ಕರ್ನಾಟಕ

karnataka

ETV Bharat / snippets

ನವಲಗುಂದ-ಅಣ್ಣಿಗೇರಿ ಭಾಗದಲ್ಲಿ ವಿದ್ಯುತ್ ವ್ಯತ್ಯಯ

By ETV Bharat Karnataka Team

Published : 6 hours ago

POWER CUT
ಹೆಸ್ಕಾಂ ಪ್ರಕಟಣೆ (ETV Bharat)

ಹುಬ್ಬಳ್ಳಿ:ನವಲಗುಂದದ 110 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಅಕ್ಟೋಬರ್ 16ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನವಲಗುಂದ, ಅಳಗವಾಡಿ, ಯಮನೂರ, ಶಾನವಾಡ, ಕುಮಾರಕೊಪ್ಪ, ಇಬ್ರಾಹೀಂಪುರ, ಕಡದಳ್ಳಿ, ಅಮರಗೋಳ, ಸೊಟಕನಾಳ, ಶಲವಡಿ, ಬಳ್ಳೂರು, ಚನ್ನಮ್ಮ ಎಂಬಲ್ಲಿ ನೀರು ಪೂರೈಕೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಅ.15ರಂದು ಹಲವೆಡೆ ವಿದ್ಯುತ್ ವ್ಯತ್ಯಯ:ಅಣ್ಣಿಗೇರಿಯ 110 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಾಗೂ ವಿದ್ಯುತ್ ಪರಿವರ್ತಕ ಅಳವಡಿಕೆ ಮತ್ತು ಸ್ವಿಚ್ ಗೇರ್ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹಾಗಾಗಿ ಅಕ್ಟೋಬರ್ 15ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಲವಡಿ, ಭದ್ರಾಪುರ, ಕೋಳಿವಾಡ, ಅಣ್ಣಿಗೇರಿ, ಹಳ್ಳಿಕೇರಿ, ಮಜ್ಜಿಗುಡ್ಡ, ಕೊಂಡಿಕೊಪ್ಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಪ್ರಕಟಣೆ ಮೂಲಕ ಮನವಿ ಮಾಡಿದೆ.

ABOUT THE AUTHOR

...view details