ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಸಾಮಾಜಿಕ ಮಾಧ್ಯಮದ ದೈತ್ಯ ಟ್ವಿಟ್ಟರ್ ಖರೀದಿಸುವ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ನಕಲಿ ಖಾತೆಗಳಿಗೆ ಸಂಬಂಧಿಸಿದಂತೆ ಟ್ವಿಟರ್ ಸಂಪೂರ್ಣ ಮಾಹಿತಿಯನ್ನು ನೀಡಿಲ್ಲ ಮತ್ತು ಟ್ವಿಟರ್ ವಿಲೀನ ಒಪ್ಪಂದದ ಹಲವಾರು ನಿಬಂಧನೆಗಳನ್ನು ಉಲ್ಲಂಘಿಸಿದೆ. ಹೀಗಾಗಿ ಒಪ್ಪಂದವನ್ನು ಕೈಬಿಡಲಾಗಿದೆ ಎಂದು ಹೇಳಿದ್ದಾರೆ.
-
Elon Musk sends a letter to Twitter seeking to end USD 44 billion deal, citing lack of info on bot accounts: The Associated Press
— ANI (@ANI) July 8, 2022 " class="align-text-top noRightClick twitterSection" data="
">Elon Musk sends a letter to Twitter seeking to end USD 44 billion deal, citing lack of info on bot accounts: The Associated Press
— ANI (@ANI) July 8, 2022Elon Musk sends a letter to Twitter seeking to end USD 44 billion deal, citing lack of info on bot accounts: The Associated Press
— ANI (@ANI) July 8, 2022
ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಮಸ್ಕ್ ಈ ಹಿಂದೆ $44 ಬಿಲಿಯನ್ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಕಂಪನಿಯು ತನ್ನ ವರದಿಯಲ್ಲಿ ಹೇಳುವಂತೆ ಸ್ಪ್ಯಾಮ್ ಖಾತೆಗಳ ಸಂಖ್ಯೆ ಶೇಕಡಾ 5 ಕ್ಕಿಂತ ಕಡಿಮೆಯಿದೆ ಎಂಬುದಕ್ಕೆ ಪುರಾವೆಗಳನ್ನು ತೋರಿಸುವವರೆಗೆ ಒಪ್ಪಂದವು ಮುಂದುವರಿಯುವುದಿಲ್ಲ ಎಂದು ಅವರು ಕೆಲವು ಸಮಯದಿಂದ ಹೇಳುತ್ತಿದ್ದಾರೆ. ಟ್ವಿಟ್ಟರ್ ಹೇಳಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಸ್ಪ್ಯಾಮ್ ಖಾತೆಗಳಿವೆ ಎಂದು ಅವರು ಹೇಳಿದರು. ಸ್ಟಾಕ್ ಎಕ್ಸ್‌ಚೇಂಜ್‌ಗಳಿಗೆ ನೀಡಿದ ಮಾಹಿತಿಯು ನಿಖರವಾಗಿದೆ ಎಂದು ನಂಬಿದ್ದರಿಂದ ಖರೀದಿ ಒಪ್ಪಂದಕ್ಕೆ ಒಪ್ಪಿಕೊಂಡಿದ್ದೆ ಎಂದು ಅವರು ಈ ಹಿಂದೆ ಹೇಳಿದ್ದರು. ಆ ವಿಷಯ ಬಗೆಹರಿಯುವವರೆಗೆ ಖರೀದಿ ಒಪ್ಪಂದವು ಮುಂದುವರಿಯುವುದಿಲ್ಲ ಎಂದು ಎಲೋನ್ ಮಸ್ಕ್ ಹಲವು ಬಾರಿ ಸ್ಪಷ್ಟಪಡಿಸಿದ್ದರು.
ಓದಿ: ಅಮೆರಿಕಕ್ಕೆ ಅಮೆರಿಕವೇ ವಿಷಯವೊಂದರ ಉದ್ವಿಗ್ನತೆಯಲ್ಲಿದೆ.. ಆದರೆ ಎಲ್ಲಿ ಹೋದರೋ ಎಲಾನ್ ಮಸ್ಕ್..!
