ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಗುರುವಾರ ಮೊದಲ ಬಾರಿಗೆ ಮಾತುಕತೆ ನಡೆಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಒಟ್ಟಾಗಿ ಕೆಲಸ ಮಾಡುತ್ತೇವೆ. ಸಮಗ್ರ ಮತ್ತು ಸಮತೋಲಿತ ಮುಕ್ತ ವ್ಯಾಪಾರ ಒಪ್ಪಂದದ ಪ್ರಾಮುಖ್ಯತೆಯನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರತಿ ಮಗುವೂ ಬೆಳಗುವಂತೆ, ಭರವಸೆಯ ಬ್ರಿಟನ್ ರೂಪಿಸುತ್ತೇವೆ: ಬ್ರಿಟನ್ನ ಪ್ರಧಾನಿ ಭರವಸೆ
ಇದಕ್ಕೆ ಪ್ರತಿಯಾಗಿ ರಿಷಿ ಸುನಕ್ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದು, ಎರಡು ಮಹಾನ್ ಪ್ರಜಾಪ್ರಭುತ್ವ ರಾಷ್ಟ್ರಗಳ ದ್ವಿಪಕ್ಷೀಯ ಪಾಲುದಾರಿಕೆಯನ್ನು ಗಾಢವಾಗಿಸುವ ಮೂಲಕ ನಾವು ಏನಾದರೂ ಸಾಧಿಸಬಹುದು ಎಂಬುದರ ಕುರಿತು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
ಬ್ರಿಟನ್ ಮತ್ತು ಭಾರತ ನಡುವೆ ತುಂಬಾ ಪಾಲುದಾರಿಕೆ ಇರುತ್ತದೆ. ಮುಂಬರುವ ತಿಂಗಳು ಮತ್ತು ವರ್ಷಗಳಲ್ಲಿ ನಮ್ಮ ಭದ್ರತೆ, ರಕ್ಷಣೆ ಮತ್ತು ಆರ್ಥಿಕ ಪಾಲುದಾರಿಕೆಯನ್ನು ನಾವು ಗಟ್ಟಿಗೊಳಿಸುವ ಕುರಿತು ನಾನು ಉತ್ಸುಕನಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಸೋಮವಾರ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಏಷ್ಯಾದ ಮತ್ತು ಭಾರತೀಯ ಮೂಲದ ವ್ಯಕ್ತಿಯೊಬ್ಬರು ಬ್ರಿಟನ್ ಪ್ರಧಾನಿ ಹುದ್ದೆಗೇರಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಎನ್ಐಎಗೆ ಹೆಚ್ಚಿನ ಅಧಿಕಾರ, ಸಿಆರ್ಪಿಸಿ-ಐಪಿಸಿಗೆ ತಿದ್ದುಪಡಿ: ಅಮಿತ್ ಶಾ ಮಹತ್ವದ ಘೋಷಣೆ