ETV Bharat / bharat

ಕೊರೊನಾರ್ಭಟ: ಸಂಜೆ ಫಾರ್ಮಾ ಕಂಪನಿಗಳ ಜೊತೆ ಮೋದಿ ಮಾತುಕತೆ - ರೆಮ್ಡೆಸಿವಿರ್​ನ ಕೊರತೆ

ಫಾರ್ಮಾ ಕಂಪನಿಗಳ ಜೊತೆ ಮೋದಿ ಇಂದು ಮಾತುಕತೆ ನಡೆಸಲಿದ್ದಾರೆ. ಹಾಗೆ ರೆಮ್ಡೆಸಿವಿರ್​ನ ಕೊರತೆ ಕಾರಣಕ್ಕೆ ಈ ಸಭೆ ಮಹತ್ವ ಪಡೆದುಕೊಂಡಿದೆ.

PM to meet pharma cos this evening amid Covid-19 surge
ಇಂದು ಸಂಜೆ ಫಾರ್ಮಾ ಕಂಪನಿಗಳ ಜೊತೆ ಮೋದಿ ಮಾತುಕತೆ
author img

By

Published : Apr 19, 2021, 3:57 PM IST

ನವದೆಹಲಿ: ದೇಶಾದ್ಯಂತ ಕೋವಿಡ್ -19 ಪ್ರಕರಣಗಳು ನಿರಂತರವಾಗಿ ಅದರಲ್ಲೂ ಶರವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 6 ಗಂಟೆಗೆ ಪ್ರಮುಖ ಫಾರ್ಮಾ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿ ಮಾಡಲಿದ್ದಾರೆ.

ರೆಮ್ಡೆಸಿವಿರ್​​ನ ಕೊರತೆ ಕಾರಣಕ್ಕೆ ಈ ಸಭೆ ಮಹತ್ವ ಪಡೆದುಕೊಂಡಿದೆ. ಇದು ಆಸ್ಪತ್ರೆಗೆ ಅಗತ್ಯವಿರುವ ಹಾಗೂ ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಯುಎಸ್ಎಫ್‌ಡಿಎಯಿಂದ ಸಂಪೂರ್ಣವಾಗಿ ಅನುಮೋದಿಸಲ್ಪಟ್ಟ ಮೊದಲ ಮತ್ತು ಏಕೈಕ ಆಂಟಿ-ವೈರಲ್ ಔಷಧವಾಗಿದೆ.

ಇನ್ನು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಹಾಗೂ ಕೊರೊನಾ ನಿಯಂತ್ರಣಕ್ಕೆ ತೆಗೆದುಕೊಂಡ ಯೋಜನಗೆಗಳ ಸ್ಥಿತಿಯನ್ನು ಪರಿಶೀಲಿಸಲು ಮತ್ತು ಔಷಧಗಳು, ಆಮ್ಲಜನಕ, ವೆಂಟಿಲೇಟರ್‌ಗಳು ಮತ್ತು ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದ ವಿವಿಧ ಅಂಶಗಳ ಬಗ್ಗೆ ಶನಿವಾರ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮೋದಿ ಮಾತನಾಡಿದ್ದರು.

ಈ ಸಭೆಯಲ್ಲಿ ಮಾತನಾಡಿದ ಮೋದಿ, ಭಾರತದ ಔಷಧೀಯ ಉದ್ಯಮದ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ ಹಾಗೆ ರೆಮ್ಡೆಸಿವಿರ್​ ಮತ್ತು ಇತರ ಔಷಧಗಳ ಪೂರೈಕೆಯ ಸ್ಥಿತಿಯನ್ನು ಅವರು ಪರಿಶೀಲಿಸಿದದ್ದಾರೆ ಎಂದು ಸರ್ಕಾರದ ಪ್ರಕಟಣೆ ಮೂಲಕ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.