ಸಿದ್ದಿಪೇಟ್, ತೆಲಂಗಾಣ: ರೈತನೋರ್ವ ತನ್ನ ಪಾಳು ಬಿದ್ದ ಮನೆಯಲ್ಲೇ ಚಿತೆಯ ರೀತಿ ಕಟ್ಟಿಗೆ ಜೋಡಿಸಿ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿದ್ದಿಪೇಟ್ ಜಿಲ್ಲೆಯ ವೇಮುಲಘಾಟ್ ಎಂಬ ಗ್ರಾಮದಲ್ಲಿ ನಡೆದಿದ್ದು, ವೃದ್ಧನನ್ನು 70 ವರ್ಷದ ಮಲ್ಲಾರೆಡ್ಡಿ ಎಂದು ಗುರುತಿಸಲಾಗಿದೆ.
ಸ್ಥಳೀಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ದೇಹ ಪೂರ್ತಿ ಸುಟ್ಟು ಬೂದಿಯಾಗಿದೆ. ಉಳಿದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಪೊಲೀಸರು ಸ್ಥಳೀಯರನ್ನು ವಿಚಾರಣೆಗೆ ಒಳಪಡಿಸಿದ್ದು, ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ವೃದ್ಧನ ಆತ್ಮಹತ್ಯೆಗೆ ಶಾಸಕರ ಪ್ರತಿಕ್ರಿಯೆ
ವಿಷಯ ತಿಳಿಯುತ್ತಿದ್ದಂತೆ ಸಿದ್ದಿಪೇಟ್ ಆಸ್ಪತ್ರೆಗೆ ಬಂದ ದುಬ್ಬಾಕ್ ಕ್ಷೇತ್ರದ ಬಿಜೆಪಿ ಶಾಸಕ ರಘುನಂದನ್ ರಾವ್ ರೈತನ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಸರ್ಕಾರದ ಕಾಮಗಾರಿಗಳ ಕಾರಣದಿಂದ ಮನೆಯನ್ನು ಧ್ವಂಸ ಮಾಡಲಾಗಿದ್ದು, ಈ ಕಾರಣದಿಂದಲೇ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ವಿಶ್ವದ ಮೊದಲ ಡಿಎನ್ಎ ಲಸಿಕೆ 'ಜೈಕೋವ್-ಡಿ' ತುರ್ತುಬಳಕೆ!
ಟಿಆರ್ಎಸ್ ಪಕ್ಷದ ನಾಯಕರು ರೈತನ ಆತ್ಮಹತ್ಯೆ ಕುರಿತಂತೆ ಮಾತನಾಡುತ್ತಿಲ್ಲ. ಕುರ್ಚಿ, ಎಸಿಗಳಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ ರೈತರ ಸಂಕಷ್ಟವನ್ನು ಯಾರೂ ಆಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.