ಪುಲ್ವಾಮಾ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಪುಲ್ವಾಮಾ ಹಾಗೂ ಅವಂತಿಪುರ್ ಪ್ರದೇಶದಲ್ಲಿ ಭಾರತೀಯ ಯೋಧರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಕಾಳಗಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.
ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್ ಸೆಕ್ಟರ್ನ ಮಂಡೂರ್ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್ಕೌಂಟರ್ ನಡೆದಿದ್ದು, ಈ ವೇಳೆ ಮೂವರು ಉಗ್ರರನ್ನು ಸೇನಾಪಡೆಗಳು ಹೊಡೆದುರುಳಿಸಿವೆ. ಇದಕ್ಕೆ ಸಂಬಂಧಿಸಿದಂತೆ ಐಜಿಪಿ ಮಾಹಿತಿ ನೀಡಿದ್ದು, ಆರೀಫ್ ಬಸೀರ್, ವಾರೀಸ್ ಹಸನ್ ಹಾಗೂ ಆಸಿಫ್ ಉಲ್ ಹಕ್ ಸತ್ತ ಉಗ್ರರು ಎಂದು ಗುರುತಿಸಲಾಗಿದೆ. ಕಳೆದ ಅನೇಕ ವರ್ಷಗಳಿಂದ ಇವರು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ.
-
Jammu and Kashmir: Three terrorists killed in the ongoing operation at Mandoora Tral area of Awantipora.
— ANI (@ANI) January 29, 2021 " class="align-text-top noRightClick twitterSection" data="
(visuals deferred by unspecified time) pic.twitter.com/fpM5KGyvJP
">Jammu and Kashmir: Three terrorists killed in the ongoing operation at Mandoora Tral area of Awantipora.
— ANI (@ANI) January 29, 2021
(visuals deferred by unspecified time) pic.twitter.com/fpM5KGyvJPJammu and Kashmir: Three terrorists killed in the ongoing operation at Mandoora Tral area of Awantipora.
— ANI (@ANI) January 29, 2021
(visuals deferred by unspecified time) pic.twitter.com/fpM5KGyvJP
ಇದನ್ನೂ ಓದಿ: ಕೆಂಪುಕೋಟೆ ಪ್ರವೇಶಿಸಲು ಅವಕಾಶ ನೀಡಿದ್ಯಾರು? ಗೃಹ ಸಚಿವರನ್ನು ಕೇಳಿ: ರಾಹುಲ್ ಗಾಂಧಿ
ಘಟನಾ ಸ್ಥಳದಲ್ಲಿ ಯೋಧರು ಹಾಗೂ ಸ್ಥಳೀಯ ಪೊಲೀಸರು ಬೀಡು ಬಿಟ್ಟಿದ್ದು, ಶೋಧ ಕಾರ್ಯ ಮುಂದುವರೆಸುತ್ತಿರುವುದಾಗಿ ತಿಳಿದು ಬಂದಿದೆ.