ETV Bharat / bharat

ಆನ್​ಲೈನ್​ ಮೂಲಕ ಕ್ರಿಕೆಟ್​ ಬೆಟ್ಟಿಂಗ್​: ನಾಲ್ವರು ಅಂದರ್​, 4 ಕೋಟಿ ರೂ. ವಶ - ಕ್ರಿಕೆಟ್​ ಬೆಟ್ಟಿಂಗ್​ 2020

ಆನ್‌ಲೈನ್ ಮೂಲಕ ಕ್ರಿಕೆಟ್​ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ವರು ಖದೀಮರನ್ನು ಜೈಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 4 ಕೋಟಿ 19 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.

4 ಕೋಟಿ ವಶ
4 ಕೋಟಿ ವಶ
author img

By

Published : Oct 22, 2020, 12:48 PM IST

ಜೈಪುರ: ಆನ್‌ಲೈನ್ ಮೂಲಕ ಕ್ರಿಕೆಟ್​ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ವರು ಖದೀಮರನ್ನು ಕೊಟ್ವಾಲಿ ಪೊಲೀಸ್ ಠಾಣೆ ಮತ್ತು ಕಮಿಷನರೇಟ್ ವಿಶೇಷ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಕಿಶನ್‌ಪೋಲ್ ಮಾರುಕಟ್ಟೆ ಬಳಿ ಬಂಧಿಸಿದೆ. ಆರೋಪಿಗಳಿಂದ 4 ಕೋಟಿ 19 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.

ವಾಟ್ಸ್​ಆ್ಯಪ್ ಮೂಲಕ ಕ್ರಿಕೆಟ್​ ಬೆಟ್ಟಿಂಗ್​ ನಡೆಸುತ್ತಿದ್ದು, ಐಡಿ ಪಾಸ್​ವರ್ಡ್​ಗಳನ್ನು ಒಬ್ಬರಿಗೊಬ್ಬರು ಶೇರ್​ ಮಾಡುತ್ತಿದ್ದರಂತೆ. ಇನ್ನು ಆನ್‌ಲೈನ್ ಬೆಟ್ಟಿಂಗ್‌ನ ಸಂಪೂರ್ಣ ವ್ಯವಹಾರವನ್ನು ದುಬೈನಿಂದಲೇ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ರಣಬೀರ್ ಸಿಂಗ್, ಕೃಪಾಲ್ ಸಿಂಗ್, ತೋಡರ್ಮಲ್ ರಾಥೋಡ್ ಮತ್ತು ಈಶ್ವರ್ ಸಿಂಗ್ ಬಂಧಿತರು. ಬೆಟ್ಟಿಂಗ್ ಆಡಲು ಬಯಸುವವರನ್ನು ವಾಟ್ಸ್​ಆ್ಯಪ್​ ಮೂಲಕ ಸೇರಿಸಿಕೊಳ್ಳುತ್ತಿದ್ದರಂತೆ. ನಂತರ ಆನ್‌ಲೈನ್ ವೆಬ್‌ಸೈಟ್ ಮೂಲಕ ಐಡಿ ಮತ್ತು ಪಾಸ್‌ವರ್ಡ್ ರಚಿಸಿ ಅವರಿಗೆ ನೀಡಲಾಗುತ್ತಿತ್ತಂತೆ. ಇನ್ನು ಈ ಚಟುವಟಿಕೆಗಳನ್ನು ಪೊಲೀಸ್​ ನಿಯಂತ್ರಣದಿಂದ ಕಾಪಾಡಿಕೊಳ್ಳಲು ಹಣದ ವಹಿವಾಟನ್ನು ಕೋಡ್ ‌ವರ್ಡ್‌ನಲ್ಲಿ ತೋರಿಸುತ್ತಿದ್ದರಂತೆ. ಈ ಕ್ರಿಕೆಟ್​ ಬೆಟ್ಟಿಂಗ್​ಅನ್ನು ದುಬೈನಲ್ಲಿ ಕುಳಿತುಕೊಂಡು ರಾಕೇಶ್ ಎಂಬ ವ್ಯಕ್ತಿ ನಡೆಸುತ್ತಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಈ ಬುಕ್ಕಿಗಳು ದೇವಾಲಯಗಳ ಹೆಸರಿನಲ್ಲಿ ವಾಟ್ಸ್​ಆ್ಯಪ್​ ಗ್ರೂಪ್​​ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.