ETV Bharat / bharat

ಜುಬ್ಲಿ ಹಿಲ್ಸ್​​​ನಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಉತ್ತಮವಾಗಿದೆ, ಗೆಲ್ಲುವ ವಿಶ್ವಾಸ ಇದೆ: ಮೊಹಮ್ಮದ್ ಅಜರುದ್ದೀನ್ - ETV Bharath Kannada news

ತೆಲಂಗಾಣ ಚುನಾವಣೆಗೆ ಜುಬ್ಲಿ ಹಿಲ್ಸ್ ಕ್ಷೇತ್ರದಿಂದ ಸ್ಪರ್ಧಿಸಿರುವ ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಈಟಿವಿ ಭಾರತಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ.

Mohammed Azharuddin
Mohammed Azharuddin
author img

By ETV Bharat Karnataka Team

Published : Nov 13, 2023, 10:56 PM IST

Updated : Nov 13, 2023, 11:05 PM IST

ಜುಬ್ಲಿ ಹಿಲ್ಸ್​​​ನಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಉತ್ತಮವಾಗಿದೆ, ಗೆಲ್ಲುವ ವಿಶ್ವಾಸ ಇದೆ - ಮೊಹಮ್ಮದ್ ಅಜರುದ್ದೀನ್

ಹೈದರಾಬಾದ್: ಮುಂಬರುವ ತೆಲಂಗಾಣ ಚುನಾವಣೆಗೆ ಜುಬ್ಲಿ ಹಿಲ್ಸ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿರುವ ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್, ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ನನಗೆ ತುಂಬಾ ವಿಶ್ವಾಸವಿದೆ, ಇದು ನನಗೆ ಹೊಸ ಪಂದ್ಯವಲ್ಲ. ನಾನು ಈ ಮೊದಲು ಒಂದೆರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಆದರೆ ಈ ಚುನಾವಣೆ ವಿಭಿನ್ನವಾಗಿದೆ, ಏಕೆಂದರೆ ಇದು ನನ್ನ ತವರು ಕ್ಷೇತ್ರ. ಇಲ್ಲಿನ ಜನರು ನನ್ನನ್ನು ಪ್ರೀತಿಸುತ್ತಾರೆ. ಜುಬ್ಲಿ ಹಿಲ್ಸ್‌ನ ಸಾರ್ವಜನಿಕರಿಂದ ನನಗೆ ಸಿಗುತ್ತಿರುವ ಪ್ರತಿಕ್ರಿಯೆ ಅತ್ಯುತ್ತಮವಾಗಿದೆ. ಅವರು ಕೆಲಸ ಮಾಡಬೇಕೆಂದು ಅವರು ಬಯಸುತ್ತಾರೆ. ನಾನು ತುಂಬಾ ಸಂತೋಷವಾಗಿದ್ದೇನೆ ಮತ್ತು ನನಗೆ ಸಿಗುತ್ತಿರುವ ಎಲ್ಲಾ ಪುರಸ್ಕಾರಗಳನ್ನು ನಾನು ಆನಂದಿಸುತ್ತಿದ್ದೇನೆ" ಎಂದು 1992, 1996 ಮತ್ತು 1999ರ ಏಕದಿನ ವಿಶ್ವಕಪ್‌ಗಳಲ್ಲಿ ಭಾರತವನ್ನು ಮುನ್ನಡೆಸಿದ್ದ ಅಜರುದ್ದೀನ್ ಈಟಿವಿ ಭಾರತದ ಜೊತೆಗಿನ ವಿಶೇಷ ಸಂರ್ದಶನದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡರು.

60 ವರ್ಷ ವಯಸ್ಸಿನ ಮೊಹಮ್ಮದ್ ಅಜರುದ್ದೀನ್ ಹೈದರಾಬಾದ್‌ನ ಯೂಸುಫ್‌ಗಡದಲ್ಲಿ ಪ್ರಚಾರದ ವೇಳೆ ಸಂದರ್ಶನ ನೀಡಿದರು. ಜೊತೆಗೆ ಕ್ಷೇತ್ರದಲ್ಲಿ ಮನೆ ಮನೆಗೆ ಭೇಟಿ ನೀಡಿ ಜನರಿಂದ ಮತಯಾಚನೆ ಮಾಡಿದರು. ಉತ್ತರ ಪ್ರದೇಶದ ಮೊರಾದಾಬಾದ್‌ನಿಂದ ಸಂಸದರಾಗಿದ್ದ ಅಜರುದ್ದೀನ್ ಈ ಬಾರಿ ತೆಲಂಗಾಣದಲ್ಲಿ ಕಾಂಗ್ರೆಸ್​​ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

