ETV Bharat / bharat

'ಕೆನಡಾ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ': ಹೈಕಮಿಷನರ್ ವಾಪಸ್ ಕರೆಸಿಕೊಳ್ಳಲು ಭಾರತ ಮಹತ್ವದ ನಿರ್ಧಾರ

ಭಾರತೀಯ ಹೈಕಮಿಷನರ್, ರಾಜತಾಂತ್ರಿಕರು ಮತ್ತು ಅಧಿಕಾರಿಗಳಿಗೆ ಕೆನಡಾದಲ್ಲಿ ಸೂಕ್ತ ರಕ್ಷಣೆ ಇಲ್ಲ ಎಂದಿರುವ ವಿದೇಶಾಂಗ ಸಚಿವಾಲಯ, ಅವರನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದೆ.

ಸಂಗ್ರಹ ಚಿತ್ರ
ಭಾರತ ಮತ್ತು ಕೆನಡಾ ದೇಶಗಳ ರಾಷ್ಟ್ರಧ್ವಜ (ಸಂಗ್ರಹ ಚಿತ್ರ) (ETV Bharat)
author img

By PTI

Published : Oct 14, 2024, 9:48 PM IST

Updated : Oct 14, 2024, 9:55 PM IST

ನವದೆಹಲಿ: ಕೆನಡಾದಲ್ಲಿರುವ ಭಾರತೀಯ ಹೈಕಮಿಷನರ್, ಇತರೆ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ ಸಂಬಂಧ ಭಾರತೀಯ ಹೈಕಮಿಷನರ್​ ಅವರನ್ನು ತನಿಖೆಗೆ ಒಳಪಡಿಸಲು ಮುಂದಾಗಿರುವ ಕೆನಡಾದ ನಡೆಯನ್ನು ಖಂಡಿಸಿರುವ ಭಾರತ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಭಾರತದಲ್ಲಿರುವ ಕೆನಡಾ ರಾಜತಾಂತ್ರಿಕರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಮನ್ಸ್ ಜಾರಿ ಮಾಡಿ, ಆಧಾರರಹಿತವಾಗಿ ಭಾರತೀಯ ಹೈಕಮಿಷನರ್, ಇತರ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿರುವುದು ಸರಿಯಲ್ಲ ಎಂದು ತಿಳಿಸಿದೆ.

ಕೆನಡಾ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ: ಉಗ್ರವಾದ ಮತ್ತು ಹಿಂಸಾಚಾರದ ವಾತಾವರಣದಲ್ಲಿ ಟ್ರೂಡೊ ಸರ್ಕಾರದ ಕ್ರಮಗಳು ಭಾರತೀಯ ಹೈಕಮಿಷನರ್ ಮತ್ತು ಅಧಿಕಾರಿಗಳ ಸುರಕ್ಷತೆಗೆ ಅಪಾಯ ಉಂಟುಮಾಡಿದೆ. ಕೆನಡಾ ಸರ್ಕಾರ ಅವರ ಭದ್ರತೆಯನ್ನು ಖಾತ್ರಿಪಡಿಸುತ್ತದೆ ಎಂಬ ಬಗ್ಗೆ ನಮಗೆ ನಂಬಿಕೆಯಿಲ್ಲ. ಆದ್ದರಿಂದ, ಭಾರತ ಸರ್ಕಾರವು ಹೈಕಮಿಷನರ್, ಇತರ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ವಾಪಸ್​ ಕರೆಸಿಕೊಳ್ಳಲು ನಿರ್ಧರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.

ಭಾರತದ ವಿರುದ್ಧದ ಉಗ್ರವಾದ, ಹಿಂಸಾಚಾರ ಮತ್ತು ಪ್ರತ್ಯೇಕತಾವಾದಕ್ಕೆ ಟ್ರುಡೊ ಸರ್ಕಾರದ ಬೆಂಬಲಕ್ಕೆ ಪ್ರತಿಯಾಗಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಭಾರತ ಹೊಂದಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ರಾಜಕೀಯ ಗಲಭೆ, ಭಯೋತ್ಪಾದನೆ ತಡೆಗೆ ಪಾಕಿಸ್ತಾನ ಹೆಣಗಾಟ: ಎಸ್​ಸಿಒ ಶೃಂಗಸಭೆ ನಡೆಸಲೂ ಒದ್ದಾಟ!

Last Updated : Oct 14, 2024, 9:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.