ETV Bharat / bharat

ಅಸ್ಸೋಂ, ಬಂಗಾಳದಲ್ಲಿಂದು ಪಿಎಂ ಮೋದಿ ಚುನಾವಣಾ ರ‍್ಯಾಲಿ

ಅಸ್ಸೋಂನ ಕರಿಮ್‌ಗಂಜ್ ಹಾಗೂ ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.

author img

By

Published : Mar 18, 2021, 9:10 AM IST

pm modi
ಅಸ್ಸೋಂ, ಬಂಗಾಳದಲ್ಲಿಂದು ಪಿಎಂ ಮೋದಿಯಿಂದ ಚುನಾವಣಾ ರ‍್ಯಾಲಿ

ನವದೆಹಲಿ: ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಇಂದು ಅಸ್ಸೋಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಅಸ್ಸೋಂನ ಕರಿಮ್‌ಗಂಜ್‌ನಲ್ಲಿ ನಡೆಯುವ ರ‍್ಯಾಲಿಯಲ್ಲಿ ಮಹಾನ್ ರಾಜ್ಯದ ಜನರ ನಡುವೆ ಇರಲು ಎದುರು ನೋಡುತ್ತಿದ್ದೇನೆ. ಕಳೆದ 5 ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಅಸ್ಸೋಂ ಸಾಕ್ಷಿಯಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಜನರ ಆಶೀರ್ವಾದವನ್ನು ಎನ್​ಡಿಎ ಬಯಸುತ್ತದೆ ಎಂದು ಪಿಎಂ ಮೋದಿ ಟ್ವೀಟ್​ ಮಾಡಿ ತಿಳಿಸಿದ್ದಾರೆ.

pm modi
ಪಿಎಂ ಮೋದಿ ಟ್ವೀಟ್

ಇದನ್ನೂ ಓದಿ: ಬಿಜೆಪಿ ಸಂಸದನ ಮನೆ ಮುಂದೆ ಬಾಂಬ್​ ದಾಳಿ.. ಟಿಎಂಸಿ ಗೂಂಡಾಗಳಿಂದ ಕೃತ್ಯ ಎಂದ ಅರ್ಜುನ್ ಸಿಂಗ್

ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿರುವೆ. ಬಂಗಾಳದ ನನ್ನ ಸಹೋದರಿಯರು ಮತ್ತು ಸಹೋದರರ ಜೊತೆ ಬೆರೆಯುವ ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ರಾಜ್ಯಾದ್ಯಂತ ಬದಲಾವಣೆಯ ಕೋರಿಕೆ ಇದೆ. ಬಿಜೆಪಿಯ ಉತ್ತಮ ಆಡಳಿತದ ಕಾರ್ಯಸೂಚಿಯ ದನಿ ಜನರಲ್ಲಿ ಮೂಡುತ್ತಿದೆ ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 294 ಸ್ಥಾನಗಳಿಗೆ ಎಂಟು ಹಂತಗಳಲ್ಲಿ ಮಾರ್ಚ್ 27 ಮತ್ತು ಏಪ್ರಿಲ್ 29 ರವರೆಗೆ ವಿಧಾನಸಭಾ ಚುನಾವಣೆ ನಡೆಯಲಿದೆ. ಬಂಗಾಳ ಸಿಎಂ ಹಾಗೂ ಟಿಎಂಸಿ ಮಮತಾ ಬ್ಯಾನರ್ಜಿ ವ್ಹೀಲ್​ಚೇರ್​ ಮೂಲಕವೇ ರ‍್ಯಾಲಿಗಳನ್ನು ಮುಂದುವರೆಸಿದ್ದು, ಇತ್ತ ಬಿಜೆಪಿ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.