ETV Bharat / bharat

ಬಜೆಟ್ ಪ್ರಯೋಜನಗಳ ಅರಿವು ಮೂಡಿಸಲು ಬಿಜೆಪಿ ಸಂಸದರು ಅಖಾಡಕ್ಕೆ - ಕೇಂದ್ರ ಬಜೆಟ್​​ ಕುರಿತು ಸಂಸದರ ಸುದ್ದಿಗೋಷ್ಠಿಗಳು

ಬಜೆಟ್‌ನ ಪ್ರಯೋಜನಗಳನ್ನು ಎಲ್ಲ ರಾಜ್ಯಗಳ ಜನರಿಗೆ ವಿವರಿಸಲು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತೆ ಪಕ್ಷದ ಹೈಕಮಾಂಡ್ ಸಂಸದರು ಮತ್ತು ಇತರ​ ನಾಯಕರಿಗೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

BJP deploys office bearers, MPs to explain merits of Union Budget to masses
ಜನರಿಗೆ ಬಜೆಟ್ ಪ್ರಯೋಜನಗಳ ಅರಿವು ಮೂಡಿಸಲು ಬಿಜೆಪಿ ಸಂಸದರು ಅಖಾಡಕ್ಕೆ: ಹೈಕಮಾಂಡ್ ಸೂಚನೆ
author img

By

Published : Feb 3, 2022, 1:16 PM IST

ನವದೆಹಲಿ: 2022-23ನೇ ಸಾಲಿನ ಕೇಂದ್ರ ಹಣಕಾಸು ಬಜೆಟ್ ಕುರಿತಂತೆ ಪರ ವಿರೋಧಗಳು ಚರ್ಚೆಯಾಗುತ್ತಿವೆ. ಕೇಂದ್ರದ ವಿರೋಧ ಪಕ್ಷಗಳು ಬಜೆಟ್​​ ಅನ್ನು ಕಟುವಾಗಿ ಟೀಕಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಬಜೆಟ್​ನ ಪ್ರಯೋಜನಗಳ ಕುರಿತು ಮನವರಿಕೆ ಮಾಡಲು ಬಿಜೆಪಿ ತಂಡ ಸಜ್ಜಾಗಿದೆ.

ದೇಶಾದ್ಯಂತ ಇರುವ ಬಿಜೆಪಿ ಸಂಸದರು ಮತ್ತು ಇತರ ನಾಯಕರು ಬಜೆಟ್​ನ ಪ್ರಯೋಜನಗಳ ಬಗ್ಗೆ ತಮಗೆ ನಿಗದಿಪಡಿಸಿದ ಪ್ರದೇಶಗಳಲ್ಲಿ ಫೆಬ್ರವರಿ 5,6 ಮತ್ತು ಫೆಬ್ರವರಿ 12,13ರಂದು ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಬಜೆಟ್‌ನ ಪ್ರಯೋಜನಗಳನ್ನು ಎಲ್ಲ ರಾಜ್ಯಗಳ ಜನರಿಗೆ ವಿವರಿಸಲು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತೆ ಪಕ್ಷದ ಹೈಕಮಾಂಡ್​ ನಾಯಕರಿಗೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಈಗ ಸಂಸದರು ಮತ್ತು ಇತರ ನಾಯಕರು ಫೆಬ್ರವರಿಯಲ್ಲಿ ನಿಗದಿಪಡಿಸಿದ ದಿನಾಂಕದಂದು ಸುದ್ದಿಗೋಷ್ಠಿಗಳನ್ನು ಕರೆದು, ಬಜೆಟ್​ನ ಮಹತ್ವ ವಿವರಿಸಲಿದ್ದಾರೆ. ಇದರ ಜೊತೆಗೆ ಪಕ್ಷದ ಜಾಲತಾಣಗಳಲ್ಲಿ ಮತ್ತು ತಮ್ಮ ಜಾಲತಾಣಗಳ ಖಾತೆಗಳಲ್ಲಿ ಈ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಬುಧವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಭಾಷಣದಲ್ಲಿ ಬಜೆಟ್ ಎಷ್ಟು ಪ್ರಯೋಜನಕಾರಿಯಾಗಿದೆ ಎಂಬ ಬಗ್ಗೆ ಬಿಜೆಪಿ ನಾಯಕರು ಮತ್ತು ಪಕ್ಷದ ಕಾರ್ಯಕರ್ತರಿಗೆ ವಿವರಣೆ ನೀಡಿದ್ದರು. ಈ ವೇಳೆ, ಭಾರತವು ಸ್ವಾವಲಂಬಿಯಾಗುವುದು ಬಹಳ ಮುಖ್ಯ. ಈಗ ಮಂಡನೆಯಾಗಿರುವ ಬಜೆಟ್​ ಸ್ವಾವಲಂಬಿ ಭಾರತದ ತಳಹದಿಯ ಮೇಲೆ ಆಧುನಿಕ ಭಾರತವನ್ನು ನಿರ್ಮಿಸಲು ಮಾತ್ರ ಸಹಕಾರಿಯಾಗಿದೆ ಎಂದಿದ್ದರು.

ಇದನ್ನೂ ಓದಿ: ತೆಲಂಗಾಣದಲ್ಲಿ ಬಿಜೆಪಿ ಬೆಳವಣಿಗೆ ನೋಡಿ ಕೆಸಿಆರ್​ ಭೀತಿಗೊಳಗಾಗಿದ್ದಾರೆ: ಡಿಕೆ ಅರುಣಾ ವಾಗ್ದಾಳಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.