ETV Bharat / bharat

ಉಕ್ರೇನ್ ತೊರೆದ ಭಾರತೀಯ ವಿದ್ಯಾರ್ಥಿಗಳಿಗೆ ರಷ್ಯಾ ಆಹ್ವಾನ - ಉಕ್ರೇನ್‌ನಲ್ಲಿ ವೈದ್ಯಕೀಯ ವ್ಯಾಸಂಗ

ಭಾರತ ಹಾಗೂ ರಷ್ಯಾದಲ್ಲಿ ವೈದ್ಯಕೀಯ ಪಠ್ಯಕ್ರಮವು ಬಹುತೇಕ ಒಂದೇ ಆಗಿದೆ. ಹೀಗಾಗಿ, ಉಕ್ರೇನ್ ತೊರೆದಿರುವ ಭಾರತೀಯ ವಿದ್ಯಾರ್ಥಿಗಳು ರಷ್ಯಾದಲ್ಲಿಯೇ ತಮ್ಮ ಶಿಕ್ಷಣವನ್ನು ಮುಂದುವರಿಸಬಹುದು ಎಂದು ಕಾನ್ಸುಲ್ ಜನರಲ್ ಒಲೆಗ್ ಅವ್ದೀವ್ ಅವರು ತಿಳಿಸಿದ್ದಾರೆ.

ಕಾನ್ಸುಲ್ ಜನರಲ್ ಒಲೆಗ್ ಅವ್ದೀವ್
ಕಾನ್ಸುಲ್ ಜನರಲ್ ಒಲೆಗ್ ಅವ್ದೀವ್
author img

By

Published : Nov 11, 2022, 1:49 PM IST

ಚೆನ್ನೈ (ತಮಿಳುನಾಡು): ಉಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾದ ನಂತರ ಮೊದಲ ಬಾರಿಗೆ ಉಕ್ರೇನ್ ತೊರೆದ ಭಾರತೀಯ ವಿದ್ಯಾರ್ಥಿಗಳು ರಷ್ಯಾದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಬಹುದು ಎಂದು ರಷ್ಯಾ ಹೇಳಿದೆ.

ಈ ಬಗ್ಗೆ ಚೆನ್ನೈನಲ್ಲಿ ಮಾತನಾಡಿದ ರಷ್ಯಾದ ಕಾನ್ಸುಲ್ ಜನರಲ್ ಒಲೆಗ್ ಅವ್ದೀವ್, ವೈದ್ಯಕೀಯ ಪಠ್ಯಕ್ರಮವು ಬಹುತೇಕ ಒಂದೇ ಆಗಿರುವುದರಿಂದ ಉಕ್ರೇನ್ ತೊರೆದಿರುವ ಭಾರತೀಯ ವಿದ್ಯಾರ್ಥಿಗಳು ರಷ್ಯಾದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಬಹುದು ಎಂದಿದ್ದಾರೆ.

ಫೆಬ್ರವರಿ 2022 ರ ಕೊನೆಯಲ್ಲಿ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದಾಗ ಅನೇಕ ವಿದ್ಯಾರ್ಥಿಗಳು ಉಕ್ರೇನ್‌ನಿಂದ ಭಾರತಕ್ಕೆ ಬರಬೇಕಾಯಿತು. ಅವರಲ್ಲಿ ಸಾವಿರಾರು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಇದ್ದರು. ಅವರ ಭವಿಷ್ಯ ಇನ್ನೂ ತೂಗುಯ್ಯಾಲೆಯಲ್ಲಿದೆ ಎಂದರು.

ರಷ್ಯಾದಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷ ಅನೇಕ ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ವಿವಿಧ ಕೋರ್ಸ್‌ಗಳನ್ನು ಅಧ್ಯಯನ ಮಾಡಲು ಉಕ್ರೇನ್ ಮತ್ತು ರಷ್ಯಾ ಎರಡಕ್ಕೂ ತೆರಳುತ್ತಾರೆ. ಯುದ್ಧದ ಕಾರಣದಿಂದಾಗಿ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಉಕ್ರೇನ್‌ಗೆ ಮರಳಲು ಸಾಧ್ಯವಾಗುತ್ತಿಲ್ಲ. ಭಾರತಕ್ಕಿಂತ ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಅಗ್ಗವಿದೆ ಎಂದಿದ್ದಾರೆ.

ವ್ಯಾಸಂಗ ಪೂರ್ಣಗೊಳಿಸಲು ಕಾನೂನು ಹೋರಾಟ: ಭಾರತದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಮಾಡಲು ಸುಮಾರು 80 ಲಕ್ಷ ರೂಪಾಯಿ ಪಾವತಿಸಬೇಕು. ಆದರೆ, ಉಕ್ರೇನ್‌ನಲ್ಲಿ ಸುಮಾರು 25 ಲಕ್ಷ ರೂಪಾಯಿಗಳನ್ನು ಪಾವತಿಸಬೇಕು. ಮಾಹಿತಿ ಪ್ರಕಾರ, ಯುದ್ಧದ ಸಮಯದಲ್ಲಿ 90 ವಿಮಾನಗಳ ಸಹಾಯದಿಂದ 22 ಸಾವಿರದ 500 ಭಾರತೀಯರನ್ನು ಉಕ್ರೇನ್‌ನಿಂದ ಭಾರತಕ್ಕೆ ಕರೆತರಲಾಯಿತು. ಅವರಲ್ಲಿ ಹೆಚ್ಚಿನವರು ಉಕ್ರೇನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದವರು. ಇದೀಗ ಈ ವಿದ್ಯಾರ್ಥಿಗಳು ಕಳೆದ 9 ತಿಂಗಳಿಂದ ತಮ್ಮ ವ್ಯಾಸಂಗ ಪೂರ್ಣಗೊಳಿಸಲು ಕಾನೂನು ಹೋರಾಟವನ್ನೂ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದ ಶಾಲೆಗಳಲ್ಲಿ ತಿಂಗಳ 3ನೇ ಶನಿವಾರ ಚೆಸ್‌ ಕಲಿಕೆಗೆ ಅವಕಾಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.