99 ಟೆಸ್ಟ್ ಮತ್ತು 334 ಏಕದಿನ ಪಂದ್ಯಗಳನ್ನು ಆಡಿರುವ ಭಾರತದ ಮಾಜಿ ಬ್ಯಾಟರ್, ಕಳೆದ ಒಂಬತ್ತು ವರ್ಷಗಳಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಬಿಆರ್‌ಎಸ್ ಪಕ್ಷದಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು. " ಈ ಬಾರಿ ಏಕೆ ಕಾಂಗ್ರೆಸ್​ ಅಧಿಕಾರ ಬರುತ್ತದೆ ಎಂದರೆ? ಕಳೆದ ಒಂಬತ್ತು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಅಭಿವೃದ್ಧಿ - ಅಭಿವೃದ್ಧಿ ಎಂದು ಹೇಳುತ್ತಾ 'ಬಂಗಾರು' ತೆಲಂಗಾಣ (ಸುವರ್ಣ ತೆಲಂಗಾಣ) ಎಂದು ಕರೆಯುತ್ತಿದ್ದಾರೆ. ಆದರೆ ನೀವು ಅದನ್ನು ನೋಡಿದರೆ ಬಂಗಾರು ತೆಲಂಗಾಣದ ರೀತಿ ಇಲ್ಲ," ಎಂದು ಅಜರುದ್ದೀನ್ ದೂರಿದರು.

"ಇದು ಜುಬ್ಲಿ ಹಿಲ್ಸ್ ಕ್ಷೇತ್ರ, ಹೆಸರು ತುಂಬಾ ದೊಡ್ಡದು, ಜುಬ್ಲಿ ಹಿಲ್ಸ್ ಎಂದು ಹೇಳಿದಾಗ ಎಲ್ಲರೂ ಕೋಟ್ಯಧಿಪತಿಗಳು ವಾಸಿಸುತ್ತಾರೆ ಎಂದು ಭಾವಿಸುತ್ತಾರೆ. ಆದರೆ, ಇಲ್ಲಿಗೆ ಬಂದು ದಾರಿ ನೋಡಿದರೆ ವಿರೂಪಗೊಂಡಿದೆ. ಅಭಿವೃದ್ಧಿಗೆ ಸಮಯ ಬಂದಿದೆ. ನಾನು ಶಾಸಕನಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತೇನೆ" ಎಂದರು.

"ನನ್ನ ಪ್ರಕಾರ ಅಭಿವೃದ್ಧಿ ಎಂದರೆ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟುವುದಲ್ಲ. ಬಡ ಜನರ ಜೀವನ ಮಟ್ಟವನ್ನು ಸುಧಾರಿಸುವುದಾಗಿದೆ. ಉದ್ಯೋಗ ಕಲ್ಪಿಸಿ ಜನರ ಉನ್ನತೀಕರಣ ಮಾಡುವಲ್ಲಿ ಶ್ರಮಿಸ ಬೇಕಿದೆ. ಜನರ ಆರ್ಥಿಕತೆಯಲ್ಲಿ ಯಾವುದೇ ಚೇತರಿಕೆ ಕಂಡಿಲ್ಲ ಎಂದರೆ ಅದು ಅಭಿವೃದ್ಧಿ ಅಲ್ಲ. ರಾಜಕೀಯ ಗೆಲುವುಗಳು ಯಾವಾಗಲೂ ಸಿಹಿಯಾಗಿರುತ್ತವೆ ಏಕೆಂದರೆ ನಾನು ಇಲ್ಲಿ ಫಲಿತಾಂಶಗಳು ಬೇಗ ದೊತೆಯುತ್ತದೆ. ಕ್ರಿಕೆಟ್​ನಲ್ಲಿ ನಾನು 12 ವರ್ಷ ಕಷ್ಟ ಪಟ್ಟು ಸಿಹಿ ತಿಂದಿದ್ದೇನೆ. ಆದರೆ ಒಂದೇ ತಿಂಗಳಿನಲ್ಲಿ ನಾನು ಸಂಸದನಾದೆ ಹಾಗೇ ಶಸಕನೂ ಆಗುತ್ತೇನೆ ಎಂಬ ವಿಶ್ವಾಸ ಇದೆ" ಎಂದಿದ್ದಾರೆ.

ತೆಲಂಗಾಣದಲ್ಲಿ ನವೆಂಬರ್ 30 ರಂದು 119 ಸ್ಥಾನಗಳಿಗೆ ಮತದಾನ ನಡೆಯಲಿದೆ. ಕಾಂಗ್ರೆಸ್ 117 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಮತ್ತು ಅದರ ಮಿತ್ರ ಪಕ್ಷವಾದ ಸಿಪಿಐ ಎರಡು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಬಿಆರ್‌ಎಸ್, ಬಿಎಸ್‌ಪಿ ಕಾರ್ಯಕರ್ತರ ಘರ್ಷಣೆ

Last Updated : Nov 13, 2023, 11:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.