ರಾಂಚಿ(ಜಾರ್ಖಂಡ್): ಎಲ್ಲಾ ಮಸೀದಿಗಳು ಮತ್ತು ಮದರಸಾಗಳ ಮೇಲೆ ಒಟ್ಟಿಗೆ ದಾಳಿ ಮಾಡಿದರೆ ಎಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂದು ಜನರಿಗೆ ತಿಳಿಯುತ್ತದೆ ಎಂದು ಯೋಗ ಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ.
ರಾಂಚಿಯ ಪತಂಜಲಿ ಯೋಗಪೀಠದ ಆಚಾರ್ಯಕುಲಂ ಶಾಲೆಯಲ್ಲಿ ಮಕ್ಕಳನ್ನು ಭೇಟಿ ಮಾಡಲು ಬಂದ ಬಾಬಾ ರಾಮ್‌ದೇವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಹರಿದ್ವಾರ ನಂತರ ಪತಂಜಲಿ ಯೋಗಪೀಠ ರಾಂಚಿಯಲ್ಲಿ ಆಚಾರ್ಯಕುಲಂಗೆ ಅಡಿಪಾಯ ಹಾಕಿದೆ. ಇಲ್ಲಿ ಮಕ್ಕಳಿಗೆ ಆಧುನಿಕ ಶಿಕ್ಷಣದ ಜೊತೆಗೆ ವ್ಯಕ್ತಿತ್ವ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದಿದ್ದಾರೆ.
ಇದೇ ವೇಳೆ ಎಲ್ಲಾ ಮಸೀದಿಗಳು ಮತ್ತು ಮದರಸಾಗಳು, ದೇವಾಲಯಗಳು, ಆಚಾರ್ಯಕುಲಂ ಮತ್ತು ವೈದಿಕ ಶಾಲೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದರೆ ಎಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂದು ಜನರಿಗೆ ತಿಳಿಯುತ್ತದೆ ಎಂದು ರಾಮ್‌ದೇವ್ ವಿವಾದಿತ ಹೇಳಿಕೆ ನೀಡಿದ್ದಾರೆ.
'ಅಶ್ಲೀಲ ವಿಡಿಯೋಗಳನ್ನು ನೋಡುವ ವಿಷಯದಲ್ಲಿ, ಭಾರತದ ಯುವಕರು ಇಡೀ ಜಗತ್ತಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಇದು ಆತಂಕಕಾರಿ ವಿಷಯವಾಗಿದೆ. ಭಾರತವು ಅಶ್ಲೀಲ ವಿಡಿಯೋಗಳ ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ. ಈ ಬಗ್ಗೆ ಇಡೀ ಸಮಾಜದಲ್ಲಿ ಆಂದೋಲನ ನಡೆಸಬೇಕಾಗಿದೆ' ಎಂದು ಹೇಳಿದ್ದಾರೆ.