ETV Bharat / state

ಇನ್ನೂ ಪತ್ತೆಯಾಗದ ನ್ಯಾಮತಿ ಬ್ಯಾಂಕ್ ದರೋಡೆಕೋರರು: ಮೂರು ರಾಜ್ಯದಲ್ಲಿ ಬೀಡುಬಿಟ್ಟ ದಾವಣಗೆರೆ ಪೊಲೀಸರು - BANK ROBBERY CASE

ನ್ಯಾಮತಿ ಬ್ಯಾಂಕ್ ದರೋಡೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದಾವಣಗೆರೆ ಪೊಲೀಸರು, ತಂಡ ಕಟ್ಟಿಕೊಂಡು ಉತ್ತರಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಬೀಡು ಬಿಟ್ಟಿದ್ದಾರೆ.

NYAMATI SBI BANK ROBBERY CASE
ನ್ಯಾಮತಿ ಎಸ್‌ಬಿಐ ಬ್ಯಾಂಕ್ (ETV Bharat)
author img

By ETV Bharat Karnataka Team

Published : Jan 21, 2025, 5:59 PM IST

ದಾವಣಗೆರೆ: ನ್ಯಾಮತಿ ಎಸ್‌ಬಿಐ ಬ್ಯಾಂಕ್ ದರೋಡೆ ನಡೆದು ಮೂರು ತಿಂಗಳು ಕಳೆದಿದ್ದು, ದರೋಡೆಕೋರರು ಮಾತ್ರ ಈವರೆಗೂ ಪತ್ತೆಯಾಗಿಲ್ಲ. ಅ.28ರಂದು ಸಿನಿಮೀಯ ಶೈಲಿಯಲ್ಲಿ ನಡೆದ ಈ ದರೋಡೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಆರೋಪಿಗಳ ಪತ್ತೆಗಾಗಿ ದಾವಣಗೆರೆ ಪೊಲೀಸರು ತಂಡ ಕಟ್ಟಿಕೊಂಡು ಉತ್ತರಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಬೀಡು ಬಿಟ್ಟಿದ್ದಾರೆ.

ಡಿವಿಆರ್ ಸಹಿತ ಪರಾರಿ: ಬ್ಯಾಂಕ್​ನಲ್ಲಿ ಕಳ್ಳತನ ಆಗಿದೆ ಅನ್ನೋ ಸುದ್ದಿ ಜಿಲ್ಲೆ ಮಾತ್ರವಲ್ಲದೇ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಬ್ಯಾಂಕಿನಿಂದ 12.95 ಕೋಟಿ ಮೌಲ್ಯದ 509 ಗ್ರಾಹಕರ, 17 ಕೆಜಿಗೂ ಅಧಿಕ ಚಿನ್ನಾಭರಣ ಹಾಗೂ ಹಣ ಕದ್ದು ಕಳ್ಳರು ರಾತ್ರೋರಾತ್ರಿ ಕಾಲ್ಕಿತ್ತಿದ್ದರು. ಹೊರಡುವ ಮುನ್ನ ಬ್ಯಾಂಕ್​ನಲ್ಲಿ ಪ್ರಮುಖ ಸಾಕ್ಷಿಯಾಗಬಲ್ಲ ಸಿಸಿಟಿವಿ ಕ್ಯಾಮರಾ ಡಿವಿಆರ್ ತೆಗೆದುಕೊಂಡು, ಇಡೀ ಬ್ಯಾಂಕ್​ನ ತುಂಬೆಲ್ಲಾ ಕಾರದ ಪುಡಿ ಎಸೆದಿದ್ದರು. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಬ್ಯಾಂಕ್​ನಲ್ಲಿ ಬಂಗಾರ ಅಡವಿಟ್ಟಿದ್ದ ಗ್ರಾಹಕರು ಸಾಕಷ್ಟು ಆತಂಕಕ್ಕೆ ಒಳಗಾಗಿದ್ದರು.

