ಹೈದರಾಬಾದ್: ಕೊಠಡಿಯೊಂದರಲ್ಲಿ ಸಾವಿರಾರು ಚೇಳುಗಳ ಇರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭಾನುವಾರ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ ಕೇವಲ ಗಂಟೆಗಳಲ್ಲಿ ನಾಲ್ಕು ದಶಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವಿಡಿಯೋದ ಮೂಲ ಎಲ್ಲಿಯದು ಎಂಬುದು ತಿಳಿದು ಬಂದಿಲ್ಲ.
ಈ ವಿಡಿಯೋ ರೆಕಾರ್ಡಿಂಗ್‌ನಲ್ಲಿ ವ್ಯಕ್ತಿಯೊಬ್ಬ ಪೋರ್ಚುಗೀಸ್ ಭಾಷೆಯಲ್ಲಿ ಮಾತನಾಡಿದ್ದು, ಕಮೆಂಟ್ ಬಾಕ್ಸ್ನಲ್ಲಿ ಕೆಲವರು ವಿಡಿಯೋವನ್ನು ಬ್ರೆಜಿಲ್‌ನಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಈ ಚೇಳುಗಳು ಡೆತ್‌ಸ್ಟಾಕರ್ ಎಂಬ ಚೇಳುಗಳ (ಲೀಯರಸ್ ಕ್ವಿನ್ಕ್ವೆಸ್ಟ್ರಿಯಾಟಸ್) ಜಾತಿಗೆ ಸೇರಿದ್ದು, ಅತ್ಯಂತ ಅಪಾಯಕಾರಿ ವಿಷ ಮತ್ತು ಅತ್ಯಂತ ದುಬಾರಿ ದ್ರವವನ್ನು ಹೊಂದಿವೆ ಎನ್ನಲಾಗ್ತಿದೆ. ಆದ್ದರಿಂದ ಇದು ವ್ಯವಹಾರಿಕ ಉದ್ದೇಶದಿಂದ ಸಾಕಲಾಗುತ್ತಿದೆ ಎಂಬ ಹಲವು ಕಮೆಂಟ್‌ಗಳನ್ನು ನೆಟ್ಟಿಗರು ಮಾಡಿದ್ದಾರೆ.
ಕಳೆದ ವರ್ಷವೂ ಇದೇ ವಿಡಿಯೋವನ್ನು ರೆಡ್ಡಿಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಆ ವಿಡಿಯೋದಲ್ಲಿಯೂ ಕೋಣೆಯಲ್ಲಿ ಡೆತ್‌ಸ್ಟಾಕರ್ ಚೇಳುಗಳು ತುಂಬಿಕೊಂಡಿದ್ದವು. ಡೆತ್‌ಸ್ಟಾಕರ್ ಚೇಳು ಕುಟುಕಿದರೆ ಅತ್ಯಂತ ನೋವನ್ನು ಅನುಭವಿಸಬೇಕಲಾಗುತ್ತದೆ. ಇದು ಪಾರ್ಶ್ವವಾಯುವಿಗೂ ಕಾರಣವಾಗುತ್ತದೆ. ತನ್ನ ಮುಖ್ಯ ಆಹಾರ ಕೀಟಗಳನ್ನು ಬೇಟೆಯಾಡಲು ಚೇಳು ಈ ವಿಷವನ್ನು ಬಳಸುತ್ತವೆ ಎನ್ನಲಾಗುತ್ತಿದೆ.
ಕುತೂಹಲಕಾರಿಯಾದ ಇನ್ನೊಂದು ವಿಷಯವೆನೆಂದರೇ ಡೆತ್‌ಸ್ಟಾಕರ್ ಚೇಳುಗಳ ವಿಷವು ಪ್ರತಿ ಗ್ಯಾಲನ್‌ಗೆ 39 ಮಿಲಿಯನ್ ಡಾಲರ್ ಆಗಿದೆ. ಆದರೆ ಒಂದು ಗ್ಯಾಲನ್ ಅನ್ನು ಖರೀದಿಸುವುದು ಅಷ್ಟು ಸುಲಭವಲ್ಲ. ವಿಶ್ವದಲ್ಲಿ ಸುಮಾರು 2,000 ಜಾತಿಯ ಚೇಳುಗಳಿವೆ. ಆದರೆ ಅವುಗಳಲ್ಲಿ 30 ರಿಂದ 40 ಮಾತ್ರ ಮನುಷ್ಯರನ್ನು ಕೊಲ್ಲುವಷ್ಟು ಪ್ರಬಲವಾದ ವಿಷವನ್ನು ಹೊಂದಿವೆ.
ಇದನ್ನೂ ಓದಿ :ವಿಷ ಜಂತು ಚೇಳು ಈತನಿಗೆ ಆಟಿಕೆ.. ವಿಡಿಯೋ ವೈರಲ್