ಔರೈಯಾ(ಉತ್ತರ ಪ್ರದೇಶ) : ಡಿಸೆಂಬರ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಡಬೇಕಾಗಿದ್ದ ಜೋಡಿವೊಂದು ರಸ್ತೆ ಅಪಘಾತ(Road Accident)ದಲ್ಲಿ ಪ್ರಾಣ ಕಳೆದುಕೊಂಡಿದ್ದು, ಒಟ್ಟಿಗೆ ಅಂತ್ಯಕ್ರಿಯೆ ನಡೆಸಲಾಗಿದೆ. ಉತ್ತರ ಪ್ರದೇಶದ ಔರೈಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಬಿಧುನಾ ಕೊತ್ವಾಲಿ ಪ್ರದೇಶದ ನವೀನ್ ನಗರದ ಸಚಿನ್ ಹಾಗೂ ಸೋನಿ(love couple) ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಎರಡು ಕುಟುಂಬದವರು ಒಪ್ಪಿಗೆ ಸೂಚಿಸಿದ್ದರಿಂದ ಬರುವ ಡಿಸೆಂಬರ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಡುವ ನಿರ್ಧಾರ ಮಾಡಿದ್ದರು.
ಮದುವೆ ಶಾಪಿಂಗ್ಗೋಸ್ಕರ ಇಬ್ಬರು ಕಾನ್ಪುರ್ಕ್ಕೆ ತೆರಳಿದ್ದರು. ಶಾಪಿಂಗ್ ಮುಗಿಸಿಕೊಂಡು ಸಂಜೆ ವೇಳೆ ಮನೆಗೆ ಬರುತ್ತಿದ್ದಾಗ ಶಿವಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವಾಹನವೊಂದು ಇವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಕಿತ್ಸೆಗೋಸ್ಕರ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಮಾರ್ಗ ಮಧ್ಯವೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿರಿ: ಆಸ್ಟ್ರೇಲಿಯಾದಲ್ಲಿ 2022ರ ಟಿ20 ವಿಶ್ವಕಪ್: ನವೆಂಬರ್ 13ರಂದು ಎಂಸಿಜಿಯಲ್ಲಿ ಫೈನಲ್ ಮ್ಯಾಚ್
ಸುದ್ದಿ ತಿಳಿಯುತ್ತಿದ್ದಂತೆಯೇ ಎರಡು ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಇದರ ಬೆನ್ನಲ್ಲೇ ಮೃತ ಜೋಡಿ(young couple dead)ಯನ್ನ ಒಟ್ಟಿಗೆ ಅಂತ್ಯಸಂಸ್ಕಾರ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.