ETV Bharat / bharat

ಭಾರತ-ಕೆನಡಾ ಸಂಘರ್ಷ: ರಾಜತಾಂತ್ರಿಕರ ಹೊರಹಾಕುವ ನಿರ್ಧಾರ ಕೈಗೊಂಡ ಎರಡೂ ದೇಶಗಳು

ಭಾರತದಲ್ಲಿರುವ ಕೆನಡಾದ 6 ಮಂದಿ ರಾಜತಾಂತ್ರಿಕರನ್ನು ಹೊರಹಾಕುವ ನಿರ್ಧಾರ ಕೈಗೊಂಡ ಭಾರತ ಅ.19ರ ರಾತ್ರಿ 11.59ರೊಳಗೆ ದೇಶ ಬಿಡುವಂತೆ ಸೂಚನೆ ನೀಡಿದೆ. ಇನ್ನೊಂದೆಡೆ, ಕೆನಡಾ ಕೂಡಾ ಭಾರತದ 6 ರಾಜತಾಂತ್ರಿಕರನ್ನು ಹೊರಕಳುಹಿಸುವ ನಿರ್ಧಾರ ಕೈಗೊಂಡಿದೆ.

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ಪ್ರಧಾನಿ ನರೇಂದ್ರ ಮೋದಿ
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ಭಾರತ ಪ್ರಧಾನಿ ನರೇಂದ್ರ ಮೋದಿ (ETV Bharat)
author img

By ETV Bharat Karnataka Team

Published : Oct 14, 2024, 10:53 PM IST

Updated : Oct 14, 2024, 11:01 PM IST

ನವದೆಹಲಿ/ಒಟ್ಟಾವಾ: ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದ ವಿಚಾರವಾಗಿ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಸಂಘರ್ಷ ಮತ್ತೆ ಭುಗಿಲೆದ್ದಿದೆ. ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಭಾರತದಲ್ಲಿರುವ ಕೆನಡಾದ 6 ರಾಜತಾಂತ್ರಿಕ ಅಧಿಕಾರಿಗಳನ್ನು ದೇಶದಿಂದ ಹೊರಕಳುಹಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಇದೇ ವೇಳೆ, ಕೆನಡಾ ಸರ್ಕಾರ ಕೂಡಾ ಭಾರತದ 6 ಮಂದಿ ರಾಜತಾಂತ್ರಿಕ ಅಧಿಕಾರಿಗಳನ್ನು ಹೊರಹಾಕುವ ತೀರ್ಮಾನ ಪ್ರಕಟಿಸಿದೆ.

ದೇಶ ಬಿಟ್ಟು ಹೋಗುವಂತೆ ಭಾರತ ಕಟ್ಟಪ್ಪಣೆ: ಭಾರತದಲ್ಲಿ ಕೆನಡಾದ ರಾಜತಾಂತ್ರಿಕರು ಅಕ್ಟೋಬರ್ 19ಕ್ಕೆ ಮುನ್ನ ಅಥವಾ ಅಂದು ರಾತ್ರಿ 11.59ರೊಳಗೆ ದೇಶ ಬಿಡುವಂತೆ ಕೇಂದ್ರ ಸರ್ಕಾರ ಕಟ್ಟಪ್ಪಣೆ ಹೊರಡಿಸಿದೆ. ಅಷ್ಟೇ ಅಲ್ಲದೇ, ಕೆನಡಾದಲ್ಲಿರುವ ತನ್ನ ಹೈಕಷಮಿನರ್ ಮತ್ತು ಇತರೆ ಅಧಿಕಾರಿಗಳನ್ನು ವಾಪಸ್‌ ಕರೆಸಿಕೊಳ್ಳಲು ನಿರ್ಧರಿಸಿದೆ. ಪ್ರಧಾನಿ ಜಸ್ಟಿನ್ ಟ್ರೂಡೋ ನೇತೃತ್ವದ ಕೆನಡಾ ಸರ್ಕಾರ ಭಾರತದ ವಿರುದ್ಧ ಉಗ್ರವಾದವನ್ನು ಪ್ರೋತ್ಸಾಹಿಸುತ್ತಿದೆ. ಹೀಗಾಗಿ ಇದಕ್ಕೆ ಪ್ರತ್ಯುತ್ತರವಾಗಿ ಮುಂದಿನ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ಭಾರತ ಹೊಂದಿದೆ ಎಂದು ಖಾರವಾಗಿ ತಿಳಿಸಿದೆ.