ನ್ಯಾಮತಿ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣ (ETV Bharat)

ಹುಡುಕಿದರೂ ಸಿಗದ ಕಳ್ಳರು: ಘಟನೆ ತಿಳಿದು ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಪೊಲೀಸರು, ಅಂದು ಬೆರಳಚ್ಚು ತಜ್ಞರನ್ನ, ಡಾಗ್ ಸ್ಕ್ಯ್ವಾಡ್ ತಂಡವನ್ನು ಕರೆಯಿಸಿ ತಪಾಸಣೆ ಮಾಡಿಸಿದ್ದರು. ಬಳಿಕ ನಿರಂತರ ತನಿಖೆ ನಡೆಸಿದರೂ ಒಂದೇ ಒಂದು ಸುಳಿವು ಕೂಡ ಸಿಗದಿರುವುದು ಬೇಸರದ ವಿಚಾರ. ಬ್ಯಾಂಕ್ ಹೊರಗೆ, ಒಳಗೆ, ಎಲ್ಲ ಕಡೆ ತಡಕಾಡಿದರೂ ಕಳ್ಳರ ಹೆಜ್ಜೆ ಗುರುತು ಪತ್ತೆಯಾಗಿರಲಿಲ್ಲ. ಜಿಲ್ಲೆ, ರಾಜ್ಯ, ಅಂತಾರಾಜ್ಯ ಮಟ್ಟದಲ್ಲಿ ಪೊಲೀಸರು ಹುಡುಕಾಡಿದರೂ ದರೋಡೆಕೋರರ ಸುಳಿವು ಮಾತ್ರ ಸಿಕ್ಕಿಲ್ಲ. ದೊಡ್ಡಮಟ್ಟದ ಕಳ್ಳತನ ಆಗಿದ್ದರಿಂದ ಇದು ದಾವಣಗೆರೆ ಪೊಲೀಸರ ನಿದ್ದೆಗೆಡಸಿದೆ.

ಯುಪಿ, ಮಹಾರಾಷ್ಟ್ರ, ಆಂಧ್ರದಲ್ಲಿ ಬೀಡುಬಿಟ್ಟ ದಾವಣಗೆರೆ ಪೊಲೀಸ್​: ದರೋಡೆ ನಡೆದು ಮೂರು ತಿಂಗಳೇ ಉರುಳಿದರೂ ದಾವಣಗೆರೆ ಪೊಲೀಸರಿಗೆ ದರೋಡೆಕೋರರ ಚಿಕ್ಕ ಸುಳಿವು ಸಿಕ್ಕಿಲ್ಲ. ಆದ್ದರಿಂದ ದಾವಣಗೆರೆ ಪೊಲೀಸರು ನಾಲ್ಕೈದು ತಂಡ ಕಟ್ಟಿಕೊಂಡು ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಬೀಡು ಬಿಟ್ಟಿದ್ದಾರೆ ಎಂಬ ಮಾಹಿತಿ ಇದೆ.

ಪ್ರಕರಣ ಸ್ಯಾಮ್ ವರ್ಗೀಸ್ ಅವರ ಹೆಗಲಿಗೆ: ದರೋಡೆ ಪ್ರಕರಣದ ತನಿಖೆ ಐಪಿಎಸ್ ಅಧಿಕಾರಿ ಸ್ಯಾಮ್ ವರ್ಗೀಸ್ ಅವರ ಹೆಗಲಿಗೆ ಏರಿದೆ. ವರ್ಗೀಸ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಎರಡು ತಂಡ ಉತ್ತರಪ್ರದೇಶದಲ್ಲಿ ಈಗಾಗಲೇ ಬೀಡುಬಿಟ್ಟಿವೆ.‌ ದರೋಡೆಕೋರರನ್ನು ಮಟ್ಟ ಹಾಕಲು ಈ ಎರಡು ತಂಡಗಳು ಯುಪಿಯಲ್ಲಿ ಬರೋಬ್ಬರಿ 20 ದಿನಗಳ ಕ್ಯಾಂಪ್ ಹಾಕಿ ಅವರ ಹೆಡೆಮುರಿ ಕಟ್ಟುವ ಪ್ರಯತ್ನ ನಡೆಸಿದೆ.

