ETV Bharat / bharat

ಟ್ರಂಪ್​ಗಾಗಿ ಜುಬ್ಬ ಹೊಲಿದಿರುವ 90ರ ಇಳಿವಯಸ್ಸಿನ ಮಾಸ್ಟರ್​ ಟೈಲರ್​.. - ಅಧ್ಯಕ್ಷ ಟ್ರಂಪ್ ಭಾರತ ಪ್ರವಾಸ

ತಮ್ಮಿಷ್ಟದಂತೆ ಗಣ್ಯರಿಗಾಗಿ ಉಡುಪು ಹೊಲಿದು ಕಳಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅವರು ತಮಿಳುನಾಡಿನ ಮಾಜಿ ಸಿಎಂ ಕಾಮರಾಜ್, ಅಣ್ಣಾದುರೈ ಮತ್ತು ಮಾಜಿ ರಾಷ್ಟ್ರಪತಿ ವೆಂಕಟರಾಮನ್​​ರಿಗೂ ಹೀಗೆಯೇ ತಮ್ಮ ಕೈಯಾರೆ ಉಡುಪು ಹೊಲಿದು ಉಡುಗೊರೆಯಾಗಿ ನೀಡಿದ್ದರು.

A Pleasant Gift to Trump From Pollachi Master Tailor
ಟ್ರಂಪ್​ಗಾಗಿ ಕಮೀಜ್​ ಹೊಲಿದಿರುವ 90ರ ಇಳಿವಯಸ್ಸಿನ ಮಾಸ್ಟರ್​ ಟೈಲರ್​
author img

By

Published : Feb 24, 2020, 11:55 AM IST

Updated : Feb 24, 2020, 1:06 PM IST

ಪೊಲ್ಲಾಚಿ(ತಮಿಳುನಾಡು) : ಭಾರತ ಪ್ರವಾಸದಲ್ಲಿರುವ ಯುಎಸ್​ ಅಧ್ಯಕ್ಷ ಟ್ರಂಪ್​ರನ್ನು ಇಂದು ಸ್ವಾಗತಿಸುವುದರಿಂದ ಹಿಡಿದು ಅವರು ತೆರಳುವವರೆಗಿನ ಸಂಪೂರ್ಣ ಕಾರ್ಯಕ್ರಮಗಳ ಪಟ್ಟಿ ತಯಾರಿದೆ. ಅವರ ಊಟ, ವಸತಿ, ಎಲ್ಲಿಗೆ ಪ್ರಯಾಣ ಹೀಗೆ ಎಲ್ಲವೂ ಅಧಿಕೃತ ಪಟ್ಟಿ ಸೇರಿಕೊಂಡಿವೆ. ಟ್ರಂಪ್​ಗೆ ಉಡುಗೊರೆ ನೀಡುವ ಬಗ್ಗೆಯೂ ಸರ್ಕಾರ ನಿಗಾವಹಿಸಿದೆ. ಆದರೆ, ಇಲ್ಲೊಬ್ಬ ಅಜ್ಜ ದೊಡ್ಡಣ್ಣನಿಗಾಗಿ ಉಡುಗೊರೆಯೊಂದನ್ನು ತಯಾರಿಸಿ ಕಳಿಸಿದ್ದಾರೆ.

