ETV Bharat / bharat

ಲೇಹ್, ಜಮ್ಮುಕಾಶ್ಮೀರವು ಚೀನಾ ಭಾಗವೆಂದು ತೋರಿಸಿದ್ದಕ್ಕೆ ಟ್ವಿಟರ್ ಕ್ಷಮೆ - ಲೇಹ್​​ ಲೊಕೇಷನ್​ ಟ್ಯಾಗ್

ಲೇಹ್ ಹಾಗೂ ಜಮ್ಮು ಮತ್ತು ಕಾಶ್ಮೀರವನ್ನು ಚೀನಾ ಭಾಗವೆಂದು ತೋರಿಸಿದ್ದ ಟ್ವಿಟರ್ ಭಾರತದ ಬಳಿ ಕ್ಷಮೆಯಾಚಿಸಿದ್ದು, ದೇಶದ ಸೂಕ್ಷ್ಮತೆಗಳನ್ನು ಗೌರವಿಸುತ್ತೇವೆ ಎಂದು ತಿಳಿಸಿದೆ.

twitter
ಟ್ವಿಟರ್
author img

By

Published : Oct 29, 2020, 5:55 PM IST

ನವದೆಹಲಿ: ಭಾರತದ ಲೇಹ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪ್ರದೇಶಗಳನ್ನು ಚೀನಾ ಭಾಗವೆಂದು ತೋರಿಸಿ ಎಡವಟ್ಟು ಮಾಡಿಕೊಂಡಿದ್ದ ಟ್ವಿಟರ್ ಇದೀಗ ಭಾರತದ ಬಳಿ ಕ್ಷಮೆ ಯಾಚಿಸಿದೆ.

ಲೇಹ್​​ ಹಾಗೂ ಜಮ್ಮು - ಕಾಶ್ಮೀರದಲ್ಲಿ ಲೈವ್​ ವಿಡಿಯೋವೊಂದನ್ನು ರೆಕಾರ್ಡ್ ಮಾಡುವ ವೇಳೆ ಲೊಕೇಷನ್​ ಟ್ಯಾಗ್​​ನಲ್ಲಿ ಆ ಸ್ಥಳಗಳು ಚೀನಾಗೆ ಸೇರಿವೆ ಎಂದು ಟ್ವಿಟರ್ ತೋರಿಸಿದೆ. ಈ ಬಗ್ಗೆ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಿ, ಅಫಿಡವಿಟ್ ಸಲ್ಲಿಸುವಂತೆ ಭಾರತದ ಜಂಟಿ ಸಂಸದೀಯ ಸಮಿತಿಯು ಟ್ವಿಟರ್​ಗೆ ಸೂಚಿಸಿತ್ತು.

ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್​ ಇದಕ್ಕೆ ಸಮ್ಮತಿ ನೀಡಿದ್ದು, ಭಾರತದ ಬಳಿ ಕ್ಷಮೆ ಕೋರಿದೆ. ಭಾರತ ಸರ್ಕಾರದೊಂದಿಗೆ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ. ದೇಶದ ಸೂಕ್ಷ್ಮತೆಗಳನ್ನು ಗೌರವಿಸುತ್ತೇವೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಈ ಹಿಂದೆ ಕೂಡಾ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಅಗೌರವ ತೋರದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.