ಲಖನೌ(ಉತ್ತರ ಪ್ರದೇಶ): ತೀವ್ರ ಕುತೂಹಲ ಮೂಡಿಸಿದ್ದ ಉತ್ತರ ಪ್ರದೇಶದಲ್ಲಿ ಆಡಳಿತರೂಢ ಭಾರತೀಯ ಜನತಾ ಪಾರ್ಟಿ ಅತಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಈ ಮೂಲಕ ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ದಾಪುಗಾಲು ಇಟ್ಟಿದೆ. ಆದರೆ, ಹತ್ತಾರು ಭರವಸೆ ನೀಡಿ ಅಧಿಕಾರ ಪಡೆಯುವ ಕನಸು ಕಂಡಿದ್ದ ಕಾಂಗ್ರೆಸ್ಗೆ ತೀವ್ರ ಮುಖಭಂಗವಾಗಿದೆ.
ಉತ್ತರ ಪ್ರದೇಶದಲ್ಲಿ ಅಧಿಕಾರ ಪಡೆದುಕೊಳ್ಳುವ ಉದ್ದೇಶದಿಂದ ಚುನಾವಣಾ ಪ್ರಣಾಳಿಕೆಯಲ್ಲಿ ಅನೇಕ ರೀತಿಯ ಭರವಸೆ ನೀಡಿದ್ದ ಪ್ರಿಯಾಂಕಾ ಗಾಂಧಿ ಹಾಗೂ ಕಾಂಗ್ರೆಸ್ಗೆ ತೀವ್ರ ನಿರಾಸೆಯಾಗಿದೆ. 403 ಕ್ಷೇತ್ರಗಳ ವಿಧಾನಸಭೆಯಲ್ಲಿ ಇಲ್ಲಿಯವರೆಗಿನ ಮಾಹಿತಿ ಪ್ರಕಾರ ಕೇವಲ 5 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.
-
#UttarPradeshElections | BJP-102, Samajwadi Party-46, Apna Dal-5, INC-4, as per early trends
— ANI UP/Uttarakhand (@ANINewsUP) March 10, 2022 " class="align-text-top noRightClick twitterSection" data="
(Source: Election Commission) pic.twitter.com/tf7j7Bx76d
">#UttarPradeshElections | BJP-102, Samajwadi Party-46, Apna Dal-5, INC-4, as per early trends
— ANI UP/Uttarakhand (@ANINewsUP) March 10, 2022
(Source: Election Commission) pic.twitter.com/tf7j7Bx76d#UttarPradeshElections | BJP-102, Samajwadi Party-46, Apna Dal-5, INC-4, as per early trends
— ANI UP/Uttarakhand (@ANINewsUP) March 10, 2022
(Source: Election Commission) pic.twitter.com/tf7j7Bx76d
ಉತ್ತರ ಪ್ರದೇಶದಲ್ಲಿ ಸುಮಾರು 500ಕ್ಕೂ ಅಧಿಕ ಸಭೆ, ವಿಡಿಯೋ ಕಾನ್ಪರೆನ್ಸ್, ರ‍್ಯಾಲಿ ಹಾಗೂ ರೋಡ್ ಶೋಗಳಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ ಗಾಂಧಿ, ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದರು. ಜೊತೆಗೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಶೇ. 50ಕ್ಕೂ ಹೆಚ್ಚಿನ ಮಹಿಳೆಯರಿಗೆ ಮಣೆ ಹಾಕಿ ಟಿಕೆಟ್ ನೀಡಿತ್ತು. ಆದರೆ, ಅವರು ತೆಗೆದುಕೊಂಡಿದ್ದ ನಿರ್ಧಾರ ಯಶಸ್ಸು ನೀಡಿಲ್ಲ. ಹೀಗಾಗಿ ಯುಪಿಯಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್ ನೆಲಕಚ್ಚಿದೆ.
ಇದನ್ನೂ ಓದಿರಿ: ಯುಪಿಯಲ್ಲಿ ಮ್ಯಾಜಿಕ್ ನಂಬರ್ ದಾಟಿದ ಬಿಜೆಪಿ, ಪಂಜಾಬ್ನಲ್ಲಿ AAP No 1.. ಗೋವಾದಲ್ಲಿ ತೀವ್ರ ಪೈಪೋಟಿ!
ಮ್ಯಾಜಿಕ್ ಮಾಡಿದ ಯೋಗಿ-ಮೋದಿ ಮೋಡಿ: ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಮತದಾರ ಪ್ರಭುಗಳ ನಾಡಿಮಿಡಿತ ಅರಿತುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ 250ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಳ್ಳುವ ಮೂಲಕ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಮುನ್ನಡೆದಿದೆ. 2017ರಿಂದ ಉತ್ತರ ಪ್ರದೇಶ ಸಿಎಂ ಆಗಿ ಸೇವೆ ಸಲ್ಲಿಸುತ್ತಿರುವ ಯೋಗಿ ಆದಿತ್ಯನಾಥ್ ಅವರಿಗೆ ಅಲ್ಲಿನ ಜನರು ಸಾಥ್ ನೀಡಿದ್ದು, ಮತ್ತೊಮ್ಮೆ ಜೈಕಾರ ಹಾಕಿದಂತೆ ಕಾಣುತ್ತಿದೆ.
ಉತ್ತರ ಪ್ರದೇಶ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ತೊರೆದು ಅನೇಕರು ಸಮಾಜವಾದಿ ಪಕ್ಷ ಸೇರಿಕೊಂಡಿದ್ದರು. ಈ ನಡುವೆ ಅಖಿಲೇಶ್ ಯಾದವ್ ನೇತೃತ್ವದ ಎಸ್ಪಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಮತದಾರ ಪ್ರಭುಗಳು ಆ ಲೆಕ್ಕವನ್ನು ತಲೆಕೆಳಗಾಗುವಂತೆ ಮಾಡಿದ್ದಾರೆ. ಮುಖ್ಯವಾಗಿ ಬಿಜೆಪಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಸ್ಪಿ ಸೇರಿದ್ದ ಸ್ವಾಮಿ ಪ್ರಸಾದ್ ಮೌರ್ಯ ಹಿನ್ನಡೆಯಲಿದ್ದಾರೆ.