ಟ್ರಂಪ್​ಗಾಗಿ ಕಮೀಜ್​ ಹೊಲಿದಿರುವ 90ರ ಇಳಿವಯಸ್ಸಿನ ಮಾಸ್ಟರ್​ ಟೈಲರ್​

ಅಜ್ಜನಿಂದ ಟ್ರಂಪ್​ಗಾಗಿ ವಿಶೇಷ ಖಾದಿ ಜುಬ್ಬ : ಪೊಲ್ಲಾಚಿಯ ಈ 90ರ ಅಜ್ಜನ ಹೆಸರು ವಿಶ್ವನಾಥನ್. ಟೈಲರಿಂಗ್​ನಲ್ಲಿನ ಕರಕುಶಲತೆಯಿಂದಾಗಿ ಇವರನ್ನು ಮಾಸ್ಟರ್​ ಟೈಲರ್ ಎಂದೇ ಜನ ಗುರುತಿಸುತ್ತಾರೆ. ವಿಭಿನ್ನ ಶೈಲಿ ಮತ್ತು ಅಚ್ಚುಕಟ್ಟಾಗಿ ಹೊಲಿಯುವುದರಲ್ಲಿ ನಿಸ್ಸೀಮರು. ವಿಶ್ವನಾಥನ್ ಅವರಿಗೆ ಯುಎಸ್​ ಅಧ್ಯಕ್ಷ ಟ್ರಂಪ್​ ಮತ್ತು ಪ್ರಧಾನಿ ಮೋದಿ ಅವರು ಟಿವಿಯಲ್ಲಿ ನೋಡಿ ಮಾತ್ರವೇ ಗೊತ್ತು. ಟ್ರಂಪ್​ ಭಾರತ ಪ್ರವಾಸಕ್ಕೆಂದು ಬರುತ್ತಿರುವ ವಿಚಾರ ತಿಳಿದ ಅವರು ಟ್ರಂಪ್​ಗಾಗಿ ವಿಶೇಷ ಖಾದಿ ಕಮೀಜ್‌ ಹೊಲಿದು ಈಗಾಗಲೇ ಅದನ್ನು ಪಿಎಂ ಕಚೇರಿಗೆ ಕಳುಹಿಸಿದ್ದಾರೆ.

ಇತರೆ ಗಣ್ಯರಿಗೂ ಉಡುಪಿನ ಉಡುಗೊರೆ ಸಲ್ಲಿದೆ : ಇವರು ಹೀಗೆ ತಮ್ಮಿಷ್ಟದಂತೆ ಗಣ್ಯರಿಗಾಗಿ ಉಡುಪು ಹೊಲಿದು ಕಳಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅವರು ತಮಿಳುನಾಡಿನ ಮಾಜಿ ಸಿಎಂ ಕಾಮರಾಜ್, ಅಣ್ಣಾದುರೈ ಮತ್ತು ಮಾಜಿ ರಾಷ್ಟ್ರಪತಿ ವೆಂಕಟರಾಮನ್​ರಿಗೂ ಹೀಗೆಯೇ ತಮ್ಮ ಕೈಯಾರೆ ಉಡುಪು ಹೊಲಿದು ಉಡುಗೊರೆಯಾಗಿ ನೀಡಿದ್ದರು.

ಆಸಕ್ತರಿಗೆ ಉಚಿತ ಹೊಲಿಗೆ ತರಬೇತಿ ನೀಡ್ತಾರೆ ​: ಸದ್ಯ ಉಡುಗೊರೆಯನ್ನು ಈಗಾಗಲೇ ಪಿಎಂ ಕಚೇರಿಗೆ ಕಳಿಸಿರುವ ವಿಶ್ವನಾಥನ್​ ಅದು ಅಮೆರಿಕ ಅಧ್ಯಕ್ಷರ ಪಾಲಿಗೆ ಸೇರುತ್ತದೆ ಎಂಬ ನಿರೀಕ್ಷೆಯಿಂದಿದ್ದಾರೆ. ವಿಶ್ವನಾಥನ್​ ಅವರಿಗೆ ವಯಸ್ಸಾದರೂ ಅವರ ಕೆಲಸದ ಮೇಲಿನ ಪ್ರೀತಿಗೆ ವಯಸ್ಸಾಗಿಲ್ಲ. ಕುಳಿತು ವಿಶ್ರಾಂತಿ ಪಡೆಯಬೇಕಾದ ವಯಸ್ಸಿಲ್ಲೂ ಅವರು ಟೈಲರಿಂಗ್​ ಕಲಿಯಲು ಬಯಸುವ ಯುವ ಜನತೆಗೆ ತರಬೇತಿ ನೀಡುತ್ತಾರೆ ಎಂದರೆ ನಿಜಕ್ಕೂ ಮೆಚ್ಚುವಂಥದ್ದು.

Last Updated : Feb 24, 2020, 1:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.