ETV Bharat / bharat

ಇಂದು 'ರಾಷ್ಟ್ರೀಯ ಸ್ವಚ್ಛತಾ ಕೇಂದ್ರ' ಉದ್ಘಾಟಿಸಲಿರುವ ಪ್ರಧಾನಿ: ಮಕ್ಕಳೊಂದಿಗೆ ಸಂವಾದ - 'ರಾಷ್ಟ್ರೀಯ ಸ್ವಚ್ಛತಾ ಕೇಂದ್ರ' ಉದ್ಘಾಟಿಸಲಿರುವ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಇಂದು 'ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು' ಉದ್ಘಾಟಿಸಲಿದ್ದು, 36 ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಕೇಂದ್ರ ಭವಿಷ್ಯದ ಪೀಳಿಗೆಗೆ ಸ್ವಚ್ಛ ಭಾರತ್ ಮಿಷನ್‌ನ ಯಶಸ್ವಿ ಪಯಣವನ್ನು ಪರಿಚಯಿಸಲಿದೆ.

modi
modi
author img

By

Published : Aug 8, 2020, 7:38 AM IST

ನವದೆಹಲಿ: ಸ್ವಚ್ಛ ಭಾರತ್ ಮಿಷನ್‌ನ ಸಂವಾದಾತ್ಮಕ ಅನುಭವ ಕೇಂದ್ರವಾದ 'ರಾಷ್ಟ್ರೀಯ ಸ್ವಚ್ಛತಾ ಕೇಂದ್ರ'ವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಲಿದ್ದಾರೆ.

ಏಪ್ರಿಲ್ 10, 2017ರಂದು ಗಾಂಧೀಜಿಯವರ ಚಂಪಾರಣ್ ಸತ್ಯಾಗ್ರಹದ ಶತಮಾನೋತ್ಸವದ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು (ಆರ್‌ಎಸ್‌ಕೆ) ಪ್ರಾರಂಭಿಸುವುದಾಗಿ ಘೋಷಿಸಿದ್ದರು.

ರಾಜ್​​​​ಘಾಟ್ ಬಳಿ ಇರುವ ಆರ್‌ಎಸ್‌ಕೆ ವೀಕ್ಷಣೆಯ ನಂತರ, ಮೋದಿ 36 ಶಾಲಾ ವಿದ್ಯಾರ್ಥಿಗಳೊಂದಿಗೆ ಆರ್‌ಎಸ್‌ಕೆ ಆಂಫಿಥಿಯೇಟರ್‌ನಲ್ಲಿ ಸಾಮಾಜಿಕ ಅಂತರ ಪಾಲಿಸಿಕೊಂಡು ಸಂವಹನ ನಡೆಸಲಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಇದಾದ ಬಳಿಕ ಅವರು ಈ ಕುರಿತು ಮಾತನಾಡಲಿದ್ದಾರೆ.

ಆರ್‌ಎಸ್‌ಕೆ ಭವಿಷ್ಯದ ಪೀಳಿಗೆಗೆ ವಿಶ್ವದ ಅತಿದೊಡ್ಡ ಅಭಿಯಾನವಾದ ಸ್ವಚ್ಛ ಭಾರತ್ ಮಿಷನ್‌ನ ಯಶಸ್ವಿ ಪಯಣವನ್ನು ಪರಿಚಯಿಸಲಿದೆ.

ಆರ್‌ಎಸ್‌ಕೆ ಸ್ವಚ್ಛತೆ ಕುರಿತು ಅರಿವು ಮತ್ತು ಶಿಕ್ಷಣವನ್ನು ನೀಡುತ್ತದೆ. ಸಂಯೋಜನಾ ಕಲಿಕೆ, ಉತ್ತಮ ಅಭ್ಯಾಸಗಳು, ಜಾಗತಿಕ ಮಾನದಂಡಗಳು, ಯಶಸ್ಸಿನ ಕಥೆಗಳು ಮತ್ತು ವಿಷಯಾಧಾರಿತ ಸಂದೇಶಗಳ ಮೂಲಕ ಸಂವಾದಾತ್ಮಕ ಸ್ವರೂಪದಲ್ಲಿ ವಿಷಯಗಳನ್ನು ಪ್ರಸ್ತುತಪಡಿಸಲಿದೆ.

ಇದರಲ್ಲಿ ವಿಶಿಷ್ಟವಾದ 360 ಡಿಗ್ರಿ ಆಡಿಯೋ - ವಿಶ್ಯುವಲ್ಸ್​​ ಪ್ರದರ್ಶನವಿರಲಿದ್ದು, ಇದು ಭಾರತದ ಸ್ವಚ್ಛತಾ ಕಥೆಯನ್ನು ನಿರೂಪಿಸಲಿದೆ. ಸಂವಾದಾತ್ಮಕ ಎಲ್ಇಡಿ ಫಲಕಗಳು, ಹೊಲೊಗ್ರಾಮ್ ಬಾಕ್ಸ್​ಗಳನ್ನು ಒಳಗೊಂಡಿದೆ. ಕೇಂದ್ರದ ಸುತ್ತಲಿನ ಕಲಾತ್ಮಕ ಗೋಡೆಯ ಭಿತ್ತಿಚಿತ್ರಗಳು ಮಿಷನ್‌ನ ಯಶಸ್ಸಿನ ಪ್ರಮುಖ ಅಂಶಗಳನ್ನು ನಿರೂಪಿಸುತ್ತವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.