ETV Bharat / state

ಜ.15ರೊಳಗೆ ಸಮುದಾಯ ಪ್ರಾಣಿಗಳ ಮಾರ್ಗಸೂಚಿ ಜಾರಿಗೆ ಬಿಬಿಎಂಪಿ ಸೂಚನೆ - COMMUNITY ANIMAL GUIDELINES

ಸಮುದಾಯ ಪ್ರಾಣಿಗಳ ಮಾರ್ಗಸೂಚಿಗಳನ್ನು ಪಶುಸಂಗೋಪನೆ ವಿಭಾಗದಲ್ಲಿ ಪಟ್ಟಿ ಮಾಡಲಾಗಿದ್ದು, ಡೌನ್​ಲೋಡ್​ ಮಾಡಿಕೊಳ್ಳಬಹುದು. ಜೊತೆಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ 1533ಗೆ ಕರೆ ಮಾಡಬಹುದು ಎಂದು ಬಿಬಿಎಂಪಿ ತಿಳಿಸಿದೆ.

BBMP Office
ಬಿಬಿಎಂಪಿ ಕಚೇರಿ (ETV Bharat)
author img

By ETV Bharat Karnataka Team

Published : 2 hours ago

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಜನವರಿ 15ರೊಳಗಾಗಿ ಸಮುದಾಯ ಪ್ರಾಣಿಗಳ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು ಎಂದು ಪಶು ಸಂಗೋಪನೆ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

"ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ -1960, ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳು - 2023 ಮತ್ತು ಹೆಚ್ಚುವರಿ ಉಚ್ಚ ನ್ಯಾಯಾಲಯದ ಪ್ರಕಾರ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳಿಗೆ ಅನ್ವಯವಾಗುವ, ಮಾಡಬೇಕಾದ ಮತ್ತು ಮಾಡಬಾರದಂತಹ ಅಂಶಗಳನ್ನು ಒಳಗೊಂಡಿರುವ ಮಾರ್ಗಸೂಚಿಗಳ ಸರಳೀಕೃತ ಆವೃತಿ ಪಾಲಿಕೆ ಹೊರಡಿಸಿದ್ದು, ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಕೂಡ ಅಳವಡಿಸಿದೆ" ಎಂದರು.

"ಈ ಅಂಶಗಳ ಆಧಾರದ ಮೇಲೆ, ಎಲ್ಲ ಸಂಸ್ಥೆಗಳು ಸಾರ್ವಜನಿಕ, ಖಾಸಗಿ ಕಚೇರಿಗಳು, ಟೆಕ್ ಪಾರ್ಕ್‌ಗಳು, ಶಾಲೆಗಳು ಮತ್ತು ಕಾಲೇಜುಗಳು, ಉದ್ಯಾನವನಗಳು, ಶಾಪಿಂಗ್ ಮಾಲ್‌ಗಳು, ವಸತಿ ಕಲ್ಯಾಣ ಸಂಘಗಳು ಮತ್ತು ಅಪಾರ್ಟ್‌ಮೆಂಟ್ ಮಾಲೀಕರ ಸಂಘಗಳು ಜುಲೈ 2024 ದಿನಾಂಕದ ಪಾಲಿಕೆ ಸಮುದಾಯ ಪ್ರಾಣಿಗಳ ಮಾರ್ಗಸೂಚಿಗಳನ್ನು 2025ರ ಜನವರಿ 15 ರೊಳಗೆ ಜಾರಿಗೆ ತರಲು ಈ ಮೂಲಕ ನಿರ್ದೇಶಿಸಲಾಗಿದೆ." ಎಂದು ಹೇಳಿದರು.

ನಂತರ ಬಿಬಿಎಂಪಿ ಪಶುಸಂಗೋಪನಾ ಇಲಾಖೆ ತಂಡಗಳ ಅನುಷ್ಠಾನದ ಸ್ಥಿತಿಯನ್ನು ಅನಿರೀಕ್ಷಿತ ಭೇಟಿ ಮೂಲಕ ಪರಿಶೀಲಿಸಲಿದ್ದು, ಅನುಷ್ಠಾನಗೊಳಿಸಲು ವಿಫಲವಾದ ಸಂಘ ಸಂಸ್ಥೆಗಳ ಮೇಲೂ ಕಾನೂನಾತ್ಮಕ ಕ್ರಮ ಕೈಗೊಳ್ಳಲಿದ್ದಾರೆ. ಈ ಮೂಲಕ ಪ್ರಾಣಿಗಳ ಸ್ಥಳಾಂತರ ಮತ್ತು ಪ್ರಾಣಿ ಪಾಲಕರ ಕಿರುಕುಳದ ಘಟನೆಗಳನ್ನು ಗಂಭೀರವಾಗಿ ನಿರ್ವಹಿಸಲು ವಲಯದ ಸಹಾಯ ನಿರ್ದೇಶಕರುಗಳಿಗೆ ಸೂಚನೆ ನೀಡಲಾಗಿದೆ. ಪಶು ಸಂಗೋಪನೆ ವಿಭಾಗದಲ್ಲಿ ಪಟ್ಟಿ ಮಾಡಲಾಗಿದೆ. ಮಾರ್ಗಸೂಚಿಗಳನ್ನು ಹಾಗೂ ದಾಖಲೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸ್ಪಷ್ಟೀಕರಣಕ್ಕಾಗಿ 1533ಗೆ ಕರೆ ಮಾಡಬಹುದು" ಎಂದು ಹೇಳಿದರು.

