ಈ ವರೆಗೂ ಕ್ರಿಕೆಟ್‌ನಲ್ಲಿ ಅದೆಷ್ಟೋ ದಾಖಲೆಗಳು ನಿರ್ಮಾಣವಾಗಿವೆ ಮತ್ತು ಮುರಿಯಲ್ಪಟ್ಟಿವೆ. ಆದರೆ ಇಂಗ್ಲೆಂಡ್‌ನ ದಿಗ್ಗಜ ಕ್ರಿಕೆಟರ್ ನಿರ್ಮಿಸಿರುವ ದಾಖಲೆ ಈವರೆಗೂ ಯಾವೊಬ್ಬ ಕ್ರಿಕೆಟರ್ಗೆ ಮುರಿಯಲು ಸಾಧ್ಯವಾಗಿಲ್ಲ. ಅಲ್ಲದೇ ಅದನ್ನು ಮುರಿಯುವುದು ಕೂಡ ಅಸಾಧ್ಯ ಎಂದೇ ಹೇಳಬಹುದು. ಆದಾಗ್ಯೂ ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರ್ಮಾಣವಾದ ದಾಖಲೆಯಲ್ಲ ಬದಲಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬರೆದ ದಾಖಲೆಯಾಗಿದೆ.
ಹೌದು, ವಿಲ್ಫ್ರೆಡ್ ರೋಡ್ಸ್ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅತೀ ಹೆಚ್ಚು ಪ್ರಥಮ ದರ್ಜೆ ಕ್ರಿಕೆಟ್ಗಳನ್ನು ಆಡಿದ್ದಾರೆ. ಅಲ್ಲದೇ ಈ ಅವಧಿಯಲ್ಲಿ 4000ಕ್ಕೂ ಹೆಚ್ಚು ವಿಕೆಟ್ ಪಡೆದು ವಿಶ್ವದಾಖಲೆ ಬರೆದಿದ್ದಾರೆ. ಈ ಮಾಜಿ ಇಂಗ್ಲಿಷ್ ಆಲ್‌ರೌಂಡರ್ 1898 ಮತ್ತು 1930ರ ನಡುವೆ ಒಟ್ಟು 1110 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು.
ಅತಿ ಹೆಚ್ಚು ಪಂದ್ಯಗಳನ್ನು ಆಡಿದ ವಿಶ್ವ ದಾಖಲೆಯನ್ನು ಬರೆದಿದ್ದು, ಬೇರೆ ಯಾವ ಕ್ರಿಕೆಟಿಗರೂ ಸಹ 1000 ಪ್ರಥಮ ದರ್ಜೆ ಪಂದ್ಯಗಳನ್ನು ಆಡಲು ಈ ವರೆಗೂ ಸಾಧ್ಯವಾಗಿಲ್ಲ. ಸಚಿನ್ ತೆಂಡೂಲ್ಕರ್ (310 ಪ್ರಥಮ ದರ್ಜೆ ಪಂದ್ಯಗಳು) ಮತ್ತು ಡಾನ್ ಬ್ರಾಡ್ಮನ್ (234 ಪ್ರಥಮ ದರ್ಜೆ ಪಂದ್ಯಗಳು) ಅವರಂತಹ ಶ್ರೇಷ್ಠ ಕ್ರಿಕೆಟಿಗರು ಕೂಡ ಈ ವಿಶ್ವ ದಾಖಲೆಯ ಸಮೀಪಕ್ಕೆ ಹೋಗಲು ಸಾಧ್ಯವಾಗಿಲ್ಲ.
