ETV Bharat / bharat

'ವಿಶ್ರಾಂತಿ ಪಡೆಯಲು ಸಿದ್ಧ' ಎಂದು ರಾಜಕೀಯ ನಿವೃತ್ತಿ ಸುಳಿವು ನೀಡಿದ ಕಮಲ್ ನಾಥ್

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಹೇಳಿಕೆಯೊಂದು ಅವರು ರಾಜಕಾರಣದಿಂದ ನಿವೃತ್ತಿ ಹೊಂದುವ ಸುಳಿವು ನೀಡುತ್ತಿದ್ದಾರೆ ಎಂದು ಹೇಳಲು ಕಾರಣವಾಗಿದೆ..

Kamal Nath
ಕಮಲ್ ನಾಥ್
author img

By

Published : Dec 15, 2020, 2:37 PM IST

ಚಿಂದ್ವಾರಾ (ಮಧ್ಯಪ್ರದೇಶ): ನಾನು ಯಾವುದೇ ಹುದ್ದೆಗೆ ಆಸೆ ಪಡುವುದಿಲ್ಲ, ವಿಶ್ರಾಂತಿ ಪಡೆಯಲು ಸಿದ್ಧನಿದ್ದೇನೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ಮುಖಂಡ ಕಮಲ್ ನಾಥ್ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುವ ಸುಳಿವು ನೀಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.

ಭಾನುವಾರ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಮಲ್ ನಾಥ್, ನಾನು ಸಾಕಷ್ಟು ಸಮಯವನ್ನು ಕಳೆದಿದ್ದೇನೆ (ರಾಜಕೀಯದಲ್ಲಿ), ಯಾವುದೇ ಹುದ್ದೆ ಅಥವಾ ಸ್ಥಾನಕ್ಕಾಗಿ ನಾನು ಆಸೆ ಪಡುವುದಿಲ್ಲ ಎಂದರು.

ಇದನ್ನೂ ಓದಿ: ಶ್ರೀರಾಮ ಸಮಾಜವಾದಿ ಪಕ್ಷಕ್ಕೆ ಸೇರಿದವನು.. ನಾವೆಲ್ಲಾ ರಾಮನ ಭಕ್ತರು : ಅಖಿಲೇಶ್​ ಯಾದವ್​

ಕಳೆದ ನವೆಂಬರ್​ ತಿಂಗಳಲ್ಲಿ ನಡೆದ ಮಧ್ಯಪ್ರದೇಶ ವಿಧಾನಸಭಾ ಉಪಚುನಾವಣೆಯಲ್ಲಿ 28 ವಿಧಾನಸಭಾ ಸ್ಥಾನಗಳಲ್ಲಿ ಕೇವಲ 9 ಸ್ಥಾನಗಳನ್ನು ಕಾಂಗ್ರೆಸ್ ಪಡೆದಿತ್ತು. ಆ ಬಳಿಕ ಅನೇಕ ಕಾಂಗ್ರೆಸ್​ ಮುಖಂಡರು ಪಕ್ಷದ ಕಳಪೆ ಪ್ರದರ್ಶನ ಹಾಗೂ ಪಕ್ಷದ ಇಂದಿನ ಪರಿಸ್ಥಿತಿಗೆ ಕಮಲ್​ ನಾಥ್​ ಅವರೇ ಕಾರಣ ಎಂದು ಹೇಳಿಕೆಗಳನ್ನು ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.