ಇದನ್ನು ಓದಿ: ಮೈಸೂರು: ಕಾಡಾನೆಗಳ ಜಾಡು ಹಿಡಿಯಲು ಅರಣ್ಯ ಇಲಾಖೆಯಿಂದ ಡ್ರೋನ್ ಕ್ಯಾಮರಾ ಬಳಕೆ

ಮಾರ್ಗಸೂಚಿಯ ಅಂಶಗಳು:

  • ಸಾಕುಪ್ರಾಣಿಗಳ ನಿರ್ವಹಣೆ, ಸಮುದಾಯದ ನಾಯಿಗಳಿಗೆ ಆಹಾರ ನೀಡುವ ಸ್ಥಳಗಳ ನಿಯೋಜನೆ, ಪ್ರಾಣಿಗಳ ಕಾನೂನುಗಳು ಮತ್ತು ಪ್ರಾಣಿಗಳ ಹಕ್ಕುಗಳ ಬಗ್ಗೆ ಮತ್ತು ನಾಯಿ ಕಡಿತ ನಿರ್ವಹಣೆ ಬಗ್ಗೆ ನಿವಾಸಿಗಳಿಗೆ ಶಿಕ್ಷಣ ನೀಡುವುದು.
  • ಕೆಲವು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು/ಅಪಾರ್ಟ್‌ಮೆಂಟ್ ಮಾಲೀಕರ ಅಸೋಸಿಯೇಷನ್​ಗಳು ಮತ್ತು ಸಂಸ್ಥೆಗಳು ಮಾರ್ಗಸೂಚಿ ಕಾರ್ಯಗತಗೊಳಿಸಲು ಪೂರ್ವಭಾವಿಯಾಗಿವೆ.
  • ಅನೇಕ ಸಂಘಗಳು ಮತ್ತು ಸಂಸ್ಥೆಗಳು ಮಾರ್ಗಸೂಚಿ ಕಾರ್ಯಗತಗೊಳಿಸಬೇಕಾಗಿದೆ. ಕಟ್ಟುನಿಟ್ಟಾದ ಸಾಕು ಪ್ರಾಣಿ ನಿಯಮಗಳು ಮತ್ತು ನಾಯಿ ಕಡಿತ ನಿರ್ವಹಣೆಗಾಗಿ ಇತ್ತೀಚಿನ ಹೈಕೋರ್ಟ್ ಆದೇಶವು ಈ ಮಾರ್ಗಸೂಚಿ ಅನುಷ್ಠಾನಗೊಳಿಸುವ ಅಗತ್ಯವನ್ನು ಮತ್ತೊಮ್ಮೆ ಹೇಳಿದೆ.
  • ಸಮುದಾಯದ ನಾಯಿಗಳು ಮತ್ತು ಬೆಕ್ಕುಗಳನ್ನು ಸ್ಥಳಾಂತರಿಸುವುದು, ಸಾಕು ಪ್ರಾಣಿಗಳನ್ನು ನಿಷೇಧಿಸುವುದು, ಸಮುದಾಯದ ಫೀಡರ್‌ಗಳಿಗೆ ಕಿರುಕುಳ ನೀಡುವ ಮೂಲಕ ಪ್ರಾಣಿಗಳ ಆಹಾರ ಮತ್ತು ನೀರನ್ನು ಕಸಿದುಕೊಳ್ಳುವುದು, ಸುಳ್ಳು ನಾಯಿ ಕಡಿತದ ಪ್ರಕರಣಗಳನ್ನು ದಾಖಲಿಸುವುದು, ಪ್ರಾಣಿಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತು ಮಾರ್ಗಸೂಚಿಗಳ ಹೊರತಾಗಿಯೂ ಪ್ರಾಣಿ ಕ್ರೌರ್ಯ ಸಂಬಂಧಿಸಿದ ವಿರಳ ಸಮಸ್ಯೆಗಳ ಮೇಲೆ ಬಿಬಿಎಂಪಿ ಹೆಚ್ಚು ಗಮನಹರಿಸುತ್ತಿದೆ.

ಇದನ್ನೂ ಓದಿ:VIDEO: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಯುವಕರು ಬಚಾವ್: ಲಾರಿ ಹತ್ತಿಸಿಕೊಂಡ ಚಾಲಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.