ಮತ್ತೊಂದೆಡೆ, ವಿಲೀನ ಒಪ್ಪಂದವನ್ನು ಜಾರಿಗೆ ತರಲು ಮಂಡಳಿಯು ಕಾನೂನು ಕ್ರಮ ಕೈಗೊಳ್ಳಲು ಯೋಜಿಸುತ್ತಿದೆ ಎಂದು ಟ್ವಿಟರ್ ಅಧ್ಯಕ್ಷ ಬ್ರೆಟ್ ಟೆಯ್ಲೊ ಹೇಳಿದ್ದಾರೆ. ಟ್ವಿಟ್ಟರ್ ಮಂಡಳಿಯು ನಿಯಮಗಳಿಗೆ ಅನುಸಾರವಾಗಿ ಮಸ್ಕ್ ಜೊತೆಗಿನ ಒಪ್ಪಂದವನ್ನು ಅಂತ್ಯಗೊಳಿಸಲು ಬದ್ಧವಾಗಿದೆ ಎಂದು ಅವರು ಹೇಳಿದರು. ಹಿಂದಿನ ಒಪ್ಪಂದದ ಪ್ರಕಾರ, ಯಾವುದೇ ಕಾರಣಕ್ಕೂ ಮಸ್ಕ್ ವ್ಯವಹಾರವನ್ನು ಪೂರ್ಣಗೊಳಿಸದಿದ್ರೆ, ಅವರು 1 ಬಿಲಿಯನ್ ಡಾಲರ್‌ಗಳನ್ನು ವಿರಾಮ ಶುಲ್ಕವಾಗಿ (ದಂಡ) ಪಾವತಿಸಬೇಕಾಗುತ್ತದೆ.
-
Twitter to sue Musk over termination of company's takeover bid
— ANI Digital (@ani_digital) July 9, 2022 " class="align-text-top noRightClick twitterSection" data="
Read @ANI Story | https://t.co/S5aueX5rqW#Twitter #ElonMusk #elonmusktwitter pic.twitter.com/48yFBAk2gH
">Twitter to sue Musk over termination of company's takeover bid
— ANI Digital (@ani_digital) July 9, 2022
Read @ANI Story | https://t.co/S5aueX5rqW#Twitter #ElonMusk #elonmusktwitter pic.twitter.com/48yFBAk2gHTwitter to sue Musk over termination of company's takeover bid
— ANI Digital (@ani_digital) July 9, 2022
Read @ANI Story | https://t.co/S5aueX5rqW#Twitter #ElonMusk #elonmusktwitter pic.twitter.com/48yFBAk2gH
ಕಳೆದ ಏಪ್ರಿಲ್‌ನಲ್ಲಿ ಮಸ್ಕ್ ಟ್ವಿಟರ್ ಖರೀದಿಸಲು 44 ಬಿಲಿಯನ್ ಡಾಲರ್‌ಗಳ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಆದರೆ ಕಳೆದ ಮೇ ತಿಂಗಳಲ್ಲಿ ಟ್ವಿಟರ್ ಸ್ಪ್ಯಾಮ್ ಮತ್ತು ನಕಲಿ ಖಾತೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ ಮತ್ತು ತಾತ್ಕಾಲಿಕವಾಗಿ ಒಪ್ಪಂದವನ್ನು ಸ್ಥಗಿತಗೊಳಿಸುತ್ತಿದೆ ಎಂದು ಮಸ್ಕ್ ಘೋಷಿಸಿದರು. ಸಂಪೂರ್ಣ ಮಾಹಿತಿ ದೊರೆಯುವವರೆಗೆ ಇದು ಮುಂದುವರಿಯಲಿದೆ ಎಂದು ತಿಳಿಸಿದರು. ಮಸ್ಕ್ ಪರ ವಕೀಲರು US ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್‌ಗೆ ಪತ್ರವನ್ನು ಸಲ್ಲಿಸಿ, ಟ್ವಿಟರ್ ಸಂಪೂರ್ಣ ಮಾಹಿತಿಯನ್ನು ಒದಗಿಸಲು ವಿಫಲವಾಗಿದೆ ಎಂದು ಆರೋಪಿಸಿದರು.