ETV Bharat / bharat

ಪಾನ್​ ಶಾಪ್​ನಲ್ಲಿದ್ದ ಹಣಕ್ಕೆ ಗೆದ್ದಲು ಹಿಡಿಸಿತು ಲಾಕ್​ಡೌನ್​... ಬಡಪಾಯಿಯ ಕಣ್ಣೀರು - ಗೆದ್ದಲು ಹಿಡಿದ ನೋಟುಗಳು

ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಪಾನ್ ಅಂಗಡಿ ಬಾಗಿಲು ತೆರೆದ ಮಾಲೀಕನಿಗೆ ಆಘಾತ ಉಂಟಾಗಿದೆ. ಅಂಗಡಿಯಲ್ಲಿದ್ದ ಹಣವನ್ನು ಗೆದ್ದಲುಗಳು ತಿಂದುಹಾಕಿವೆ.

urrency in pan shops have become completely obsolete
ಪಾನ್​ ಶಾಪ್​ನಲ್ಲಿಂದ ಹಣವೆಲ್ಲ ಗೆದ್ದಲು
author img

By

Published : May 26, 2020, 10:10 AM IST

Updated : May 26, 2020, 10:36 AM IST

ವಿಜಯವಾಡ: ಲಾಕ್​ಡೌನ್​ ಕೊಂಚ ಸಡಿಲಿಕೆಯಾದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಪಾನ್ ಅಂಗಡಿ ತೆರೆದ ಮಾಲೀಕನಿಗೆ ಶಾಕ್ ಆಗಿದ್ದು, ಅಂಗಡಿಯಲ್ಲಿದ್ದ ಹಣವನ್ನು ಗೆದ್ದಲುಗಳು ತಿಂದುಹಾಕಿವೆ.

ವಿಜಯವಾಡ ಪಟ್ಟಣದ ಕೊತ್ತಪೇಟೆ ಕೋಮಲವಿಲಾಸ್ ಕೇಂದ್ರದಲ್ಲಿರುವ ಪಾನ್ ಅಂಗಡಿಯನ್ನು ಲಾಕ್​ಡೌನ್ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ಮುಚ್ಚಲಾಗಿತ್ತು. ​ಲಾಕ್​ಡೌನ್​ನಿಂದ ಕೊಂಚ ರಿಲೀಫ್ ಸಿಕ್ಕ ಹಿನ್ನೆಲೆಯಲ್ಲಿ ಮಾಲೀಕ ಅಂಗಡಿ ಬಾಗಿಲು ತೆರೆದಾಗ ತಾನಿಟ್ಟಿದ್ದ ಹಣಕ್ಕೆ ಗೆದ್ದಲು ಹತ್ತಿರುವುದು ತಿಳಿದಿದೆ.

ಪಾನ್​ ಶಾಪ್​ನಲ್ಲಿದ್ದ ಹಣಕ್ಕೆಲ್ಲ ಗೆದ್ದಲು

ಈ ಬಗ್ಗೆ ಮಾತನಾಡಿರುವ ಮಾಲೀಕ, ಪಾನ್​ ಅಂಗಡಿಯಲ್ಲಿ ಹಣ ಇತ್ತು, ಲಾಕ್​ಡೌನ್ ಹಿನ್ನೆಲೆಯಲ್ಲಿ ಅದನ್ನು ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಹಣ ಸೇರಿದಂತೆ ಹಲವು ವಸ್ತುಗಳು ಸಂಪೂರ್ಣವಾಗಿ ಹಾಳಾಗಿದ್ದು, ದಿಕ್ಕೇ ತೋಚದಂತಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.

ಇದೊಂದು ಅಂಗಡಿಯ ಪರಿಸ್ಥಿತಿಯಲ್ಲ, ಹಲವು ಅಂಗಡಿಗಳು 2 ತಿಂಗಳು ಬಾಗಿಲು ಹಾಕಿದ್ದರಿಂದ ಒಳಗಿದ್ದ ವಸ್ತುಗಳು ಹಾಳಾಗಿವೆ ಎಂದು ಸ್ಥಳೀಯರು ಹೇಳಿದ್ದಾರೆ.

Last Updated : May 26, 2020, 10:36 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.