ETV Bharat / bharat

ಹಿಮಾಚಲ ಪ್ರದೇಶದ ಶಿಂಕು ಲಾ ಪಾಸ್ ಸಮೀಪ ಹಿಮಪಾತ; ಇಬ್ಬರ ಸಾವು, ಓರ್ವ ನಾಪತ್ತೆ

ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಹಿಮ ಕುಸಿತ - ಇಬ್ಬರು ಕಾರ್ಮಿಕರು ಸಾವು - ನಾಪತ್ತೆಯಾಗಿರುವ ಮತ್ತೋರ್ವನ ಪತ್ತೆಗೆ ಶೋಧ

author img

By

Published : Feb 6, 2023, 10:56 AM IST

ಹಿಮಾಚಲ ಪ್ರದೇಶದ ಶಿಂಕು ಲಾ ಪಾಸ್ ಸಮೀಪ ಹಿಮಪಾತ; ಇಬ್ಬರ ಸಾವು, ಓರ್ವ ನಾಪತ್ತೆ
snowfall-in-himachal-pradesh-death-of-two-a-missing-person

ಲಾಹೌಲ್​- ಸ್ಪಿಟಿ (ಹಿಮಾಚಲ ಪ್ರದೇಶ): ಲಾಹೌಲ್-ಸ್ಪಿಟಿ ಜಿಲ್ಲೆಯ ಲಾಹೌಲ್ ಉಪವಿಭಾಗದ ಶಿಂಕು ಲಾ ಪಾಸ್ ಬಳಿ ಹಿಮಕುಸಿತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದರೆ, ಮತ್ತೊರ್ವ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಇಬ್ಬರು ಕಾರ್ಮಿಕರು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಹಿಮಪಾತದಿಂದ ಸ್ನೋ ಕಟ್ಟರ್ ಮತ್ತು ಡೋಜರ್ ಯಂತ್ರಗಳೊಡನೆ ಅವರು ಜೀವಂತ ಸಮಾಧಿ ಆಗಿದ್ದಾರೆ. ಇನ್ನು ನಾಪತ್ತೆಯಾದ ವ್ಯಕ್ತಿ ಪತ್ತೆಗೆ ರಕ್ಷಣಾ ಕಾರ್ಯ ಸಾಗಿದ್ದು, ಸೋಮವಾರ ಶೋಧ ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಮಪಾತದ ಸುದ್ದಿ ತಿಳಿಯುತ್ತಿದ್ದಂತೆ ಬಿಆರ್​ಒ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ನಾಪತ್ತೆಯಾದವರ ಪತ್ತೆಗೆ ಮುಂದಾಗಿದ್ದು, ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಅಧಿಕಾರಿಗಳ ಪ್ರಕಾರ, ಸಾವನ್ನಪ್ಪಿದವರನ್ನು ರಾಮ್​ ಬುದ್ದ (19) ಮತ್ತು ರಾಕೇಶ್​ ಎಂದು ಗುರುತಿಸಲಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ಪಸ್ಸಂಗ್​​ ಛೆರಿಂಗ್​ ಲಾಮ್​ ಎಂದು ಗುರುತಿಸಲಾಗಿದ್ದು, ಈತ ನೇಪಾಳ ಮೂಲದವರು ಎಂದು ಗುರುತಿಸಲಾಗಿದೆ.

