ಹೈದರಾಬಾದ್ (ತೆಲಂಗಾಣ) : ಮುಂಬರುವ ವಾರದಲ್ಲಿ ಆಗಸದಲ್ಲಿ ಖಗೋಳ ಚಮತ್ಕಾರವೊಂದು ಸಂಭವಿಸಲಿದೆ. ಸುಂದರವಾದ ಅರ್ಧ ಚಂದ್ರನ ಜತೆಗೆ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಒಂದೇ ರೇಖೆಯಲ್ಲಿ ಕಾಣಿಸಿಕೊಳ್ಳಲಿವೆ. ಈ ಚಮತ್ಕಾರ ಬರಿಗಣ್ಣಿಗೇ ಗೋಚರವಾಗಲಿದೆ ಎಂದು ಖಗೋಳ ವಿಜ್ಞಾನಿ ತಿಳಿಸಿದ್ದಾರೆ.
ಈ ಕುರಿತು ವಿಜ್ಞಾನಿ ಬಿ ಜಿ ಸಿದ್ದಾರ್ಥ್ ಮಾಹಿತಿ ನೀಡಿ, ಮುಂಬರುವ ದಿನಗಳಲ್ಲಿ ವಿಶ್ವದ ಪ್ರತಿ ದೇಶದಿಂದಲೂ ಒಂದು ಕುತೂಹಲಕಾರಿ ವಿದ್ಯಮಾನವನ್ನು ಗಮನಿಸಬಹುದು. ಈ ವಾರ ಸಂಜೆಯಿಂದ ಬೆಳಗ್ಗೆ ತನಕ ನಾವು ಐದು ಗ್ರಹಗಳನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಾಗುತ್ತದೆ. ಹಾಗೂ ಯುರೇನಸ್, ನೆಪ್ಚೂನ್ ಮತ್ತು ಪ್ಲೇಟೋ ದೂರದರ್ಶಕದಿಂದ ಮಾತ್ರ ಕಾಣಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.