ETV Bharat / bharat

'ಮಹಿಳಾ ಸಿಬ್ಬಂದಿ ಹೆಚ್ಚಿರುವ ಶಾಲೆಗಳಲ್ಲಿ ಜಗಳ ಜಾಸ್ತಿ': ರಾಜಸ್ಥಾನ ಶಿಕ್ಷಣ ಸಚಿವ - ವಿವಾದಾತ್ಮಕ ಹೇಳಿಕೆ ನೀಡಿದ ಶಿಕ್ಷಣ ಸಚಿವ

ರಾಜಸ್ಥಾನ ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋತಾಸ್ರ, ಸದ್ಯಕ್ಕೆ REET ಪರೀಕ್ಷೆಯ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಟೀಕೆಯನ್ನು ಎದುರಿಸುತ್ತಿದ್ದು, ಈಗ ಮತ್ತೊಂದು ವಿವಾದ ಅವರ ಹೆಗಲೇರಿದೆ.

'Schools with more women staff witness quarrels': Rajasthan Minister Dotasra stokes controversy
'ಮಹಿಳಾ ಸಿಬ್ಬಂದಿ ಹೆಚ್ಚಿರುವ ಶಾಲೆಗಳಲ್ಲೇ ಜಗಳ ಜಾಸ್ತಿ, ಸಹದ್ಯೋಗಿಗಳು ಸ್ಯಾರಿಡನ್ ತೆಗೆದುಕೊಳ್ಳುತ್ತಾರೆ'
author img

By

Published : Oct 14, 2021, 10:24 AM IST

ಜೈಪುರ(ರಾಜಸ್ಥಾನ): ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಅಕ್ಟೋಬರ್ 11ರಂದು ಆಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ರಾಜಸ್ಥಾನ ಸಚಿವರೊಬ್ಬರು ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ.

ಹೆಚ್ಚು ಮಹಿಳಾ ಸಿಬ್ಬಂದಿ ಇರುವ ಶಾಲೆಗಳಲ್ಲಿಯೇ ಜಗಳಗಳು ಹೆಚ್ಚಾಗಿ ನಡೆಯುತ್ತವೆ. ಇವರಿಂದ ಶಾಲೆಯ ಪ್ರಿನ್ಸಿಪಾಲ್ ಮತ್ತು ಉಳಿದ ಸಹದ್ಯೋಗಿ ಶಿಕ್ಷಕರು ಸ್ಯಾರಿಡನ್ (ತಲೆ ನೋವಿನ ಮಾತ್ರೆ) ತೆಗೆದುಕೊಳ್ಳುತ್ತಾರೆ ಎಂದು ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋತಾಸ್ರ ವಿವಾದಾತ್ಮಕ ಹೇಳಿಕೆ ನೀಡಿದ್ದು, ಸಾಕಷ್ಟ ಟೀಕೆಗೆ ಗುರಿಯಾಗಿದೆ.

  • School with more women staffers sees more squabbles: Rajasthan Education Minister Dotasra

    Insensitive and disgusting remark by him about Women.

    He should apologise immediately for insulting the Nari Shakti. pic.twitter.com/4yhSidnzAp

    — Vanathi Srinivasan (@VanathiBJP) October 13, 2021 " class="align-text-top noRightClick twitterSection" data=" ">

ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ ವಿರೋಧ ಪಕ್ಷ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಅಲ್ಕಾ ಗುರ್ಜಾರ್, ಈ ರೀತಿಯ ಮಹಿಳಾ ವಿರೋಧಿ ಹೇಳಿಕೆ ನೀಡುವುದು ಅವರ ಕೊಳಕು ಮನಸ್ಥಿತಿಯನ್ನು ಸೂಚಿಸುತ್ತದೆ ಎಂದು ಹರಿಹಾಯ್ದಿದ್ದಾರೆ.

ಜೊತೆಗೆ ಇಂದು ಮಹಿಳೆಯರು ಎಲ್ಲಾ ರಂಗದಲ್ಲೂ ಛಾಪು ಮೂಡಿಸುತ್ತಿದ್ದಾರೆ. ಮನೆ ಮತ್ತು ಸಮಾಜದ ಜವಾಬ್ದಾರಿಯನ್ನೂ ಅವರು ಹೊತ್ತುಕೊಂಡಿದ್ದಾರೆ ಎಂದು ಅಲ್ಕಾ ಗುರ್ಜಾರ್ ಹೇಳಿದರು.

ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ ರಾಜ್ಯದ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸುಮನ್ ಶರ್ಮಾ, 'ಅವರು ಶಿಕ್ಷಣ ಮಂತ್ರಿಯಲ್ಲ, ಮೂರ್ಖ ಮಂತ್ರಿ' ಎಂದು ಕಿಡಿಕಾರಿದ್ದಾರೆ. ಸಚಿವಸ್ಥಾನದಲ್ಲಿ ಇದ್ದು, ಆ ರೀತಿಯ ಹೇಳಿಕೆಗಳನ್ನು ಹೇಗೆ ನೀಡುತ್ತಾರೆ? ಅವರು ಖಂಡಿತಾ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.

ಗೋವಿಂದ್ ಸಿಂಗ್ ದೋತಾಸ್ರ ಸದ್ಯಕ್ಕೆ REET ಪರೀಕ್ಷೆಯ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಟೀಕೆಯನ್ನು ಎದುರಿಸುತ್ತಿದ್ದು, ಈಗ ಮತ್ತೊಂದು ವಿವಾದ ಅವರ ಹೆಗಲೇರಿದೆ.

ಇದನ್ನೂ ಓದಿ: ದುರ್ಗಾಪೂಜೆಯ ವೇಳೆ ಗುಂಡಿನ ದಾಳಿ: ಹಬ್ಬದ ಸಂಭ್ರಮದಲ್ಲಿದ್ದ ಓರ್ವ ಸಾವು, ಮೂವರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.