ಭಾರತದ ರಾಜತಾಂತ್ರಿಕರ ವಿರುದ್ಧ ಕೆನಡಾ ಕ್ರಮ: ಇನ್ನೊಂದೆಡೆ, ಕೆನಡಾ ಕೂಡಾ ತಕ್ಷಣವೇ ಕ್ರಮಕ್ಕೆ ಮುಂದಾಗಿದ್ದು, ಭಾರತದ ಆರು ಮಂದಿ ರಾಜತಾಂತ್ರಿಕರನ್ನು ದೇಶದಿಂದ ಹೊರ ಹಾಕುವ ನಿರ್ಧಾರವನ್ನು ಪ್ರಕಟಿಸಿತು. ಈ ಕುರಿತು ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿ ಪ್ರಕಟಿಸಿದೆ. ಭಾರತದ ರಾಜತಾಂತ್ರಿಕರು ಭಾರತದ ಪರವಾಗಿ 'ಹಿಂಸೆಗೆ ಪ್ರಚೋದನೆ' ನೀಡುವ ಕೆಲಸದಲ್ಲಿ ನಿರತರಾಗಿರುವ ಬಗ್ಗೆ ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದೆ.

ಕೆನಡಾ ನಡೆಗೆ ಭಾರತದ ತೀವ್ರ ಆಕ್ಷೇಪ: ಇದಕ್ಕೂ ಮುನ್ನ, ಕೇಂದ್ರ ಸರ್ಕಾರ ಇಂದು ನವದೆಹಲಿಯಲ್ಲಿರುವ ಕೆನಡಾದ ರಾಜತಾಂತ್ರಿಕ ಅಧಿಕಾರಿ ಸ್ಟಿವರ್ಟ್ ವೀಲರ್ ಅವರನ್ನು ಕರೆಸಿಕೊಂಡು, ಕೆನಡಾದಲ್ಲಿ ಭಾರತದ ಹೈಕಮಿಷನರ್ ಮತ್ತು ಇತರೆ ರಾಜತಾಂತ್ರಿಕರ ಮೇಲೆ ಆಧಾರರಹಿತವಾಗಿ ಗುರಿ ಮಾಡುತ್ತಿರುವುದು ಸ್ವೀಕಾರಾರ್ಹವಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವೇನು?: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಎಂಬಾತ ಕೊಲೆ ಪ್ರಕರಣದಲ್ಲಿ ಭಾರತದ ಕೈವಾಡ ಇದೆ ಎಂದು ಕಳೆದ ವರ್ಷದ ಕೆನಡಾ ಸಂಸತ್ತಿನಲ್ಲಿ ಪ್ರಧಾನಿ ಜಸ್ಟಿನ್ ಟ್ರೂಡೊ ಗಂಭೀರ ಆರೋಪ ಮಾಡಿದ್ದರು. ಇದಾದ ನಂತರ ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧ ಹಳಸಿದೆ. ಈ ಆರೋಪಗಳನ್ನು ಸಾರಾಸಗಟಾಗಿ ಅಲ್ಲಗಳೆದಿರುವ ಭಾರತ, 'ಪ್ರಚೋದಿತ' ಮತ್ತ 'ಅಸಂಬಂಧ' ಎಂದು ಹೇಳಿತ್ತು. ಜೊತೆಗೆ, ಭಾರತ ವಿರೋಧಿ ಶಕ್ತಿಗಳಿಗೆ ಕೆನಡಾ ಆಶ್ರಯ ನೀಡುತ್ತಿದೆ ಎಂದು ಗಂಭೀರ ಆರೋಪ ಮಾಡಿತ್ತು. ಹರ್ದೀಪ್ ಸಿಂಗ್ ನಿಜ್ಜರ್ ಎಂಬಾತನನ್ನು 'ಉಗ್ರ' ಎಂದು 2020ರಲ್ಲಿ ಭಾರತದ ರಾಷ್ಟ್ರೀಯ ತನಿಖಾ ದಳ (NIA) ಘೋಷಿಸಿದೆ. ಈತನನ್ನು ಕಳೆದ ಜೂನ್‌ನಲ್ಲಿ ಕೆನಡಾದ ಸರ್ರೆ ಎಂಬಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಇದನ್ನೂ ಓದಿ: 'ಕೆನಡಾ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ': ಹೈಕಮಿಷನರ್ ವಾಪಸ್ ಕರೆಸಿಕೊಳ್ಳಲು ಭಾರತ ಮಹತ್ವದ ನಿರ್ಧಾರ

Last Updated : Oct 14, 2024, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.