"ಈಗಾಗಲೇ ಮಹಾರಾಷ್ಟ್ರ, ಉತ್ತರಪ್ರದೇಶ, ಆಂಧ್ರ, ತಮಿಳುನಾಡು ರಾಜ್ಯಕ್ಕೆ ಹೋಗಿ ಬಂದಿವೆ. ಉತ್ತರಪ್ರದೇಶದಲ್ಲಿ ಎರಡು ತಂಡಗಳು ಕಟ್ಟಿಕೊಂಡು 20 ದಿನಗಳ ಕ್ಯಾಂಪ್ ಹಾಕಿ ದರೋಡೆಕೋರರ ಮಟ್ಟಹಾಕಲು ಯತ್ನ ನಡೆದಿದೆ.‌ ಈಗಾಗಲೇ ಈ ಪ್ರಕರಣ ಐಪಿಎಸ್ ಅಧಿಕಾರಿ ಸ್ಯಾಮ್ ವರ್ಗೀಸ್ ಅವರ ಹೆಗಲಿಗೆ ಬಂದಿದೆ. ತನಿಖೆ ನಡೆಯುತ್ತಿದೆ. ಬೇರೆ ರಾಜ್ಯಗಳಲ್ಲಿ ನಮ್ಮ ತಂಡಗಳು ಬೀಡುಬಿಟ್ಟಿವೆ. ಸ್ವಲ್ಪ ದಿನದಲ್ಲಿ ದರೋಡೆಕೋರರು ಸಿಗಲಿದ್ದಾರೆ" ಎಂದು ನ್ಯಾಮತಿ ಪಿಐ ರವಿಕುಮಾರ್ ಅವರು ಈಟಿವಿ ಭಾರತಕ್ಕೆ ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ.

ನ್ಯಾಯಾಲಯದ ಕದ ತಟ್ಟಿದ ಗ್ರಾಹಕರು: ಗ್ರಾಹಕರಿಗೆ ಶೇ.60ರಷ್ಟು ಅನುಪಾತದಲ್ಲಿ ಸೆಟ್ಲಮೆಂಟ್ ಮಾಡಿ ಬ್ಯಾಂಕ್ ಸಿಬ್ಬಂದಿ ಕೈತೊಳೆದುಕೊಳ್ಳಲು ಮುಂದಾಗಿದೆ. ಬ್ಯಾಂಕ್ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದ್ದು, ಪ್ರಸ್ತುತ ಚಿನ್ನಕ್ಕಿರುವ ದರದಂತೆ ಬೆಲೆ ಕಟ್ಟಿಕೊಡಲು ಒತ್ತಾಯಿಸಲಾಗುತ್ತಿದೆ. ಇದಕ್ಕೆ ಒಪ್ಪದ ಬ್ಯಾಂಕ್ ಸಿಬ್ಬಂದಿ ವಿರುದ್ಧ 507 ಜನರ ಪೈಕಿ 200ಕ್ಕೂ ಹೆಚ್ಚು ಜನ ನ್ಯಾಯಾಲಯದ ಕದ ತಟ್ಟಿದ್ದಾರೆ ಎಂದು ಗ್ರಾಹಕ ತೀರ್ಥಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ ‌"ಬ್ಯಾಂಕ್ ದರೋಡೆ ಆಗಿದಾಗಿನಿಂದ ಸಿಬ್ಬಂದಿ ಸೊಪ್ಪು ಹಾಕ್ತಿಲ್ಲ. ಗ್ರಾಹಕರ ಸಭೆ ಕೂಡ ಕರೆದಿಲ್ಲ. ಒಂದು ತೊಲ (10 ಗ್ರಾಂ) ಚಿನ್ನಕ್ಕೆ ಕೇವಲ 50 ಸಾವಿರ ಕೊಡಲು ಬ್ಯಾಂಕ್ ಮುಂದಾಗಿದೆ. ನಮ್ಮದು 17 ತೊಲ ಬಂಗಾರ ಕಳುವಾಗಿದೆ. ಪ್ರಸ್ತುತ ದಿನಗಳಲ್ಲಿ ಚಿನ್ನಕ್ಕಿರುವ ದರದಂತೆ ನಮಗೆ ಬೆಲೆ ಕಟ್ಟಿಕೊಡುವಂತೆ 200ಕ್ಕೂ ಹೆಚ್ಚು ಜನ ನ್ಯಾಯಾಲಯದ ಮೊರೆ ಹೋಗಿದ್ದೇವೆ" ಎಂದರು.

ಇದನ್ನೂ ಓದಿ: ದಾವಣಗೆರೆ: ಗ್ಯಾಸ್​ ಕಟರ್​ ಬಳಸಿ 12.95 ಕೋಟಿ ಮೌಲ್ಯದ ಚಿನ್ನಾಭರಣ ಕಳವು; ಸಾಕ್ಷಿ ನಾಶಕ್ಕೆ ಕಳ್ಳರ ಖತರ್ನಾಕ್​ ಪ್ಲಾನ್​ - GOLD THEFT

ETV Bharat Logo

Copyright © 2025 Ushodaya Enterprises Pvt. Ltd., All Rights Reserved.