ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಯುವತಿಯೊಬ್ಬಳು ತುಂಬಿದ ಬಸ್ ಮುಂದೆ ಟಿಕ್ಟಾಕ್ ವಿಡಿಯೋ ಮಾಡಿ ಫಜೀತಿಗೆ ಸಿಲುಕಿದ್ದಾಳೆ.
ನಿನ್ನೆ ರಾತ್ರಿ ಪುಣೆಯ ಹದಪ್ಸರ್ನಿಂದ ಹೋಗುತಿದ್ದ ಎಲೆಕ್ಟ್ರಿಕ್ ಬಸ್ ಪ್ರಯಾಣಿಕರಿಂದ ತುಂಬಿತ್ತು. ಮಾರ್ಗಮಧ್ಯದಲ್ಲೆ ಯುವತಿಯೊಬ್ಬಳು ಬಸ್ಗೆ ಅಡ್ಡ ಬಂದು ಟಿಕ್ಟಾಕ್ ವಿಡಿಯೋ ಮಾಡಿದ್ದಾಳೆ. ಈ ವೇಳೆ ಬಸ್ ಚಾಲಕ, ನಿರ್ವಾಹಕ ಸೇರಿದಂತೆ ಪ್ರಯಾಣಿಕರು ಕೂಡ ಏನು ನಡೆಯುತ್ತಿದೆ ಎಂದು ತಿಳಿಯದೇ ಒಂದು ಕ್ಷಣ ಸುಮ್ಮನೆ ಕುಳಿತಿದ್ದಾರೆ.
ಸದ್ಯ ಯುವತಿಯ ಟಿಕ್ಟಾಕ್ ವಿಡಿಯೋ ಫುಲ್ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಬಸ್ ಸಂಚಾರಕ್ಕೆ ಅಡ್ಡಿ ಪಡಿಸುವುದು ಅಪರಾಧ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಯುವತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದಿದ್ದಾರೆ.