಜಾರ್ ಜಿಡಿಎ ಕಾಲೋನಿಯ 31 ವರ್ಷದ ವ್ಯಕ್ತಿ ಹಾಗೂ ರೋಗಿ- 5010ರ ಸಂಪರ್ಕಕ್ಕೆ ಬಂದಿದ್ದ ಕಲಬುರಗಿ ತಾಲೂಕು ಜೀವನಗಿ ಗ್ರಾಮದ 26 ವರ್ಷದ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
60 ಜನರು ಗುಣಮುಖ
ಇಂದು 60 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 816ಕ್ಕೆ ಏರಿದರೆ, ಮೃತರ ಸಂಖ್ಯೆ 10, ಒಟ್ಟು ಗುಣಮುಖರಾದರು 345, ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 461 ಆಗಿದೆ.