ETV Bharat / state

ಕೆಲವು ರಾಜಕೀಯ ಮುಖಂಡರು ಲೈನ್​ನಲ್ಲಿ ನಿಲ್ಲುವ ಕಾಲ ಬರುತ್ತದೆ: ಹೆಚ್.ಡಿ.ರೇವಣ್ಣ

ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ. ಕೆಲವೇ ದಿನಗಳಲ್ಲಿ ರಾಜಕೀಯ ಮುಖಂಡರು ಲೈನ್​ನಲ್ಲಿ ನಿಲ್ಲುವ ಕಾಲ ಬರುತ್ತದೆ ಎಂದು ಹೇಳಿದ್ದಾರೆ.

author img

By ETV Bharat Karnataka Team

Published : 2 hours ago

h-d-revanna
ಹೆಚ್.ಡಿ.ರೇವಣ್ಣ (ETV Bharat)

ಹಾಸನ: ಕೆಲವೇ ದಿನಗಳಲ್ಲಿ ಕೆಲವು ರಾಜಕೀಯ ಮುಖಂಡರು ಲೈನ್​ನಲ್ಲಿ ನಿಲ್ಲುವ ಕಾಲ ಬರುತ್ತದೆ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಗರಂ ಆದರು.

ಹೊಳೆನರಸೀಪುರ ತಾಲೂಕಿನ ಬಿದರಕ್ಕ ಕೊಳಲು ಗೋಪಾಲಕೃಷ್ಣ ದೇಗುಲಕ್ಕೆ ಅವರಿಂದು ಕುಟುಂಬಸಮೇತ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿ, ಪೊಲೀಸ್ ಅಧಿಕಾರಿಗಳನ್ನಿಟ್ಟುಕೊಂಡು ನನ್ನನ್ನು ಹೆದರಿಸಬೇಕು ಎಂದುಕೊಂಡಿದ್ದರೆ ಅದು ಕನಸು ಎಂದರು.

ಮುಂದೆ ಒಂದಲ್ಲೊಂದು ದಿನ ರಿವರ್ಸ್ ಹೊಡೆಯುವ ಕಾಲ ಬರುತ್ತದೆ. ಇವತ್ತು ಯಾರು ಯಾರು ಏನೇನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ನಮ್ಮ ತಂದೆ-ತಾಯಿ ಕಣ್ಣೀರು ಹಾಕುವಂತೆ ಮಾಡಿದವರು ಮುಂದೊಂದಿನ ನೋವು ಅನುಭವಿಸುತ್ತಾರೆ. ಕೆಲವೇ ದಿನಗಳಲ್ಲಿ ಕೆಲವು ರಾಜಕೀಯ ಮುಖಂಡರು ಲೈನ್​ನಲ್ಲಿ ನಿಲ್ಲುವ ಕಾಲ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರವನ್ನು ನಲವತ್ತು ಪರ್ಸೆಂಟ್ ಅನ್ನೋ ಕಾಂಗ್ರೆಸ್ ಸರ್ಕಾರ, ಈ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯ 400 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ. ಬಿಲ್ ತಗೊಬೇಕಾದರೆ 40% ಅಂತ ಇವರೇ ಕೇಳ್ತಾರೆ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು. ಮಾನ, ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಕೇಸ್ ಮತ್ತೆ ಓಪನ್ ಮಾಡಿರುವ ಕುರಿತು ಮಾತನಾಡಿದ ಅವರು, ಕುಮಾರಣ್ಣರ ವಿರುದ್ಧ ಹತ್ತು ವರ್ಷದ ಕೇಸ್ ಇವತ್ತು ಮತ್ತೆ ಓಪನ್ ಮಾಡಿಸಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಅದನ್ನು ಕ್ಲೋಸ್ ಮಾಡಿಸಬಹುದಿತ್ತು. ಆ ಪಾಪದ ಕೆಲಸವನ್ನು ಅವರು ಮಾಡಲಿಲ್ಲ. ಕುಮಾರಣ್ಣ ನಲವತ್ತು ಇಂಜಿನಿಯರ್​ಗಳಿಗೆ ಪ್ರಮೋಷನ್ ಕೊಟ್ಟಿದ್ದಾರೆ. ಈ ರಾಜ್ಯಕ್ಕೆ ಅವರ ಕೊಡುಗೆ ತುಂಬಾ ಇದೆ. ಯಾರಾದರೂ ಒಬ್ಬರು ಇಂಜಿನಿಯರ್ ಕುಮಾರಣ್ಣ, ರೇವಣ್ಣ ಐದು ರೂಪಾಯಿ ತಗೊಂಡಿದ್ದಾರೆ ಎಂದು ಹೇಳಿದರೆ ನಾನು ರಾಜಕೀಯ ಬಿಟ್ಟು ಹೋಗುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಎದುರಾಳಿಗಳ ಕುತಂತ್ರಕ್ಕೆ ಬಡ್ಡಿ ಸಮೇತ ತೀರಿಸುತ್ತೇನೆ: ಹೆಚ್.​ಡಿ.ರೇವಣ್ಣ - H D Revanna

ETV Bharat Logo

Copyright © 2024 Ushodaya Enterprises Pvt. Ltd., All Rights Reserved.