ETV Bharat / bharat

78 ಹೊಸ ಮಾರ್ಗಗಳಿಗೆ ನಾಗರಿಕ ವಿಮಾನಯಾನ ಸಚಿವಾಲಯ ಅನುಮೋದನೆ

ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ಈಶಾನ್ಯ ಪ್ರದೇಶ, ಗುಡ್ಡಗಾಡು ರಾಜ್ಯಗಳು ಮತ್ತು ದ್ವೀಪ ಪ್ರದೇಶಗಳಿಗೆ ನಾಲ್ಕನೇ ಸುತ್ತಿನ ಪ್ರಾದೇಶಿಕ ಸಂಪರ್ಕ ಯೋಜನೆ (ಆರ್‌ಸಿಎಸ್) ಅಡಿಯಲ್ಲಿ ಹೊಸ ಮಾರ್ಗಗಳಿಗೆ ಆದ್ಯತೆ ನೀಡಲಾಗಿದೆ.

ನಾಗರಿಕ ವಿಮಾನಯಾನ ಸಚಿವಾಲಯ
ನಾಗರಿಕ ವಿಮಾನಯಾನ ಸಚಿವಾಲಯ
author img

By

Published : Aug 27, 2020, 6:34 PM IST

ನವದೆಹಲಿ: ಮೂರು ಸುತ್ತಿನ ಯಶಸ್ವಿ ಬಿಡ್ಡಿಂಗ್ ನಂತರ, ದೂರದ ಮತ್ತು ಪ್ರಾದೇಶಿಕ ಪ್ರದೇಶಗಳಿಗೆ ಸಂಪರ್ಕವನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಪ್ರಾದೇಶಿಕ ಸಂಪರ್ಕ ಯೋಜನೆ (ಆರ್‌ಸಿಎಸ್) - ಉಡೇ ದೇಶ್ ಕಾ ಆಮ್ ನಾಗ್ರಿಕ್ (ಉಡಾನ್) ಯೋಜನೆಯ ನಾಲ್ಕನೇ ಸುತ್ತಿನಲ್ಲಿ 78 ಹೊಸ ಮಾರ್ಗಗಳಿಗೆ ನಾಗರಿಕ ವಿಮಾನಯಾನ ಸಚಿವಾಲಯ ಅನುಮೋದನೆ ನೀಡಿದೆ.

ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ಈಶಾನ್ಯ ಪ್ರದೇಶ, ಗುಡ್ಡಗಾಡು ರಾಜ್ಯಗಳು ಮತ್ತು ದ್ವೀಪಗಳಿಗೆ ಹೊಸ ಮಾರ್ಗಗಳಿಗೆ ಆದ್ಯತೆ ನೀಡಲಾಗಿದೆ. ಅನುಮೋದಿತ ಮಾರ್ಗಗಳಿಗಾಗಿ 29 ಸೇವೆ ಸಲ್ಲಿಸಿದ್ದ, ಎಂಟು ಸೇವೆ ಸಲ್ಲಿಸದ, ಎರಡು ಹೆಲಿಪೋರ್ಟ್‌ಗಳು ಮತ್ತು ಒಂದು ವಾಟರ್ ಏರೋಡ್ರೋಮ್, ಎರಡು ಉಪಯೋಗಿಸದ ವಿಮಾನ ನಿಲ್ದಾಣಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಉಡಾನ್ ಯೋಜನೆಯಡಿ ಈವರೆಗೆ ಎಲ್ಲಾ 766 ಮಾರ್ಗಗಳನ್ನು ಮಂಜೂರು ಮಾಡಲಾಗಿದೆ.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪಾಧೀ, 'ಮೂರು ಸುತ್ತಿನ ಯಶಸ್ವಿ ಬಿಡ್ಡಿಂಗ್ ನಂತರ ನಾಗರಿಕ ವಿಮಾನಯಾನ ಸಚಿವಾಲಯ (ಮೊಕಾ) 2019 ರ ಡಿಸೆಂಬರ್‌ನಲ್ಲಿ ಉಡಾನ್‌ನ ನಾಲ್ಕನೇ ಸುತ್ತನ್ನು ಪ್ರಾರಂಭಿಸಿತು. ಗುಡ್ಡಗಾಡು ರಾಜ್ಯಗಳು ಮತ್ತು ದ್ವೀಪಗಳಿಗೆ, ಉಡಾನ್ 4 ರ ಅಡಿಯಲ್ಲಿ ಈ 78 ಮಾರ್ಗಗಳನ್ನು ನೀಡುವುದು ಕೇಂದ್ರ ಸರ್ಕಾರದ ಆ್ಯಕ್ಟ್ ಈಸ್ಟ್ ಪಾಲಿಸಿಗೆ ಅನುಗುಣವಾಗಿದೆ' ಎಂದರು.

'ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರವು ಈಗಾಗಲೇ ಅಭಿವೃದ್ಧಿಪಡಿಸಿದ್ದ ವಿಮಾನ ನಿಲ್ದಾಣಗಳಿಗೆ ಈ ಯೋಜನೆಯಡಿ ವಿಜಿಎಫ್ ಪ್ರಶಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉಡಾನ್ 4 ರ ಅಡಿಯಲ್ಲಿ ಹೆಲಿಕಾಪ್ಟರ್ ಮತ್ತು ಸೀಪ್ಲೇನ್‌ಗಳ ಕಾರ್ಯಾಚರಣೆಯನ್ನು ಸಹ ಸಂಯೋಜಿಸಲಾಗಿದೆ. ಪ್ರಾರಂಭದಿಂದಲೂ, ಮೋಕಾ ಕಾರ್ಯರೂಪಕ್ಕೆ ಬಂದಿದೆ. 45 ವಿಮಾನ ನಿಲ್ದಾಣಗಳು ಮತ್ತು 3 ಹೆಲಿಪೋರ್ಟ್‌ಗಳನ್ನು ಸಂಪರ್ಕಿಸಿರುವ 274 ಉಡಾನ್ ಮಾರ್ಗಗಳು' ಎಂದು ಪಾಧೀ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.