4204 ವಿಕೆಟ್ ಪಡೆದ ವಿಶ್ವದ ಏಕೈಕ ಆಟಗಾರ: ವಿಲ್ಫ್ರೆಡ್ ರೋಡ್ಸ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 16.72 ಸರಾಸರಿಯಲ್ಲಿ ಒಟ್ಟು 4,204 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇಂಗ್ಲೆಂಡ್‌ನ ಟಿಕ್ ಫ್ರೀಮನ್ 3,776 ವಿಕೆಟ್‌ಗಳೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ಮಾತ್ರವಲ್ಲದೇ ಬ್ಯಾಟಿಂಗ್ನಲ್ಲೂ ರೋಡ್ಸ್ ಉತ್ತಮ ದಾಖಲೆ ಹೊಂದಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 30.81 ಸರಾಸರಿಯಲ್ಲಿ 39,969 ರನ್ ಗಳಿಸಿದ್ದಾರೆ ಇದರಲ್ಲಿ 58 ಶತಕ ಸೇರಿವೆ. ಈ ಆಲ್‌ರೌಂಡರ್ ಇಂಗ್ಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಕೂಡ ಆಡಿದ್ದಾರೆ. ವಿಲ್ಫ್ರೆಡ್ ರೋಡ್ಸ್ ಕೇವಲ ಟೆಸ್ಟ್ ಸ್ವರೂಪದಲ್ಲಿ ತಂಡವನ್ನು ಪ್ರತಿನಿಧಿಸಿದ್ದರು.
ದೀರ್ಘಸ್ವರೂಪದಲ್ಲಿ ಬ್ಯಾಟಿಂಗ್ನಲ್ಲಿ 30.19 ರ ಸರಾಸರಿಯಲ್ಲಿ 2,325 ರನ್ ಗಳಿಸಿದರೇ ಬೌಲಿಂಗ್ನಲ್ಲಿ 127 ವಿಕೆಟ್‌ಗಳನ್ನು ಪಡೆದಿದ್ದಾರೆ.
30 ವರ್ಷಕ್ಕೂ ಹೆಚ್ಚು ಕಾಲ ಟೆಸ್ಟ್ ಆಡಿದ ಏಕೈಕ ಪ್ಲೇಯರ್: ರೋಡ್ಸ್ ಅವರ 30 ವರ್ಷಕ್ಕೂ ಹೆಚ್ಚಿನ ಕಾಲ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ಇವರು ಬರೋಬ್ಬರಿ 30 ವರ್ಷ 315 ದಿನಗಳ ಕಾಲ ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಯಾವೊಬ್ಬ ಆಟಗಾರ ಇಷ್ಟು ವರ್ಷಗಳ ಕಾಲ ಟೆಸ್ಟ್ ಪಂದ್ಯ ಆಡಲು ಸಾಧ್ಯವಾಗಿಲ್ಲ. ಬ್ರಿಯಾನ್ ಕ್ಲೋಸ್ (ಇಂಗ್ಲೆಂಡ್) 26 ವರ್ಷ 356 ದಿನಗಳ ಟೆಸ್ಟ್ ಪಂದ್ಯಗಳನ್ನು ಆಡಿದ್ದು ಇವರು ಎರಡನೇ ಸ್ಥಾನದಲ್ಲಿದ್ದಾರೆ.
ಕ್ರಿಕೆಟರ್ ದೇವರು ಸಚಿನ್ ತೆಂಡೂಲ್ಕರ್ 24 ವರ್ಷ ಟೆಸ್ಟ್ ಪಂದ್ಯಗಳನ್ನು ಆಡಿದ್ದು ಐದನೇ ಸ್ಥಾನದಲ್ಲಿದ್ದಾರೆ. ಇಷ್ಟೆಲ್ಲ ದಾಖಲೆ ಗಳನ್ನು ಬರೆದಿರುವ ದಿಗ್ಗಜ ಕ್ರಿಕೆಟರ್ ರೋಡ್ಸ್ 1973ರಲ್ಲಿ ಅಂದರೇ 95ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದರು.
ಇದನ್ನೂ ಓದಿ: ವಾರೆ ವ್ಹಾ..! ಕೇವಲ 17 ಎಸೆತಗಳಲ್ಲೇ ಪಂದ್ಯ ಗೆದ್ದು ಚರಿತ್ರೆ ಸೃಷ್ಟಿಸಿದ ಟೀಂ ಇಂಡಿಯಾ