ಹಿಮಾಚಲ ಪ್ರದೇಶ
ಹಿಮಾಚಲ ಪ್ರದೇಶ

ಮುಂದುವರೆಯಲಿರುವ ಶೋಧ ಕಾರ್ಯ: ಹಲವು ಗಂಟೆಗಳ ಕಾಲ ಸಾಗಿದ ನಾಪತ್ತೆ ಕಾರ್ಯವನ್ನು ತಾಪಾಮಾನದಲ್ಲಿ ಇಳಿಕೆ ಮತ್ತು ಕಡಿಮೆ ಗೋಚರತೆ ಪರಿಣಾಮ ನಿಲ್ಲಿಸಲಾಯಿತು. ಇನ್ನು ಈ ಕುರಿತು ಮಾತನಾಡಿರುವ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ, ನಾಪತ್ತೆಯಾದ ವ್ಯಕ್ತಿಯ ಪತ್ತೆ ಕಾರ್ಯಕ್ಕೆ ತಾತ್ಕಾಲಿಕವಾಗಿ ಬ್ರೇಕ್​ ನೀಡಲಾಗಿದ್ದು, ಸೋಮವಾರದಿಂದ ಮತ್ತೆ ಈ ಕಾರ್ಯಾಚರಣೆ ನಡೆಸಲಾಗುವುದು ಎಂದರು. ಭಾನುವಾರ ಮಧ್ಯಾಹ್ನ ಸ್ಪಿಟಿ ಮತ್ತು ಲೌಹುಲ್​ದಲ್ಲಿ ಹಿಮಪಾತ ಸಂಭವಿಸಿದೆ. ಈ ವೇಳೆ ಇಬ್ಬರು ಸಾವನ್ನಪ್ಪಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಹಿಮಾಲಯ ಪ್ರದೇಶದಲ್ಲಿ ಚಳಿಗಾಲದಲ್ಲಿ ಅನೇಕ ಹಿಮಪಾತಗಳು ಸಂಭವಿಸುತ್ತದೆ. ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಗೆ ಹಿಮಪಾತಗಳು ಹೆಚ್ಚಿದೆ. ಈ ಹಿಂದೆ ಮಾರ್ಚ್​ ಅಥವಾ ಫೆಬ್ರವರಿ ಅಂತ್ಯದಲ್ಲಿ ಈ ರೀತಿ ಹಿಮಪಾತಗಳು ಸಂಭವಿಸುತ್ತಿದ್ದವು. ಆದರೆ ಇದೀಗ ಅವಧಿಗಿಂತ ಮುಂಚೆಯೇ ಹಿಮಾಲಯ ಪ್ರದೇಶಗಳಲ್ಲಿ ಈ ರೀತಿ ಹಿಮಪಾತ ಸಂಭವಿಸುತ್ತಿದೆ.

ನಾಲ್ಕು ದಿನಗಳ ಹಿಂದೆ ಉತ್ತರ ಕಾಶ್ಮೀರದ ಗುಲ್ಮಾರ್ಗ್​ನಲ್ಲಿ ಸ್ಕೈ ರೆಸಾರ್ಟ್​​ನಲ್ಲಿ ಹಿಮಪಾತ ಸಂಭವಿಸಿದ್ದು, ಇಬ್ಬರು ಪೊಲೀಸ್​ ಸ್ಕೈಯರ್ ಇಬ್ಬರು ಸಾವನ್ನಪ್ಪಿದ್ದಾರೆ. 19 ಜನರ ರಕ್ಷಣೆಯನ್ನು ಮಾಡಲಾಗಿತ್ತು. ಹಿಮಪಾತ ಹಿನ್ನೆಲೆ ಮುನ್ನೆಚ್ಚರಿಕೆ ಜಮ್ಮುವಿನ ಕಾರ್ಗಿಲ್, ಲಡಾಖ್​ ಸೇರಿದಂತೆ ಹಲವೆಡೆ ಹಿಮಪಾತ ಸಂಭವಿಸುವ ಹಿನ್ನೆಲೆ ಈಗಾಗಲೇ ಲಡಾಖ್​ ವಲಯದ ಆಯುಕ್ತರು ಇದರ ನಿರ್ವಹಣೆಗೆ ಸಿದ್ಧರಾಗಿರುವಂತೆ ತಿಳಿಸಿದ್ದಾರೆ. ಹಿಮಪಾತ ಪೀಡಿತ ಪ್ರದೇಶಗಳಿಗೆ ಸೂಚನೆ ನೀಡುವುದು ಅತ್ಯಗತ್ಯ ಮತ್ತು ಹಿಮಪಾತದ ಸಮಯದಲ್ಲಿ ಮತ್ತು ನಂತರ ಅಂತಹ ಗುರುತಿಸಲಾದ ಪ್ರದೇಶಗಳಲ್ಲಿ ಚಲನೆಯನ್ನು ನಿರ್ಬಂಧಿಸಲು ಮತ್ತು ಹಿಮಪಾತದ ಅಪಾಯದ ಬಗ್ಗೆ ಜನರಿಗೆ ತಿಳಿಸುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಈಗಾಗಲೇ ಪ್ರೋಟೋಕಾಲ್ ಪ್ರಕಟಿಸಿದ್ದಾರೆ. ಹಿಮಾಲಯ ಪರ್ವತ ಶ್ರೇಣಿಗಳ ರಾಜ್ಯಗಳಲ್ಲಿ ಮುಂದಿನ ಎರಡು ತಿಂಗಳುಗಳ ಕಾಲ ಅನೇಕ ಕಡೆ ಹಿಮಪಾತ ಸಂಭವಿಸುವ ಸಾಧ್ಯತೆ ಇದ್ದು, ವಿಪತ್ತು ನಿರ್ವಹಣೆ ತಂಡ ಕೂಡ ಸಜ್ಜಾಗಿದೆ.

ಇದನ್ನೂ ಓದಿ: 23ರ ವಧುವನ್ನು ವರಿಸಿದ 65ರ ವೃದ್ಧ.. ಅಪ್ಪನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ 6 ಹೆಣ್ಣುಮಕ್ಕಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.