ETV Bharat / bharat

ಅಮೆರಿಕದಲ್ಲಿ ಹೆಚ್ಚುತ್ತಿದೆ ಗನ್ ಸಂಸ್ಕೃತಿ: ಶಾಲೆಗೆ ನುಗ್ಗಿ ಗುಂಡಿನ ದಾಳಿ

ಇಬ್ಬರು ಅಪರಿತರು ಶಾಲೆಗೆ ನುಗ್ಗಿ ಗುಂಡು ಹಾರಿಸಿದ ಪರಿಣಾಮ ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ.

author img

By

Published : May 8, 2019, 9:36 AM IST

ಅಮೆರಿಕಾದಲ್ಲಿ ಶೂಟಿಂಗ್​

ಡೆನ್​ವೆರ್​(ಅಮೆರಿಕ): ಅಮೆರಿಕಾದಲ್ಲಿ ಗನ್ ಸಂಸ್ಕೃತಿ ಹೆಚ್ಚುತ್ತಿದೆ. ಇಲ್ಲಿನ ಶಾಲೆಯೊಂದರಲ್ಲಿ ನಡೆದ ಶೂಟಿಂಗ್ ಪ್ರಕರಣ ಬೆಚ್ಚಿ ಬೀಳಿಸುವಂತಿದೆ.

ಅಮೆರಿಕಾದ ಹೈಲಾಂಡ್​ ರಾಂಚ್​ ಪ್ರದೇಶದಲ್ಲಿರುವ STEM ಶಾಲೆಯಲ್ಲಿ ಘಟನೆ ನಡೆದಿದೆ.
ಪ್ರಕರಣ ನಡೆದಿದ್ದು ಹೇಗೆ?

ನಿನ್ನೆ ತರಗತಿಗೆ ಬಂದ ಇಬ್ಬರು ಬಂದೂಕುಧಾರಿಗಳು ಎರಡು ಪ್ರತ್ಯೇಕ ಕೊಠಡಿಗಳಲ್ಲಿ ಗುಂಡಿನ ದಾಳಿ ಶುರುಮಾಡಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಹಾರಿಸಿದ ಗುಂಡಿಗೆ ಸಿಲುಕಿದ ಒಬ್ಬ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟರೆ, 8 ಮಂದಿ ಗಾಯಗೊಂಡರು. ಗನ್ ದಾಳಿಯ ಸದ್ದು ಜೋರಾಗಿ ಕೇಳುತ್ತಿದ್ದಂತೆ ಸಮೀಪದಲ್ಲಿದ್ದ ಶಾಲಾ ಭದ್ರತಾ ಸಿಬ್ಬಂದಿ ಆ​ ಆಗಂತುಕರನ್ನು ಹಿಡಿದಿಟ್ಟುಕೊಂಡಿದ್ದಾರೆೆ.
ಗುಂಡಿನ ದಾಳಿಯಲ್ಲಿ ಮೃತಪಟ್ಟ ವಿದ್ಯಾರ್ಥಿಯ ಹೆಸರನ್ನು ಶಾಲಾ ಆಡಳಿತ ಮಂಡಳಿ ಬಹಿರಂಗಪಡಿಸಿಲ್ಲ. ಶೂಟಿಂಗ್​ ನಡೆದ ಶಾಲೆಯಲ್ಲಿ 1,800 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.